ಬೀದರ್: ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ

By Girish GoudarFirst Published Jan 11, 2024, 10:01 AM IST
Highlights

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ರಾಜಗೀರೆ ಕೊಲೆಯಾಗಿದೆ. ಮಲ್ಲಿಕಾರ್ಜುನ ರಾಜಗೀರೆ ಮಗ ನೀಲಕಂಠ ರಾಕಗೀರೆಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಬೀದರ್(ಜ.11):  ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಬೀದರ್ ತಾಲೂಕಿನ ನಿರ್ಣಾ ವಾಡಿಯಲ್ಲಿ ನಡೆದಿದೆ. ಮಲ್ಲಿಕಾರ್ಜುನ ರಾಜಗೀರೆ(48) ಕೊಲೆಯಾದವರಾಗಿದ್ದಾರೆ. 

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ರಾಜಗೀರೆ ಕೊಲೆಯಾಗಿದೆ ಎಂದು ತಿಳಿದು ಬಂದಿದೆ. ಮಲ್ಲಿಕಾರ್ಜುನ ರಾಜಗೀರೆ ಮಗ ನೀಲಕಂಠ ರಾಕಗೀರೆಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  ಜಮೀನು ಸರ್ವೇ ಸಂಬಂಧ ಗಲಾಟೆ ನಡೆದಿದೆ. ಅಧಿಕಾರಿಗಳು ಸರ್ವೇ ಮಾಡಿ ಹೋದ ಬಳಿ ಫಿನಿಷಿಂಗ್ ಮಾಡಿಕೊಳ್ಳುವ ಸಂಬಂಧ ಗಲಾಟೆ ಆರಂಭವಾಗಿದೆ. 

ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ್ದ ಪಾಪಿ..! ಗಂಡನಿಗೆ ಡೌಟ್ ಬರ್ತಿದ್ದಂತೆ ಸ್ಕೆಚ್ ಹಾಕೇಬಿಟ್ರು..!

ಲಿಂಗರಾಜ ನಿಂಬೂರೆ, ಜಗದೀಶ್ ನಿಂಬೂರೆ, ವಿರಶೆಟ್ಟಿ ನಿಂಬೂರೆ, ಧನರಾಜ್ ನಿಂಬೂರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಕೊಡ್ಡಿ, ಕತ್ತಿ, ಲಾಠಿಯಿಂದ ವಿವಿಧ ಬಗೆಯ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ಮನ್ನಾಏಖೇಳಿಯ ಅಂಬೇಡ್ಕರ್ ವೃತ್ತದಲ್ಲಿ ಮೃತ ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟದಿಂದ ಧರಣಿ ನಡೆಸಲಾಗಿದೆ. ಈ ಬಗ್ಗೆ ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!