ವಿಶೇಷ ಸೆಲ್‌ನಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲೆ  ಅತ್ಯಾಚಾರ ಎಸಗಿದ ಇನ್ಸ್‌ಪೆಕ್ಟರ್

By Suvarna NewsFirst Published Aug 8, 2021, 4:12 PM IST
Highlights

* ರಾಷ್ಟ್ರ ರಾಜಧಾನಿಯಲ್ಲಿ ಆರಕ್ಷಕನೇ ಭಕ್ಷಕನಾದ
* ಮಹಿಳಾ ಕಾನ್ಸ್‌ಟೇಬಲ್‌ ಮೇಲೆ  ಇನ್ಸ್ ಪೆಕ್ಟರ್ ಅತ್ಯಾಚಾರ
*  ರೇಪ್ ಎಸಗಿ ಪೋಟೋ ತೆಗೆದುಕೊಂಡ ಕಿರಾತಕ
* ಸಂತ್ರಸ್ತೆಯ ಬ್ಲಾಕ್ ಮೇಲ್ ಮಾಡುತ್ತಿದ್ದ

ನವದೆಹಲಿ(ಆ.  08) ರಾಷ್ಟ್ರ ರಾಜಧಾನಿ ದೆಹಲಿಯಿಂದ ಆರಕ್ಷಕನೇ ಭಕ್ಷಕನಾದ ಪ್ರಕರಣ ವರದಿಯಾಗಿದೆ. ದೆಹಲಿಯ  ಮುನ್ರಿಕಾ ಪ್ರದೇಶದಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲೆ ಠಾಣೆಯ ವಿಶೇಷ ಸೆಲ್ ನಲ್ಲಿ ಸಬ್ ಇನ್ಸ್‌ಪೆಕ್ಟರ್ ಅತ್ಯಾಚಾರ ಎಸಗಿದ್ದಾನೆ.

ಅತ್ಯಾಚಾರ ಎಸಗಿದ್ದೂ ಅಲ್ಲದೇ ಮಹಿಳಾ ಪೇದೆಯ ಪೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಶುರು ಹಚ್ಚಿಕೊಂಡಿದ್ದ.  ಒಂಭತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಸಂದರ್ಭದಲ್ಲಿ ಈ ಪ್ರಕರಣವೂ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿ  ವಿವಸ್ತ್ರಗೊಳಿಸಿ ಬ್ಲಾಕ್ ಮೇಲ್ ಮಾಡಿದ ಕಿರಾತಕ

ಪ್ರಕರಣವೊಂದರ ವಿಚಾರಣೆ ಸಂಬಂಧ ಇಬ್ಬರ ಭೇಟಿಯಾಗಿತ್ತು. ಒಂದು ದಿನ ಕೆಲಸವಿದೆ ಎಂದು ಮಹಿಳಾ ಪೇದೆಯನ್ನು ಎಸ್ ಐ ಕರೆಸಿಕೊಂಡಿದ್ದಾನೆ.  ಈ ವೇಳೆ ಮಹಿಳೆಗೆ ಮತ್ತು ಬರುವ ಪಾನೀಯ ಕುಡಿಸಿ ರೇಪ್ ಮಾಡಿ ಪೋಟೋ ತೆಗೆದುಕೊಂಡಿದ್ದಾನೆ.

ನನ್ನ ಮೇಲೆ ದೌರ್ಜನ್ಯ ಎಸಗಿದ್ದೂ ಅಲ್ಲದೇ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಪೇದೆ ದೂರು ದಾಖಲಿಸಿದ್ದಾಳೆ. ಸಿಆರ್ ಪಿಸಿ  164  ಅಡಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.  ಆದರೆ ಇಲ್ಲಿಯವರೆಗೆ ಆರೋಪಿಯನ್ನು ಬಂಧಿಸಲಾಗಿಲ್ಲ. ದೆಹಲಿ ದಕ್ಷಿಣ ಡಿಸಿಪಿ ಅತುಲ್ ಕುಮಾರ್ ಹೇಳಿDelhi shocker Woman constable drugged, raped and blackmailed by sub-inspector mahಕೆ ನೀಡಿದ್ದು ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು  ತಿಳಿಸಿದ್ದಾರೆ.

click me!