ಹುಬ್ಬಳ್ಳಿ: ಫ್ರೂಟ್ ಇರ್ಫಾನ್ ಕೊಲೆ, ಬಾಂಬೆ ಶೂಟರ್ಸ್ ಅರೆಸ್ಟ್‌

By Suvarna NewsFirst Published Aug 26, 2020, 12:33 PM IST
Highlights

ಫ್ರೂಟ್ ಇರ್ಫಾನ್ ಮೇಲೆ‌ ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದ ಆರೋಪಿಗಳು| ಆಗಸ್ಟ್ ಮೊದಲ ವಾರದಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಗುಂಡಿನ ದಾಳಿ| ಹಣಕ್ಕಾಗಿಯೇ ಕೊಲೆ ಮಾಡಿದ ಆರೋಪಿಗಳು| 

ಹುಬ್ಬಳ್ಳಿ(ಆ.26): ಧಾರವಾಡದ ರೌಡಿಶೀಟರ್ ಇರ್ಫಾನ್ ಹಂಚಿನಾಳ ಅಲಿಯಾಸ್ ಫ್ರೂಟ್ ಇರ್ಫಾನ್ ಹತ್ಯೆ ಮಾಡಿ ಪರಾರಿಯಾಗಿದ್ದ ಬಾಂಬೆ ಮೂಲದ ಶೂಟರ್ಸ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಗಳನ್ನು ಹುಬ್ಬಳ್ಳಿಯತ್ತ ಕರೆತರಲಾಗುತ್ತಿದೆ ಎಂದು ಖಚಿತ ಮೂಲಗಳು ತಿಳಿಸಿವೆ. ಆಗಸ್ಟ್ ಮೊದಲ ವಾರದಲ್ಲಿ ಮಗನ ಮದುವೆ ಮುಗಿಸಿ ಬೀಗರನ್ನು ಕಳುಹಿಸಲು ಹೊರಗೆ ನಿಂತಿದ್ದ ಫ್ರೂಟ್ ಇರ್ಫಾನ್ ಮೇಲೆ‌ ಮೂವರು ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದರು. 

ಫ್ರೂಟ್ ಇರ್ಫಾನ್ ಹತ್ಯೆಯ ಬಗ್ಗೆ ಜಾಡು ಹಿಡಿದು ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು, ಹಲವು ವಿಧಾನಗಳಲ್ಲಿ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದರು. ಮೊದಲು ಹುಬ್ಬಳ್ಳಿ-ಧಾರವಾಡದ ಐವರನ್ನು ಬಂಧನ ಮಾಡಲಾಯಿತು. 
ಇದಾದ ಮೇಲೆ ಮೈಸೂರಿನ ಇಬ್ಬರನ್ನೂ ಬಂಧನ ಮಾಡಲಾಯಿತಾದರೂ, ಪ್ರಮುಖವಾದ ಶಾರ್ಪ್ ಶೂಟರ್ಸ್‌ಗಳ ಪತ್ತೆ ಮಾತ್ರ ಆಗಿರಲೇ ಇಲ್ಲ. ಹಾಗಾಗಿಯೇ ಇಲಾಖೆ ಸಾಕಷ್ಟು ತಲೆ ಕೆಡಿಸಿಕೊಂಡಿತ್ತು.

ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು: ರೌಡಿಶೀಟರ್‌ ಫ್ರೂಟ್‌ ಇರ್ಫಾನ್‌ ಮೇಲೆ ಫೈರಿಂಗ್‌

ಪ್ರಮುಖವಾದ ಸಾಕ್ಷ್ಯ ದೊರೆತದ್ದು ಹುಬ್ಬಳ್ಳಿ ಪೊಲೀಸರಿಗೆ ಆರೋಪಿಗಳ ದಾರಿಯನ್ನು ತೋರಿಸಿದೆ. ಹಾಗಾಗಿಯೇ ಬಾಂಬೆಯ ಚೆಂಬೂರ, ವಾಡ್ಲಾ ಹಾಗೂ ಘಾಡಕೋಫರ್ ಪ್ರದೇಶದ ಶೂಟರ್ಸ್‌ಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಹಣಕ್ಕಾಗಿಯೇ ಈ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಕೊಲೆಗೆ ಸುಫಾರಿ ನೀಡಿದವ ಮತ್ತು ಕೊಲೆಪಾತಕರ ನಡುವಿದ್ದ ರಾಜೇಂದ್ರ ಮೋಹನಸಿಂಗ್ ರಾವುತ್ ಅಲಿಯಾಸ್ ರಾಜು ನೇಪಾಳಿ ನೀಡಿದ ಮಾಹಿತಿಯೇ ಪೊಲೀಸರು ಆರೋಪಿಗಳನ್ನು ತಲುಪಲು ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ.

ಡಾಬಾಗೆ ನುಗ್ಗಿ ತಾಯಿ ಮಗನ ಮೇಲೆ ರೌಡಿಗಳಿಂದ ಮಾರಣಾಂತಿಕ ಹಲ್ಲೆ!

"

click me!