91 ಬಾಲಕಿಯರ ಮೇಲೆ ಅತ್ಯಾಚಾರ, 15 ವರ್ಷಗಳಿಂದ ರೇಪ್ ಮಾಡುತ್ತಿದ್ದ ಮಕ್ಕಳ ಕಲ್ಯಾಣ ಸಿಬ್ಬಂದಿ ಅರೆಸ್ಟ್!

By Suvarna NewsFirst Published Aug 1, 2023, 8:46 PM IST
Highlights

91 ಅಪ್ರಾಪ್ತ ಬಾಲಕಿಯರ ಮೇಲೆ 1,623ಕ್ಕೂ ಹೆಚ್ಚು ಬಾರಿ ಅತ್ಯಾಚಾರ ನಡೆಸಿದ ವಿಕೃತಿ ಕಾಮಿಯನ್ನು ಕೊನೆಗೂ ಪೊಲೀಸು ಬಂಧಿಸಿದ್ದಾರೆ. ಈತ ಮಕ್ಕಳ ಕಲ್ಯಾಣ ವಿಭಾಗ ಸಿಬ್ಬಂದಿ. ಕಳೆದ 15 ವರ್ಷಗಳಿಂದ ಬಾಲಕಿಯರನ್ನು ಟಾರ್ಗೆಟ್ ಮಾಡಿ ಅತ್ಯಾಚಾರ ನಡೆಸುತ್ತಿದ್ದ. ಈತನಿಂದ 4,000ಕ್ಕೂ ಹೆಚ್ಚು ವಿಡಿಯೋ ಹಾಗೂ ಫೋಟೋ ವಶಪಡಿಸಲಾಗಿದೆ.
 

ಸಿಡ್ನಿ(ಆ.01) ಆಸ್ಟ್ರೇಲಿಯಾ ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ನಡೆಸಿದ ಹೇಯ ಕೃತ್ಯ ಕೊನೆಗೂ ಬೆಳಕಿಗೆ ಬಂದಿದೆ. 91 ಮಕ್ಕಳ ಮೇಲೆ ಈತ ಅತ್ಯಾಚಾರ ನಡೆಸಿದ್ದಾನೆ.1,623ಕ್ಕೂ ಹೆಚ್ಚು ಬಾರಿ ಸೆಕ್ಸ್ ನಡೆಸಿ ಅದರ ವಿಡಿಯೋ ಮಾಡಿಕೊಂಡಿದ್ದಾನೆ.  ಮಕ್ಕಳ ಕಲ್ಯಾಣ ಇಲಾಖೆಯ ಪ್ರಮುಖ ಸಿಬ್ಬಂದಿಯಾಗಿರುವ ಈತ ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಕಳೆದ 15 ವರ್ಷದಿಂದ ಇದೇ ಕಾಯದಲ್ಲಿ ತೊಡಗಿದ್ದ ಆಸ್ಟ್ರೇಲಿಯಾದ ಕಾಮುಕ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಬ್ರಿಸ್ಬೇನ್‌ನಲ್ಲಿರುವ ಆಸ್ಟೇಲಿಯಾ ಮಕ್ಕಳ ಕಲ್ಯಾಣ ಇಲಾಖೆ ಪ್ರಮುಖ ಕಚೇರಿಯಲ್ಲಿ ಕೆಲಸ ಮಾಡುವ ಈತನಿಗೆ ಇದೀಗ 45 ವರ್ಷ. ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ತರಬೇತಿ ಪಡೆಯುವ, ಕಲಿಯುತ್ತಿರುವ ಅಪ್ರಾಪ್ತ ಬಾಲಕಿಯರೇ ಈತನ ಟಾರ್ಗೆಟ್. ಈತ ನಡೆಸಿದ 1,623 ಸೆಕ್ಸ್ ಅಪರಾಧದಲ್ಲಿ 110 ಕ್ರೈಮ್ 10 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ನಡೆದಿದೆ.

ಆರ್ಥಿಕ ಸಂಕಷ್ಟ ನಡುವೆ ಮಾನಸಿಕ ಆಘಾತ, ಸಾಲ ಮರುಪಾವತಿಸದ ಪತಿ ಎದುರೇ ಪತ್ನಿ ಮೇಲೆ ರೇಪ್!

2014ರಿಂದ ಆಸ್ಟ್ರೇಲಿಯಾ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ. 2014ರಲ್ಲಿ ವೆಬ್‌ಸೈಟ್‌ನಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಸಣ್ಣ ತುಣುಕೊಂಡು ಪ್ರಕಟಗೊಂಡಿತ್ತು. 10 ವರ್ಷಕ್ಕಿಂತ ಕಳೆಗಿನ ಬಾಲಕಿ ಮೇಲೆ ನಡೆಸಿದ ಈ ಅತ್ಯಾಚಾರ ವಿಡಿಯೋ 2014ರಲ್ಲಿ ಪೊಲೀಸರ ತಲೆನೋವಿಗೆ ಕಾರಣವಾಗಿತ್ತು. ಈ ವಿಡಿಯೋವನ್ನು ಪರಿಶೀಲಿಸಿದ ಪೊಲೀಸರಿಗೆ ವಿಡಿಯೋ ರೆಕಾರ್ಡ್ ವೇಳೆ ಆಗಿದ್ದ ಸುತ್ತಿಲಿನ ಧ್ವನಿಯನ್ನು ಆಧರಿಸಿ ತನಿಖೆ ನಡೆಸಿದ್ದರು.

ಈ ಧ್ವನಿ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಹುತೇಕ ಅತ್ಯಾಚಾರಗಳು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲೇ ನಡೆದಿತ್ತು. ಮಕ್ಕಳನ್ನು ತನ್ನ ಹೇಯ ಕೃತ್ಯಕ್ಕೆ ಬಳಸಿಕೊಂಡು ಕೊಲೆ ಹಾಗೂ ಇತರ ಬೆದರಿಕೆ ಹಾಕುತ್ತಿದ್ದ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ. 35 ಪೊಲೀಸರ ತಂಡ ಈ ಪ್ರಕರಣವನ್ನು ತನಿಖೆ ನಡೆಸಿದೆ. 45ರ ಹರೆಯದ ಈತನನ್ನು ಬಂಧಿಸಿರುವ ಪೊಲೀಸರು ಸಾವಿರಕ್ಕೂ ಹೆಚ್ಚು ಕೇಸ್ ದಾಖಲಿಸಿದ್ದಾರೆ. ಈತನ ಬಳಿಯಿಂದ 4,000ಕ್ಕೂ ಹೆಚ್ಚು ವಿಡಿಯೋ ಹಾಗೂ ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿದೆ..

ಮಣಿಪುರದ 18 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್, ದುರಂತಕ್ಕೆ ಮಹಿಳೆಯರ ನೆರವು!

91 ಮಕ್ಕಳ ಪೈಕಿ 87 ಸಂತ್ರಸ್ತ ಮಕ್ಕಳನ್ನು ಗುರುತಿಸಲಾಗಿದೆ. ಜೊತೆಗೆ ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಇನ್ನುಳಿದ ನಾಲ್ಕು ಮಕ್ಕಳ ಮೇಲಿನ ಅತ್ಯಾಚಾರ ಆಸ್ಟ್ರೇಲಿಯಾದಿಂದ ಹೊರಗಡೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆಸ್ಟ್ರೇಲಿಯಾ ಕಂಡ ಅತ್ಯಂತ ಭೀಕರ ಅತ್ಯಾಚಾರ ಪ್ರಕರಣ ಇದು ಎಂದು ಸೌತ್ ವೇಲ್ಸ್ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಮಿಚೆಲ್ ಫಿಟ್ಜ್‌ಗೆರಾಲ್ಡ್ ಹೇಳಿದ್ದಾರೆ.

ಈತ ನಡೆಸಿದ ಅತ್ಯಾಚಾರಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಎಳ್ಳಷ್ಟು ಅವಕಾಶವಿಲ್ಲ. ಅತ್ಯಂತ ಕಠಿಣ ಶಿಕ್ಷೆ ನೀಡಲಾಗುತ್ತದೆ. ಬಂಧಿತ ಆರೋಪಿಯ ಹೇಯ ಕೃತ್ಯಕ್ಕೆ ತಕ್ಕ ಶಿಕ್ಷೆ ನೀಡಿ ಇತರರಿಗೂ ಪಾಠವಾಗುವಂತೆ ಮಾಡಲಾಗುತ್ತದೆ ಎಂದು ಮೆಚೆಲ್ ಹೇಳಿದ್ದಾರೆ.
 

click me!