
ಉತ್ತರಪ್ರದೇಶ: ಐದು ಮಕ್ಕಳನ್ನು ಹೊಂದಿರುವುದರ ಬಗ್ಗೆ ತಂದೆ ಚಿಂತಿತರಾಗಿರುವುದನ್ನು ನೋಡಿ 13 ವರ್ಷದ ಬಾಲಕಿಯೊಬ್ಬಳು ತನ್ನ ಇಬ್ಬರು ತಂಗಿಯರನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗುರುವಾರ ತಡರಾತ್ರಿ 12:30 ರ ಸುಮಾರಿಗೆ ನೂರ್‌ಪುರ್ ಪೊಲೀಸ್ ಠಾಣೆಗೆ ಗೌಹಾವರ್ ಜೈತ್ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆಯಾದ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜಾದೌನ್ ತಿಳಿಸಿದ್ದಾರೆ.
ಪೊಲೀಸರು ಮನೆಗೆ ತಲುಪಿದಾಗ, ರಿತು (7) ಮತ್ತು ಪವಿತ್ರಾ (5) ಮೃತದೇಹ ನೆಲದ ಮೇಲೆ ಬಿದ್ದಿತ್ತು. ಸಹದೇವ್ ಮತ್ತು ಸವಿತಾ ತಮ್ಮ ಐದು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸವಿತಾ ಅವರ ಇಬ್ಬರು ಹಿರಿಯ ಹೆಣ್ಣುಮಕ್ಕಳು, 13 ವರ್ಷ ಮತ್ತು 9 ವರ್ಷ ವಯಸ್ಸಿನವರು. ಅವರ ಮೊದಲ ಪತಿ ಪುಖರಾಜ್‌ನ ಮಕ್ಕಳು. ಇಬ್ಬರು ಮೃತ ಬಾಲಕಿಯರು ಮತ್ತು ಅವರ 1.5 ವರ್ಷದ ಸಹೋದರ ಆಕೆಯ ಎರಡನೇ ಪತಿ ಸಹದೇವ್ ಮಕ್ಕಳು.
ಬೆಳಗಾವಿ: ಹಾಡುಹಗಲೇ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಭೀಕರ ಕೊಲೆ!
ಪ್ರಾಥಮಿಕ ವಿಚಾರಣೆಯ ವೇಳೆ ಇಬ್ಬರು ಅಪರಿಚಿತರು ತಮ್ಮ ಮನೆಗೆ ನುಗ್ಗಿ ತನ್ನ ಸಹೋದರಿಯರನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂದು 13 ವರ್ಷದ ಬಾಲಕಿ ಹೇಳಿರುವುದಾಗಿ ಎಸ್‌ಪಿ ಜದೌನ್ ತಿಳಿಸಿದ್ದಾರೆ.
ಆದರೆ, ಆಕೆಯ ತಂದೆ ಕುಟುಂಬದಲ್ಲಿ ಹೆಚ್ಚು ಸದಸ್ಯರಿರುವ ಬಗ್ಗೆ ಚಿಂತಿತರಾಗಿದ್ದರಿಂದ ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ನಂತರ ಒಪ್ಪಿಕೊಂಡಿದ್ದಾಳೆ ಎಂದು ಅವರು ಹೇಳಿದರು. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಪ್ರಾಪ್ತ ಬಾಲಕಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರ: ರೀಲ್ಸ್ ಮಾಡಲು ಹೋಗಿ ಮೂವರು ಬಾಲಕರು ನೀರಲ್ಲಿ ಮುಳುಗಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ