ಬೆಂಗಳೂರು: ಸಾಲ ವಾಪಸ್ ಕೇಳಿದ ಗೆಳೆಯನನ್ನೇ ಕೊಂದ ಫ್ರೆಂಡ್‌..!

By Kannadaprabha News  |  First Published May 12, 2024, 12:03 PM IST

ಪ್ರಕಾಶ್ ನಗರದ ನಿವಾಸಿ ಆರ್.ವಿಠಲ್ ಅಲಿಯಾಸ್ ಪಾಂಡು ಬಂಧಿತನಾಗಿದ್ದು, ಹಣಕಾಸು ವಿಚಾರವಾಗಿ ತನ್ನ ಗೆಳೆಯ ದಿಲೀಪ್‌ನನ್ನು ಆತ ಕೊಲೆ ಮಾಡಿ ಪರಾರಿಯಾಗಿದ್ದ. ಈ ತನಿಖೆಗಿಳಿದ ಇನ್‌ಸೆಕ್ಟರ್ ಪೂಣಚ್ಚ ಹಾಗೂ ಸಬ್ ಇನ್‌ಸ್ಪೆಕ್ಟರ್ ನಂದಕುಮಾರ್ ನೇತೃತ್ವದ ತಂಡವು ಆರೋಪಿಯನ್ನು ಪತ್ತೆ ಹಚ್ಚಿದೆ.


ಬೆಂಗಳೂರು(ಮೇ.12): ಇತ್ತೀಚೆಗೆ ಓಕಳಿಪುರದ ರೈಲ್ವೆ ಹಳಿಗಳ ಬಳಿ ನಡೆದಿದ್ದ ದಿಲೀಪ್ ಕೊಲೆ ಪ್ರಕರಣ ಸಂಬಂಧ ಆತನ ಸ್ನೇಹಿತನನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ನಗರದ ನಿವಾಸಿ ಆರ್.ವಿಠಲ್ ಅಲಿಯಾಸ್ ಪಾಂಡು ಬಂಧಿತನಾಗಿದ್ದು, ಹಣಕಾಸು ವಿಚಾರವಾಗಿ ತನ್ನ ಗೆಳೆಯ ದಿಲೀಪ್ (45) ನನ್ನು ಆತ ಕೊಲೆ ಮಾಡಿ ಪರಾರಿಯಾಗಿದ್ದ. ಈ ತನಿಖೆಗಿಳಿದ ಇನ್‌ಸೆಕ್ಟರ್ ಪೂಣಚ್ಚ ಹಾಗೂ ಸಬ್ ಇನ್‌ಸ್ಪೆಕ್ಟರ್ ನಂದಕುಮಾರ್ ನೇತೃತ್ವದ ತಂಡವು ಆರೋಪಿಯನ್ನು ಪತ್ತೆ ಹಚ್ಚಿದೆ.

₹20 ಸಾವಿರಕ್ಕೆ ಕೊಲೆ: ಖಾಸಗಿ ಶಾಲೆಯ ವಾಹನದ ಕ್ಲಿನರ್ ವಿಠಲ್ ಹಾಗೂ ದಿಲೀಪ್ ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಸಹ ಇತ್ತು. ಗೆಳೆಯನಿಂದ ₹20 ಸಾವಿರ ಸಾಲವನ್ನು ವಿಠಲ್ ಪಡೆದಿದ್ದ. ಆದರೆ ಸಕಾಲಕ್ಕೆ ಸಾಲ ಮರಳಿಸದ ಕಾರಣಕ್ಕೆ ಇಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಸಾಲಕ್ಕೆ ಬಡ್ಡಿ ಸೇರಿ ₹33 ಸಾವಿರ ಆಗಿದೆ ಎಂದು ಹೇಳಿ ಗೆಳೆಯನನ್ನು ದಿಲೀಪ್ ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದ. ಪ್ರತಿ ತಿಂಗಳು ಕ10 ಸಾವಿರ ವೇತನ ಬರುತ್ತದೆ. ಅದರಲ್ಲಿ ಒಂದೇ ಬಾರಿಗೆ ₹33 ಸಾವಿರ ಕೊಡಲು ಸಾಧ್ಯವಿಲ್ಲವೆಂದು ವಿಠಲ್ ಅಲವತ್ತುಕೊಂಡಿದ್ದ. ಕೊನೆಗೆ ಇದರಿಂದ ಕೆರಳಿದ ವಿಠಲ್, ಗೆಳೆಯ ಹತ್ಯೆಗೆ ನಿರ್ಧರಿಸಿದ್ದ. ಹಣ ಕೊಡುವ ನೆಪದಲ್ಲಿ ಏ.28ರಂದು ಓಕಳೀಪುರದ ರೈಲ್ವೆ ಹಳಿಗಳ ಬಳಿಗೆ ಸ್ನೇಹಿತನನ್ನು ಆರೋಪಿಸಿ ಕರೆಸಿಕೊಂಡಿದ್ದ. ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿದುಹತ್ಯೆಗೈದು ಪರಾರಿಯಾಗಿದ್ದ. 3 ದಿನದ ಬಳಿಕ ದೇಹ ಪತ್ತೆಯಾಗಿತ್ತು. 

Latest Videos

undefined

Breaking: ಶಿವಮೊಗ್ಗದಲ್ಲಿ ಜೋಡಿ ಕೊಲೆ: ಅನ್ಯಕೋಮಿನ ಇಬ್ಬರು ಯುವಕರ ಬರ್ಬರ ಹತ್ಯೆ

ಶಿಲುಬೆ ನೀಡಿದ ಸುಳಿವು

ಮೊದಲು ಅಪರಿಚಿತ ಮೃತದೇಹ ಗುರುತು ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಅದೇ ವೇಳೆ ತಮ್ಮ ಸೋದರ ನಾಪತ್ತೆಯಾಗಿದ್ದಾನೆಂದು ಠಾಣೆಗೆ ಮೃತ ದಿಲೀಪ್‌ ಸೋದರ ದೂರು ನೀಡಲು ಬಂದಿದ್ದರು. ಆಗ ಆತನ ಫೋಟೋ ನೋಡಿದ ಪೊಲೀಸರಿಗೆ ಧರಿಸಿದ್ದ ಶಿಲುಬೆ ನೋಡಿ ಶಂಕೆ ಮೂಡಿದೆ. ಕೂಡಲೇ ಹತ್ಯೆ ನಡೆದ ಸ್ಥಳದಲ್ಲಿ ಸಿಕ್ಕಿದ ಶಿಲುಬೆಗೂ ದಿಲೀಪ್ ಫೋಟೋದಲ್ಲಿ ಧರಿಸಿದ್ದ ಶಿಲುಬೆಗೂ ಹೋಲಿಕೆ ಮಾಡಿದಾಗ ಸಾಮ್ಯತೆ ಕಂಡು ಬಂದಿದೆ. ಈ ಸುಳಿವು ಆಧರಿಸಿ ತನಿಖೆಗಳಿಂದ ಪೊಲೀಸರು, ಶಂಕೆ ಮೇರೆಗೆ ಆತನ ಸ್ನೇಹಿತ ವಿಠಲ್ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.

click me!