ಲಾಕ್‌ಡೌನ್ ಎಫೆಕ್ಟ್: ಶೇ. 83ರಷ್ಟು ಇಳಿದ ರೇಪ್ ಕೇಸ್!

By Suvarna NewsFirst Published Apr 15, 2020, 3:19 PM IST
Highlights
ಲಾಕ್‌ಡೌನ್ ಎಫೆಕ್ಟ್, ಅಪರಾಧ ಪ್ರಕರಣಗಳು ಡೌನ್| ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸದ್ದಿಲ್ಲ| ಅತ್ತ ಪ್ರಕೃತಿಯೂ ಕ್ಲೀನ್ ಕ್ಲೀನ್
ನವದೆಹಲಿ(ಏ.15): ಕೊರೋನಾ ತಡೆಯುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್‌ಡೌನ್ ಒಂದೆಡೆ ಜನರ ನಿದ್ದೆಗೆಡಿಸಿದೆ. ಮನೆಯಿಂದ ಹೊರ ಬರಲಾಗದೆ ಜನರು ಮನೆಯಲ್ಲೇ ಉಳಿಯುವಂತಾಗಿದೆ. ಹೀಗಿರುವಾಗ ಜನರ ಹೆಚ್ಚು ಓಡಾಟವಿಲ್ಲದ ಒಂದೆಡೆ ಪ್ರಕೃತಿ ತನ್ನ ಕಳೆ ಹಿಂಪಡೆಯುತ್ತಿದ್ದರೆ, ಮತ್ತೊಂದೆಡೆ ಕ್ರೈಂ ಪ್ರಕರಣಗಳೂ ಕಡಿಮೆಯಾಗಿವೆ. 

ಲಾಕ್ ಡೌನ್ ವಿಸ್ತರಣೆಗೆ ಬೇಸತ್ತು ನೇಣು ಬಿಗಿದು ಅರ್ಚಕ ಆತ್ಮಹತ್ಯೆ..!

ಹೌದು ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಸೌಂಡ್ ಮಾಡುತ್ತಿದ್ದವು. ಆದರೀಗ ಲಾಕ್‌ಡೌನ್ ಹೇರಿದ ಬಳಿಕ ಈ ಪ್ರಕರಣಗಳು ಶೇ. 83  ರಷ್ಟು ಕಡಿಮೆಯಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಈ ಸಂಬಂಧ ಮಾಹಿತಿ ಹಂಚಿದ್ದು, ಮಾರ್ಚ್ 22 ರಿಂದ ಏಪ್ರಿಲ್ 22ರವರೆಗೆ ದೆಹಲಿಯಲ್ಲಿ ಐಪಿಸಿ ಸೆಕ್ಷನ್ 376 ಅಡಿಯಲ್ಲಿ 23  ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆದರೆ 2019ರಲ್ಲಿ ಈ ಕಾಲಾವಧಿಯಲ್ಲಿ ಒಟ್ಟು 139 ಪ್ರಕರಣಗಳು ದಾಖಲಾಗಿದ್ದವು. ಈ ಮೂಲಕ ಅತ್ಯಾಚಾರ ಪ್ರಕರಣಗಳಲ್ಲಿ ಶೇ. 83  ರಷ್ಟು ಇಳಿಕೆಯಾಗಿದೆ ಎಂದಿದ್ದಾರೆ.

ಅಲ್ಲದೇ ಈ ಅವಧಿಯಲ್ಲಿ ಮಹಿಳೆಯರ ಮೇಲಿನ ಹಲ್ಲೆ ಹಾಗೂ ಶೋಷಣೆ ಪ್ರಕರಣಗಳಲ್ಲೂ ಶೇ. 85.8ರಷ್ಟು ಇಳಿಕೆಯಾಗಿದೆ. ಮಾರ್ಚ್ 22 ರಿಂದ ಏಪ್ರಿಲ್ 22ರವರೆಗೆ ಕೇವಲ 33 ಇಂತಹ ಪ್ರಕರಣಗಳು ದಾಖಲಾಗಿವೆ. ಆದರೆ 2019ರಲ್ಲಿ ಈ ಅವಧಿಯಲ್ಲಿ ಬರೋಬ್ಬರಿ 233 ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿಸಿದ್ದಾರೆ.

ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ: ಬರಿಗಣ್ಣಿಗೆ ಕಾಣುತ್ತಿವೆ ಜಲಚರಗಳು!

ಒಂದೆಡೆ ಕೊರೋನಾದಿಂದಾಗಿ ಹೇರಲಾಗಿರುವ ಪ್ರಕರಣದಿಂದ ಜನ ಸಾಮಾನ್ಯರು ಹೊರ ಬರಲಾರದೆ ಸಂಕಷ್ಟ ಅನುಭವಿಸುತ್ತಿದ್ದರೆ, ಅತ್ತ ಅಪರಾಧ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂಬುವುದು ಖುಷಿ ಕೊಡುವ ಸಂಗತಿ. ಅಲ್ಲದೇ ಜನರ ಓಡಾಟವಿಲ್ಲದೇ ನಿಸರ್ಗವೂ ಮಾಲಿನ್ಯ ರಹಿತವಾಗುತ್ತಿದೆ. 
click me!