ನಿಲ್ಲಿಸಿದ್ದ ಕಾರುಗಳ ಪಕ್ಕದಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದರು. ಇದೇ ವೇಳೆ ಕಾರಿನ ಡೋರ್ ಹಿಡಿದಾಗ ಬಾಗಿಲು ತೆರೆದುಕೊಂಡಿತು. ಬಿಸಿಲ ಬೇಗೆ ಕಾರಣ ಕಾರಿನೊಳಗೆ ಹತ್ತಿ ಆಟವಾಡಲು ಆರಂಭಿಸಿದ್ದಾರೆ. ಆದರೆ ಕಾರು ಹತ್ತಿದ ಬೆನ್ನಲ್ಲೇ ಡೋರ್ ಲಾಕ್ ಆಗಿದೆ. ಹೊರಬರಲು ಸಾಧ್ಯವಾಗದೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮುಂಬೈ(ಏ.25) ಆಟವಾಡುತ್ತಿದ್ದ ಇಬ್ಬರು ಮಕ್ಕಳು 4 ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಪೋಷಕರು, ಸ್ಥಳೀಯರು ಎಲ್ಲರೂ ಹುಡುಕಿದ್ದಾರೆ. ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಡುಕಾಟ ನಡೆಸಿದಾಗ ಇಬ್ಬರ ಮಕ್ಕಳ ಮೃತದೇಹ ಕಾರಿನಲ್ಲಿ ಪತ್ತೆಯಾದ ಘಟನೆ ಮುಂಬೈನ ಅನೋಟ್ಪ್ ಹಿಲ್‌ನಲ್ಲಿ ನಡೆದಿದೆ. 5 ವರ್ಷದ ಮುಸ್ಕಾನ್ ಮೊಹಬ್ಬತ್ ಶೇಕ್ ಹಾಗೂ 7 ವರ್ಷದ ಸಾಜಿದ್ ಮೊಹಮ್ಮದ್ ಶೇಕ್ ಇಬ್ಬರು ಮೃತ ದುರ್ದೈವಿಗಳು.
ಇಬ್ಬರು ಮಕ್ಕಳು ಮನೆಯಿಂದ ಕೆಲ ದೂರದಲ್ಲಿ ಆಟವಾಡುತ್ತಿದ್ದರು. ವಿಶಾಲವಾದ ಈ ಪ್ರದೇಶದಲ್ಲಿ ಹಲವು ಗುಜುರಿ ಕಾರುಗಳು ಸೇರಿದಂತೆ ಹಲವರು ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಮೈದಾನದ ರೀತಿ ಪ್ರದೇಶವಾಗಿರುವ ಕಾರಣ ಬಹುತೇಕರು ಇದೇ ಜಾಗದಲ್ಲಿ ಪಾರ್ಕಿಂಗ್ ಮಾಡುತ್ತಾರೆ. ಆಟವಾಡುತ್ತಿದ್ದ ಮಕ್ಕಳು, ಕಾರಿನ ಡೋರ್ ಹಿಡಿದು ಎಳೆದಾಗ ತೆರೆದುಕೊಂಡಿದೆ.
ಮಗಳಿಲ್ಲದಾಗ ಇನ್ಸ್ಟಾಗ್ರಾಮ್ ಸ್ನೇಹಿತನನ್ನು ಮನೆಗೆ ಕರೆದ ಮಹಿಳೆ, ರಾತ್ರಿ ಆಪ್ತವಾಗಿ ಕಳೆದು ಬೆಳಗ್ಗೆ ಕೊಲೆ
ಕಾರಿನ ಡೋರ್ ತೆರೆದುಕೊಂಡ ಕಾರಣ ಇಬ್ಬರು ಮಕ್ಕಳು ಕಾರಿನೊಳಗೆ ಕುಳಿತು ಆಡವಾಡಿದ್ದಾರೆ. ಕೆಲ ಹೊತ್ತು ಆಡವಾಡಿದ ಬಳಿಕ ಕಾರಿನ ಡೋರ್‌ನ್ನು ಹಾಕಿ ಆಡಲು ಆರಂಭಿಸಿದ್ದಾರೆ. ಇತ್ತ ಸಂಜೆಯಾದರೂ ಮಕ್ಕಳು ಮನೆಗೆ ಬರಲಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಸ್ಥಳೀಯರು ಕೂಡ ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೆ ದೂರಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಆಡವಾಡುತ್ತಿದ್ದ ಮಕ್ಕಳು ಕಾರಿನೊಳಗೆ ಕುಳಿತು ಆಟವಾಡಿದ್ದಾರೆ. ಕಾರಿನ ಡೋರ್ ಹಾಕಿಕೊಂಡು ಆಟವಾಡಿದ್ದಾರೆ. ಆಧರೆ ಡೋರ್ ಹಾಕಿದ ಕಾರಣ ಕಾರಿನೊಳಗೆ ಗಾಳಿ ಕೊರತೆಯಾಗಿದೆ. ಇತ್ತ ಮಕ್ಕಳಿಗೆ ಕಾರಿನ ಡೋರ್ ತೆರೆಯಲು ಸಾಧ್ಯವಾಗಲಿಲ್ಲ. ಆಮ್ಲಜನಕ ಪ್ರಮಾಣ ಸಂಪೂರ್ಣ ಶೂನ್ಯವಾಗಿದೆ. ಗಾಳಿಯಾಡದೇ
ಅಸ್ವಸ್ಥಗೊಂಡ ಮಕ್ಕಳು ಹೊರಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಇತ್ತ ಪೊಲೀಸರು ಹತ್ತಿರದ ಸಿಸಿಟಿವಿ ಪರಿಶೀಲಿಸಿದ್ದಾರೆ. ಇದೇ ವೇಳೆ ಮತ್ತೊಂದು ತಂಡ ಹುಡುಕಾಟ ತೀವ್ರಗೊಳಿಸಿದಾಗ ಮಕ್ಕಳ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಪಾರ್ಕಿಂಗ್ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಡೋರ್ ಲಾಕ್ ಮಾಡದೆ ಪಾರ್ಕಿಂಗ್ ಮಾಡಿರುವುದು, ಅನಧಿಕೃತ ಪಾರ್ಕಿಂಗ್ ಸೇರಿದಂತೆ ಹಲವು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವೇಳೆ ಸ್ಥಳೀಯರು ನಗರ ಆಡಳಿತ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅನಧಿಕೃತ ಪಾರ್ಕಿಂಗ್‌ನಿಂದಲೇ ಮಕ್ಕಳು ಬಲಿಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರ ಮೇಲೆಯೇ ಲಾಂಗ್ ಬೀಸಿ ತಪ್ಪಿಸಿಕೊಳ್ಳಲೆತ್ನಿಸಿದ ಶಿವಾಜಿನಗರದ ರೌಡಿಶೀಟರ್