ಶುಕ್ರವಾರ ಮುಂಜಾನೆ 13 ನಕ್ಸಲರಿಗೆ ಮುಕ್ತಿ ಕಾಣಿಸಿದ ಭದ್ರತಾ ಪಡೆ

By Suvarna NewsFirst Published May 21, 2021, 2:54 PM IST
Highlights

* ಮಹಾರಾಷ್ಟ್ರದಲ್ಲಿ 13 ನಕ್ಸಲರ ಎನ್ ಕೌಂಟರ್
*  ಶುಕ್ರವಾರ ಮುಂಜಾನೆ ಎಟಪಲ್ಲಿಯ ಕೋಟ್ಮಿ ಕಾಡಿನಲ್ಲಿ ಗುಂಡಿನ ಚಕಮಕಿ
* ಅರಣ್ಯ ಪ್ರದೇಶದಲ್ಲಿ ಮುಂದುವರಿದ ಕಾರ್ಯಾಚರಣೆ
* ಸ್ಥಳದಿಂದ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಪೊಲೀಸರು

ಮುಂಬೈ (ಮೇ 21)  ಮಹಾರಾಷ್ಟ್ರದ ಗಡಚಿರೋಲಿಯಲ್ಲಿ 13 ನಕ್ಸಲರನ್ನು ಎನ್‌ ಕೌಂಟರ್ ಮಾಡಲಾಗಿದೆ.  ಶುಕ್ರವಾರ ಮುಂಜಾನೆ 5.30 ರ ಸುಮಾರಿಗೆ ಎಟಪಲ್ಲಿಯ ಕೋಟ್ಮಿ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದೆ.

C-60 ಕಮಾಂಡೋ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ. C-60 ಕಮಾಂಡೋಗಳು ಗಡಚಿರೋಲಿಯ ಪಟಾಪಲ್ಲಿ ತಾಲೂಕಿನ ಪೈದಿ-ಕೊಟಮಿ ಅರಣ್ಯ ಪ್ರದೇಶದಲ್ಲಿ  ನಕ್ಸಲರ ಮೇಲೆ ದಾಳಿ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ತಿಳಿಸಿದ್ದು ಶವಗಳನ್ನು ವಶಕ್ಕೆ ಪಡೆಯಲಾಗಿದೆ.

ಛತ್ತೀಸ್‌ಘಡದಲ್ಲಿ ಕ್ರೌರ್ಯ ಮೆರೆದಿದ್ದ ನಕ್ಸಲರು

ಕಮಾಂಡೋ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಇನ್ನು ಹೆಚ್ಚಿನ ನಕ್ಸಲರು ಅಡಗಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹಳ್ಳಿಯೊಂದರ ಬಳಿ ಶಿಬಿರ ಮಾಡಿಕೊಂಡಿದ್ದ ನಕ್ಸಲರ ಮೇಲೆ ದಾಳಿ ನಡೆಸಲಾಗಿದೆ. ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳು, ಪುಸ್ತಕ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

click me!