ಬೆಂಗಳೂರಿನ ಹೃದಯ ಭಾಗದಲ್ಲಿರುವ ಬೆಂಗಳೂರು ಕ್ರಿಕೆಟ್ ಸ್ಟೇಡಿಯಂಗೆ ಎಂ ಚಿನ್ನಸ್ವಾಮಿ ಸ್ಟೇಡಿಯಂ ಎಂದು ಹೆಸರು ಬಂದಿದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಬೆಂಗಳೂರು: ಬೆಂಗಳೂರಿನ ಕ್ರೀಡಾಂಗಣ ‘ಚಿನ್ನಸ್ವಾಮಿ ಕ್ರೀಡಾಂಗಣ’ ಎಂದೇ ಖ್ಯಾತಿ. ಹಲವರಿಗೆ ಈ ಹೆಸರಿನ ಹಿಂದಿರುವ ಗುಟ್ಟು ಗೊತ್ತಿರಲಿಕ್ಕಿಲ್ಲ. ಆದರೆ ಚಿನ್ನಸ್ವಾಮಿ ಅವರನ್ನು ನೆನಪಿಸಿಕೊಳ್ಳದಿದ್ದರೆ ಕ್ರೀಡಾಂಗಣಕ್ಕೆ ಮಹತ್ವ ಬರಲು ಸಾಧ್ಯವೇ ಇಲ್ಲ. ಪೂರ್ಣ ಹೆಸರು ಮಂಗಳಂ ಚಿನ್ನಸ್ವಾಮಿ ಮುದಳಿಯಾರ್. 1900ರಲ್ಲಿ ಮಂಡ್ಯದಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲ. ವೃತ್ತಿಪರ ಕ್ರಿಕೆಟಿಗನಲ್ಲದಿದ್ದರೂ ಕರ್ನಾಟಕದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಹಿಂದಿನ ಪ್ರಮುಖ ಶಕ್ತಿಯೇ ಚಿನ್ನಸ್ವಾಮಿ.
ರಾಜ್ಯ ಕ್ರಿಕೆಟ್ ಸಂಸ್ಥೆಗೆ 1953ರಿಂದ 1978ರ ವರೆಗೆ ಕಾರ್ಯದರ್ಶಿ, 1978ರಿಂದ 1990ರ ವರೆಗೆ ಅಧ್ಯಕ್ಷರಾಗಿದ್ದ ಅವರು, ಬಿಸಿಸಿಐಗೆ 1960ರಿಂದ 1965ರ ವರೆಗೆ ಕಾರ್ಯದರ್ಶಿ, 1977ರಿಂದ 1980ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದಿಂದ ಐಸಿಸಿಗೆ 3 ಬಾರಿ ಪ್ರತಿನಿಧಿಯಾಗಿಯೂ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರದಿಂದ ಕ್ರೀಡಾಂಗಣಕ್ಕೆ ಜಾಗ ಮೀಸಲಿಡುವಂತೆ ಮಾಡಿ, ನಿರ್ಮಾಣಕ್ಕೂ ಶ್ರಮ ವಹಿಸಿದ ಚಿನ್ನಸ್ವಾಮಿ ಹೆಸರನ್ನೇ ಬಳಿಕ ಕ್ರೀಡಾಂಗಣಕ್ಕೆ ಇಡಲಾಯಿತು. ಚಿನ್ನಸ್ವಾಮಿ ಅವರು 1991ರಲ್ಲಿ ನಿಧನರಾಗಿದ್ದಾರೆ.
undefined
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದು ಇಂದಿಗೆ 50 ವರ್ಷ!
ಮೊದಲ ಟೆಸ್ಟ್‌ನ ನೆನಪುಗಳನ್ನು ಮೆಲುಕು ಹಾಕಿದ ಮಾಜಿ ಕ್ರಿಕೆಟಿಗರು!
ಸ್ಟೇಡಿಯಂನಲ್ಲಿ ಕಾಲಿಡಲೂ ಆಗದಷ್ಟು ಜನ
ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯ ಕನ್ನಡಿಗರ ಪಾಲಿಗೆ ಅದ್ಭುತ ಕ್ಷಣ. ಈ ಪಂದ್ಯ ನಡೆಯುವ ಸಮಯದಲ್ಲಿ ನಾನಾಗಲೇ ಕರ್ನಾಟಕ ರಣಜಿ ತಂಡದಲ್ಲಿದ್ದೆ. ಮೊದಲ ಅಂ.ರಾ. ಪಂದ್ಯಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಒಂದು ರಣಜಿ ಪಂದ್ಯ ನಡೆದಿತ್ತು. ಭಾರತ-ವಿಂಡೀಸ್ ಪಂದ್ಯವನ್ನು ವೀಕ್ಷಿಸಲು ನಾನು ಕ್ರೀಡಾಂಗಣಕ್ಕೆ ಹೋಗಿದ್ದೆ. ಸ್ಟೇಡಿಯಂನಲ್ಲಿ ಕಾಲಿಡಲೂ ಆಗದಷ್ಟು ಜನ ಸೇರಿದ್ದರು. ಹೊರಗಡೆಯೂ ಜನ ತುಂಬಿದ್ದರು. ಎಲ್ಲೆಲ್ಲೂ ಹಬ್ಬದ ವಾತಾವರಣ. ಆವಾಗೆಲ್ಲಾ ಈಗ ಇರುವ ಹಾಗೆ ವ್ಯವಸ್ಥೆಗಳಿರಲಿಲ್ಲ. ಟಿವಿ, ಫೋನ್ ಇಲ್ಲದ ಕಾಲದಲ್ಲಿ, ಕೇವಲ ರೇಡಿಯೋ ಮೂಲಕ ಜನ ಪಂದ್ಯದ ಕಾಮೆಂಟ್ರಿ ಕೇಳುತ್ತಿದ್ದರು. ಆದರೂ ಮೊದಲ ಪಂದ್ಯಕ್ಕೆ 30 ಸಾವಿರದಷ್ಟು ಜನ ಸೇರಿದ್ದರು. ಕ್ರೀಡಾಂಗಣದಲ್ಲಿ ಗ್ಯಾಲರಿ, ಮೇಲ್ಛಾವಣಿ ಇಲ್ಲದಿದ್ದರೂ ಜನರಿಗೆ ಆಸನಗಳ ವ್ಯವಸ್ಥೆ ಇತ್ತು. ಇಡೀ ನಗರವೇ ಕ್ರಿಕೆಟ್ ಹಬ್ಬ ಆಚರಿಸುವಂತಿತ್ತು. ವೆಸ್ಟ್‌ಇಂಡೀಸ್‌ನ ದಿಗ್ಗಜರು, ಭಾರತದ ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಅಭಿಮಾನಿಗಳು ಜೈಕಾರ ಕೂಗುತ್ತಿದ್ದ ಕ್ಷಣ ಮರೆಯಲಾಗದು.
- ಆರ್. ಸುಧಾಕರ್ ರಾವ್, ಭಾರತದ ಮಾಜಿ ಕ್ರಿಕೆಟಿಗ
IPL 2025 ಮಹತ್ವದ ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯದ ಡೇಟ್ ಫಿಕ್ಸ್! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕೀಥ್ ಬಾಯ್ಸ್‌ರ ಥ್ರೋ ನೋಡಲೆಂದೇ ಹೋಗಿದ್ದೆ
ವಿಂಡೀಸ್ ದೈತ್ಯರು ಭಾರತಕ್ಕೆ ಬರುತ್ತಿದ್ದಾರೆ ಎನ್ನುವುದೇ ನಮಗೆಲ್ಲಾ ಖುಷಿ. ಟಿಕೆಟ್ ಖರೀದಿಸಿ ಎಲ್ಲಾ 5 ದಿನಗಳ ಆಟವನ್ನೂ ನೋಡಿದ್ದೆ. ನನಗೆ ವಿಂಡೀಸ್ ತಂಡದಲ್ಲಿದ್ದ ಆಲ್ರೌಂಡರ್ ಕೀಥ್ ಬಾಯ್ಸ್ ಬಗ್ಗೆ ವಿಪರೀತ ಅಭಿಮಾನ. ಆತ ಬೌಂಡರಿ ಲೈನ್‌ನಿಂದ ಎಸೆಯುತ್ತಿದ್ದ ಚೆಂಡು ರಾಕೆಟ್ ಸ್ಪೀಡ್‌ನಲ್ಲಿ ವಿಕೆಟ್ ಕೀಪರ್ ಡರೆಕ್ ಮರ್ರೆ ಅವರ ಕೈ ಸೇರುತ್ತಿತ್ತು. ಅದನ್ನು ನೋಡುವುದೇ ಒಂದು ಸಂಭ್ರಮ. ಲ್ಯಾನ್ಸ್ ಗಿಬ್ಸ್, ವ್ಯಾನ್‌ಬರ್ನ್ ಹೋಲ್ಡರ್, ಕ್ಲೈವ್ ಲಾಯ್ಡ್ ಹೀಗೆ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಎನಿಸಿದ್ದ ಅನೇಕರು ಈ ಪಂದ್ಯದಲ್ಲಿ ಇದ್ದರು. ನಮ್ಮ ತಂಡದಲ್ಲಿ ಗವಾಸ್ಕರ್, ಜಿಆರ್‌ವಿ, ಬ್ರಿಜೇಶ್, ಪ್ರಸನ್ನ, ಚಂದ್ರ ಹೀಗೆ ಸ್ಟಾರ್ ಆಟಗಾರರ ದಂಡೇ ಇತ್ತು. ಚಿನ್ನಸ್ವಾಮಿ ಕ್ರೀಡಾಂಣದ ಪಕ್ಕದಲ್ಲೇ ಇದ್ದ ಸ್ವಸ್ತಿಕ್ ಯೂನಿಯನ್‌ಗೆ ನಾನು ಕ್ರಿಕೆಟ್ ಆಡುತ್ತಿದ್ದ ಕಾರಣ, ಕ್ರೀಡಾಂಗಣಕ್ಕೆ ಪಾಯ ತೋಡಿದಾಗಿನಿಂದಲೂ ನಾನು ನೋಡಿದ್ದೇನೆ. ಕ್ರೀಡಾಂಗಣ ಬೆಳೆದು ಬಂದಿರುವ ಹಾದಿಯನ್ನು ಅವಲೋಕಿಸಿದಾಗ ಸಂತಸವಾಗುತ್ತದೆ.
- ಕೆ. ಮುರಳೀಧರ್, ಮಾಜಿ ಕ್ರಿಕೆಟಿಗ
ಸಬ್ ಏರ್ ವ್ಯವಸ್ಥೆ ಇರುವ ವಿಶ್ವದ ಏಕೈಕ ಕ್ರಿಕೆಟ್ ಕ್ರೀಡಾಂಗಣ
1969ರ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. 1970ರಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭಗೊಂಡು, 1974ರ ವೇಳೆಗೆ ಅರ್ಧ ಕಾಮಗಾರಿ ಪೂರ್ತಿಗೊಂಡಿತ್ತು. ಆದರೂ, ಟೆಸ್ಟ್ ಕ್ರೀಡಾಂಗಣ ಎನ್ನುವ ಮಾನ್ಯತೆ ಪಡೆಯುವಲ್ಲಿ ಕೆಎಸ್‌ಸಿಎ ಸ್ಟೇಡಿಯಂ ಸಫಲವಾಗಿತ್ತು. 1977ರಿಂದ 1980ರ ವರೆಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಎಂ.ಚಿನ್ನಸ್ವಾಮಿ ಅವರ ನೆನಪಿನಲ್ಲಿ ಕ್ರೀಡಾಂಗಣಕ್ಕೆ 1987ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಎಂದು ಮರುನಾಮರಣ ಮಾಡಲಾಯಿತು.
ಆರಂಭದಲ್ಲಿ ತಾತ್ಕಾಲಿಕ ಗ್ಯಾಲರಿಯನ್ನು ಹೊಂದಿದ್ದ ಕ್ರೀಡಾಂಗಣಕ್ಕೆ ನಂತರ ಸಿಮೆಂಟ್ ಬೆಂಚ್‌ಗಳು ಬಂದವು. 1996ರ ಏಕದಿನ ವಿಶ್ವಕಪ್‌ಗೂ ಮುನ್ನ ಕ್ರೀಡಾಂಗಣಕ್ಕೆ ಫ್ಲಡ್ ಲೈಟ್ಸ್ ಅಳವಡಿಕೆ ಮಾಡಲಾಯಿತು.
ಕ್ರಿಕೆಟ್‌ನಲ್ಲಿ ಗುಡುಗಿದ ಮರಿ ಸೆಹ್ವಾಗ್; ಡಬಲ್ ಸೆಂಚುರಿ ಸಿಡಿಸಿದ ಆರ್ಯವೀರ್!
ಬಳಿಕ ಹಲವು ನವೀಕರಣ ಕಾರ್ಯಗಳು ನಡೆದವು. 2017ರಲ್ಲಿ ಮೈದಾನದಲ್ಲಿ ಸಬ್-ಏರ್ ಸಿಸ್ಟಮ್ ಅಳವಡಿಕೆ ಮಾಡಲಾಯಿತು. ಈ ವ್ಯವಸ್ಥೆ ಹೊಂದಿದ ವಿಶ್ವದ ಮೊದಲ ಕ್ರಿಕೆಟ್ ಕ್ರೀಡಾಂಗಣ ಎನ್ನುವ ಹಿರಿಮೆಗೆ ಚಿನ್ನಸ್ವಾಮಿ ಕ್ರೀಡಾಂಗಣ ಪಾತ್ರವಾಯಿತು. ಸಬ್-ಏರ್ ವ್ಯವಸ್ಥೆಯಿಂದಾಗಿ ಮಳೆ ನಿಂತ 20 ನಿಮಿಷದಲ್ಲಿ ಆಟ ಆರಂಭಿಸಬಹುದು. ಅಲ್ಲದೇ ಲಕ್ಷಾಂತರ ಲೀ. ನೀರು ಸಹ ಸಂಗ್ರಹವಾಗುತ್ತದೆ.
ಇನ್ನು, ಮೇಲ್ಚಾವಣಿಗೆ ಸೋಲಾರ್ ಪ್ಯಾನೆಲ್‌ಗಳ ಅಳವಡಿಕೆ, ಹೊಸ ಫ್ಲಡ್ ಲೈಟ್ಸ್‌ಗೆ ಎಲ್‌ಇಡಿ ಬಲ್ಬ್‌ಗಳ ಬಳಕೆ, ಕಸ ನಿರ್ವಹಣೆ ಹೀಗೆ ಆಧುನಿಕ ವ್ಯವಸ್ಥೆ, ತಂತ್ರಜ್ಞಾನಗಳ ಬಳಕೆ ಮಾಡುವುದಲ್ಲಿ ಕೆಎಸ್‌ಸಿಎ ಸದಾ ಮುಂದಿದೆ.