ಮಕ್ಕಳ ದಿನಾಚರಣೆ: ಅತಿ ಕಿರಿಯ ಹುತಾತ್ಮ ಮಗುವನ್ನು ಸ್ಮರಿಸಿದ ಸೆಹ್ವಾಗ್..!

Published : Nov 14, 2019, 05:19 PM ISTUpdated : Nov 15, 2019, 05:58 PM IST
ಮಕ್ಕಳ ದಿನಾಚರಣೆ: ಅತಿ ಕಿರಿಯ ಹುತಾತ್ಮ ಮಗುವನ್ನು ಸ್ಮರಿಸಿದ ಸೆಹ್ವಾಗ್..!

ಸಾರಾಂಶ

ಪ್ರತಿ ಟ್ವೀಟ್‌ನಲ್ಲೂ ಒಂದಿಲ್ಲೊಂದು ತಮಾಶೆ ಮಾಡುವ ವಿರೇಂದ್ರ ಸೆಹ್ವಾಗ್, ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಹೃದಯಸ್ಪರ್ಶಿ ಕತೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಸತ್ಯ ಕತೆ ಓದಿದರೆ ನಿಮ್ಮ ಕಣ್ಣಲ್ಲೂ ಒಂದು ಹನಿ ನೀರು ಬಂದರೆ ಅಚ್ಚರಿಪಡಬೇಕಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ನ.14]: ಇಂದು ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ದೇಶಕ್ಕಾಗಿ ಪ್ರಾಣತೆತ್ತ 12 ವರ್ಷದ ಯುವ ಸ್ವಾತಂತ್ರ ಹೋರಾಟಗಾರ ಬಾಜಿ ರಾವುತ್ ಎಂಬಾತನನ್ನು ಸ್ಮರಿಸಿಕೊಳ್ಳುವ ಮೂಲಕ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಇಂದೋರ್ ಟೆಸ್ಟ್: ಮತ್ತೆ ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್..!

ಹೌದು, 12 ವರ್ಷದ ಈ ಯುವಕನಿಗೆ ಬ್ರಿಟೀಷರು ತೆಪ್ಪ[ದೋಣಿ]ದಲ್ಲಿ ಬ್ರಾಹ್ಮಣಿ ನದಿ ದಾಟಿಸಲು ಕೇಳುತ್ತಾರೆ. ಆದರೆ ಮತ್ತೊಂದು ಊರಿನಲ್ಲೂ ಬ್ರಿಟೀಷರು ದಬ್ಬಾಳಿಕೆ ನಡೆಸುತ್ತಾರೆ ಎಂದು ಮನಗಂಡು ಬಾಜಿ ರಾವುತ್ ಬ್ರಿಟೀಷರ ಮಾತನ್ನು ತಿರಸ್ಕರಿಸುತ್ತಾನೆ. ಆಗ ಬ್ರಿಟೀಷರು ರಾವುತ್’ನನ್ನು ಗುಂಡಿಕ್ಕಿ ಕೊಲ್ಲುತ್ತಾರೆ ಎಂದು 1938ರಲ್ಲಿ ನಡೆದ ಘಟನೆಯನ್ನು ಸವಿವರವಾಗಿ ಇನ್’ಸ್ಟಾಗ್ರಾಂನಲ್ಲಿ ಬಿಚ್ಚಿಟ್ಟಿದ್ದಾರೆ.

ದೋಣಿ ನಡೆಸುವ ರಾವತ್’ಗೆ ಬ್ರಿಟೀಷರು ಸೇನಾಪಡೆ ನಡೆಸುತ್ತಿದ್ದ ಕ್ರೌರ್ಯಗಳ ಬಗ್ಗೆ ಮೊದಲೇ ಕೇಳಿ ತಿಳಿದಿದ್ದ. ಅಮಾಯಕ ಜನರನ್ನು ಬ್ರಿಟೀಷ್ ಸೈನಿಕರು ಹತ್ಯೆ ಮಾಡಿ ಕ್ರೌರ್ಯ ಮೆರೆಯುತ್ತಿದ್ದ ಅವರ ಬಗ್ಗೆ ರಾವುತ್ ತಿರಸ್ಕಾರವಿತ್ತು. ಇಂತಹ ಸಂದರ್ಭದಲ್ಲೇ ಬ್ರಿಟೀಷರು ನದಿ ದಾಟಿಸಲು ರಾವುತ್’ನನ್ನು ಕೇಳಿಕೊಳ್ಳುತ್ತಾರೆ. ಆಗ ಬ್ರಿಟೀಷರು ನದಿಯ ಮತ್ತೊಂದು ದಡಕ್ಕೆ ಹೋಗಿ ಕ್ರೌರ್ಯ ಮೆರೆಯುವುದನ್ನು ತಡೆಯುವ ಉದ್ದೇಶದಿಂದ ಬ್ರಿಟೀಷ್ ಸೈನಿಕರ ಆಜ್ಞೆಯನ್ನು ತಿರಸ್ಕರಿಸುತ್ತಾನೆ. 

ಆಗ ಬ್ರಿಟೀಷ್ ಸೈನಿಕನೊಬ್ಬ ರಾವುತ್ ಮೃಧುವಾದ ತಲೆಗೆ ಬಂದೂಕಿನ ಬ್ಯಾನೋಟ್’ನಿಂದ ಚುಚ್ಚುತ್ತಾನೆ. ಮತ್ತೊಬ್ಬ ಸೈನಿಕ ನಿರ್ದಯವಾಗಿ ರಾವುತ್ ಮೇಲೆ ಗುಂಡಿನ ಮಳೆಗರಿಯುತ್ತಾನೆ ಎಂದು ಬರೆದಿದ್ದಾರೆ.
ಅಕ್ಟೋಬರ್ 5, 1926ರಲ್ಲಿ ಓಡಿಶಾದ ದೇನ್’ಕಾನಲ್ ಜಿಲ್ಲೆಯ ನೀಲಕಾಂತಪುರದಲ್ಲಿ ಕಂದಾಯತ್ ಎಂಬ ಬಡ ಕುಟುಂಬದಲ್ಲಿ ಬಾಜಿ ರಾವುತ್ ಜನಿಸುತ್ತಾರೆ. ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ರಾವುತ್’ನನ್ನು ತಾಯಿ ಅವರಿವರ ಮನೆ ಕೆಲಸ ಮಾಡಿ ಸಾಕುತ್ತಾರೆ ಎಂದು ಓಡಿಶ ಸರ್ಕಾರಿ ವೆಬ್’ಸೈಟ್’ನಲ್ಲಿ ಉಲ್ಲೇಖಿಸಲಾಗಿದೆ.

ಈ ಯುವ ಸ್ವಾತಂತ್ರ ಹೋರಾಟಗಾರರ ಜನ್ಮದಿನವನ್ನು ಮರಳು ಕಲಾವಿದ ಸುದರ್ಶನ್ ಪಟ್ನಾಯಿಕ್ ಪುರಿ ಬೀಚ್’ನಲ್ಲಿ ಅವರನ್ನು ನಿರ್ಮಿಸುವ ಮೂಲಕ ಗೌರವ ನಮನ ಸಲ್ಲಿಸಿದ್ದರು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!