ವಾವ್..! ಹಾಟ್ ಹೋಳಿ ಡ್ರೆಸ್‌ನಲ್ಲಿ ಮಲೈಕಾ ಕೂಲ್ ಕೂಲ್

By Suvarna NewsFirst Published Mar 29, 2021, 10:30 PM IST
Highlights

ಬಣ್ಣವೆಲ್ಲಾ ಬಟ್ಟೆಯಲ್ಲೇ ತುಂಬಿಕೊಂಡು ಕುಳಿತ ಚೈಂಯಾ ಚೈಂಯಾ ಚೆಲುವೆ..! ಹಬ್ಬದ ನಡುವೆ ಒಂದು ಹಾಟ್ ಲುಕ್

ಬಾಲಿವುಡ್ ನಟಿ ಮಲೈಕಾ ಅರೋರಾ ಹೋಲಿ ದಿನ ಕೂಲ್ & ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರೂ ಹೊರಗಡೆ ಹಬ್ಬ ಮಾಡ್ತಿದ್ರೆ ಕೂಲ್ ಆಗಿ ಒಳಗೆ ಕುಳಿತಿದ್ದಾರೆ ಮಲೈಕಾ, ಆದ್ರೆ ಪೋಸ್ ಮಾತ್ರ ಹಾಟ್.

ಸಿಂಗಲ್ ಶೋಲ್ಡರ್ ಡ್ರೆಸ್‌ನಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ ನಟಿ. ಕೆಂಪು, ನೀಲಿ ಸೇರಿ ಹಲವು ಬಣ್ಣಗಳು ಮಿಶ್ರವಾಗಿರೋ ಉಡುಪಿನ ವಿನ್ಯಾಸವೂ ಸೂಪರ್. ಇದಕ್ಕೆ ವೈಟ್ ಕಲರ್ ನೇಲ್ ಪಾಲಿಶ್ ಹಚ್ಚಿಕೊಂಡಿದ್ದಾರೆ.

ಶಾಲಾ ಪಠ್ಯದಲ್ಲಿ ಬಾಲಿವುಡ್‌ನ ಮುನ್ನಿ ಬದನಾಮ್ ಐಟಂ ಸಾಂಗ್..!

ಇಯರಿಂಗ್ಸ್ ಮತ್ತು ನೆಕ್ ಆರ್ನಮೆಂಟ್ ಅವಾಯ್ಡ್ ಮಾಡ್ಕೊಂಡು ರಿಂಗ್ ಧರಿಸಿದ್ದಾರೆ. ಕೂದಲನ್ನು ಬಾಚಿ ಎತ್ತರದಲ್ಲಿ ಬನ್ ಮಾಡಿದ್ದಾರೆ. ಟೋಟಲಿ ಸಮ್ಮರ್ ಜೊತೆ ಫೆಸ್ಟಿವ್ ಲುಕ್‌ನ್ನೂ ಪರ್ಫೆಕ್ಟ್ ಆಗಿ ಕೊಟ್ಟಿದ್ದಾರೆ.

ಮಲೈಕಾ ಇತ್ತೀಚೆಗೆ ತನ್ನ ಗೆಳೆಯ, ನಟ ಅರ್ಜುನ್ ಕಪೂರ್ ಅವರೊಂದಿಗೆ ತನ್ನ ಸಹೋದರಿ ಅಮೃತಾ ಅರೋರಾ ಮನೆಯಲ್ಲಿ ಪಾರ್ಟಿ ಮಾಡುವ ಫೋಟೋ ವೈರಲ್ ಆಗಿತ್ತು. ಈ ದಂಪತಿಗೆ ಕರಣ್ ಜೋಹರ್, ಕರಿಷ್ಮಾ ಕಪೂರ್, ಸಂಜಯ್ ಕಪೂರ್, ಮಹೀಪ್ ಕಪೂರ್, ಸೀಮಾ ಖಾನ್, ಮನೀಶ್ ಮಲ್ಹೋತ್ರಾ ಮತ್ತು ಗೌರಿ ಕಂಪನಿ ಕೊಟ್ಟಿದ್ದರು.

click me!