ಅವರು ಮನೆಗೆ ಬಂದಾಗ ಮೂರೇ ಮೂರು ನಿಮಿಷ ಅಷ್ಟೇ... ಕಾಸ್ಟಿಂಗ್​ ಕೌಚ್​ ಕುರಿತು ನಟಿ ಅನಸೂಯಾ ಹೇಳಿದ್ದೇನು?

By Suvarna News  |  First Published Apr 29, 2024, 7:10 PM IST

‘ಪುಷ್ಪ: ದಿ ರೈಸ್’ ಚಿತ್ರ ನಟಿ ಅನುಸೂಯಾ ಭಾರದ್ವಾಜ್​ ಅವರು ಮನೆಗೆ ಬಂದ ವ್ಯಕ್ತಿಗಳನ್ನು ಮೂರೇ ನಿಮಿಷಗಳಲ್ಲಿ ಹೇಗೆ ಡೀಲ್​ ಮಾಡುತ್ತೇನೆ ಎನ್ನುವ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು? 
 


‘ಪುಷ್ಪ: ದಿ ರೈಸ್’ ಚಿತ್ರದ ಮೂಲಕ ಸಕತ್​ ಫೇಮಸ್​ ಆಗಿದ್ದಾರೆ ತೆಲುಗಿನ ಖ್ಯಾತ ನಟಿ ಅನಸೂಯಾ ಭಾರದ್ವಾಜ್. ಖ್ಯಾತ  ನಿರೂಪಕಿ ಎಂದೂ ಹೆಸರು ಪಡೆದಿರುವ ಇವರು,  ‘ರಂಗಸ್ಥಳಂ’ ಹಾಗೂ ‘ಪುಷ್ಪ: ದಿ ರೈಸ್’ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದವರು. ಸಾಮಾಜಿಕ ಜಾಲತಾಣದಲ್ಲಿಯೂ ನಟಿ ಅಷ್ಟೇ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ್ಗೆ ಕೆಲವೊಂದು ವಿಷಯಗಳ ಬಗ್ಗೆ ಚರ್ಚಿಸುತ್ತಿರುತ್ತಾರೆ, ಬೋಲ್ಡ್​, ಕ್ಯೂಟ್​, ಹಾಟ್​ ಫೋಟೋಶೂಟ್​ ಮಾಡಿಸಿಕೊಂಡು ಅದರ ವಿಡಿಯೋ ಶೇರ್​ ಮಾಡುತ್ತಿರುತ್ತಾರೆ. ಮೊನ್ನೆ ದಸರಾ ಸಂದರ್ಭದಲ್ಲಿಯೂ  ಆಕರ್ಷಕವಾದ ಗುಲಾಬಿ ಬಣ್ಣದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟು  ಚೆಲುವೆಯಾಗಿ ಮಿಂಚಿದ್ದರು.  ಇದೀಗ ನಟಿ ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿದ್ದಾರೆ.

ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದು, ಇದೀಗ  ನಟಿ  ಅನಸೂಯಾ ಭಾರದ್ವಾಜ್ ಈ ವಿಷಯ ಬಿಚ್ಚಿಟ್ಟಿದ್ದಾರೆ. ಅವರು ಮೂರು ನಿಮಿಷಗಳ ಕುರಿತು ಮಾತನಾಡಿದ್ದಾರೆ.

Tap to resize

Latest Videos

ಅಶೋಕಂಗೆ ಕರಿಮಣಿ ಮಾಲೀಕ ನೀನಲ್ಲ ಎನ್ನೋದಾ ಪ್ರಿಯಾ: ಹೀಗೆಲ್ಲಾ ಹೇಳ್ಬೇಡಿ ಪ್ಲೀಸ್​ ಅಂತಿದ್ದಾರೆ ಫ್ಯಾನ್ಸ್​

ಕಾಸ್ಟಿಂಗ್ ಕೌಚ್ ಅನುಭವ ತಮಗೂ ಆಗಿದೆ ಅನ್ನೋದನ್ನು ಅನಸೂಯಾ ಭಾರದ್ವಾಜ್ ಹೇಳಿಕೊಂಡಿದ್ದು, ಆದರೆ ಮೂರೇ ಮೂರು ನಿಮಿಷದಲ್ಲಿ ನಾನು ಹೇಗೆ ಅದನ್ನು ಬಗೆಹರಿಸಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದೇ ರೀತಿ ಎಲ್ಲಾ ನಟಿಯರಿಗೂ ತಮ್ಮ ಟಿಪ್ಸ್​ ಮಾದರಿಯಾಗಬೇಕು ಎಂದಿದ್ದಾರೆ. ಈ ಹಿಂದೆ ತಮ್ಮ ಬಳಿ ಬಂದವರು ಬೇರೆಯ ಅರ್ಥಗಳಲ್ಲಿ ಮಾತನಾಡಲು ಶುರು ಮಾಡಿದಾಗ ಇದರಿಂದ ನಾಜೂಕಾಗಿ ಪಾರಾಗಿದ್ದೇನೆ ಎಂದು ಹೇಳಿದ್ದಾರೆ.  ಸಿನಿಮಾ ವಿಷಯಕ್ಕೆ ಯಾರನ್ನಾದರೂ ಭೇಟಿ ಆದಾಗ, ಅವರ ಉದ್ದೇಶವೇನು ಅನ್ನೋದು ಮೊದಲ ಮೂರು ನಿಮಿಷಗಳಲ್ಲೇ ಗೊತ್ತಾಗುತ್ತೆ, ಈ ಮೂರು ನಿಮಿಷಗಳಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತೇನೆ.  ಇಂತಹ ಸಮಯದಲ್ಲಿ ಮುಜುಗರ ಪಡುವಂತಹ ಸ್ಥಿತಿ ಎದುರಾದರೆ, ತಕ್ಷಣವೇ ವಿಷಯ ಬದಲಿಸಿ, ಗಂಡ ಹಾಗೂ ಮಕ್ಕಳ ಬಗ್ಗೆ ಮಾತಾಡುವುದಕ್ಕೆ ಶುರು ಮಾಡುತ್ತೇನೆ. ಆಗ ಬಂದವರು ಸುಮ್ಮನಾಗಿ ಹೋಗುತ್ತದೆ.  ಚಿತ್ರರಂಗದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದು ನಿಲ್ಲುವುದಿಲ್ಲ. ಹಾಗಾಗಿ ಯಾವುದೋ ಉದ್ದೇಶದಿಂದ ನಿಮ್ಮನ್ನು ಮಾತಾಡಿಸುವವರೊಂದಿಗೆ ಸ್ವಾಭಾವಿಕವಾಗಿ ನಟಿಸಬೇಕು ಎಂದು ಅನಸೂಯಾ ಹೇಳಿಕೊಂಡಿದ್ದಾರೆ. 
 
ತೆರೆ ಹಾಗೂ ಬೆಳ್ಳಿತೆರೆಯಲ್ಲಿ ತನಗೊಂದು ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿರುವ ಅನುಸೂಯಾ ಅವರು ತಮ್ಮ ಡ್ರೆಸ್​ಗಳಿಂದ ಟ್ರೋಲ್​ಗೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಆದರೆ ನೇರಾನೇರ ಮುಖದ ಮೇಲೆ ಹೊಡೆಯುವಂತೆ ರಿಪ್ಲೈ ಮಾಡುವುದರಲ್ಲಿಯೂ ಈಕೆ ಫೇಮಸ್​. ಇದೀಗ ಹಾಗೆಯೇ ಆಗಿದೆ. ಅಷ್ಟಕ್ಕೂ ಆಗಿರೋದು ಏನೆಂದರೆ, ಕೆಲ ದಿನಗಳ ಹಿಂದೆ ಅವರು ಬ್ಲ್ಯಾಕ್​ ಆ್ಯಂಡ್​ ವೈಟ್​ ಕಾಲದ ಹಿರಿಯ ನಟಿ ಸಾವಿತ್ರಿ ಅವರ ಹಾಡುಗಳನ್ನು ಮರುಸೃಷ್ಟಿಸಿದ್ದರು. ಅವರದ್ದೇ ರೀತಿಯಲ್ಲಿ ಸಂಪ್ರದಾಯವಾದ ಗೆಟಪ್‌ನಲ್ಲಿ ಕಂಡುಬಂದು, ಸಾವಿತ್ರಿ ಅವರ ಹಾಡುಗಳನ್ನು  ಮರುಸೃಷ್ಟಿಸಿದ್ದರು. ಇದು ಸಾಕಷ್ಟು ಟ್ರೋಲ್​ಗೆ ಕಾರಣವಾಗಿತ್ತು. ಇನ್ನು ಅನಸೂಯಾ ಅವರ ಸಿನಿ ವಿಷಯದ ಕುರಿತು ಹೇಳುವುದಾದರೆ, ಇವರು  ಇತ್ತೀಚೆಗೆ ಶ್ರೀಕಾಂತ್ ಅಡ್ಡಾಳ ಅವರ ಪೆದ್ದ ಕಾಪು 1 ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರು ಅಲ್ಲು ಅರ್ಜುನ್ ಮತ್ತು ಸುಕುಮಾರ್ ಅವರ ಮುಂಬರುವ ಚಿತ್ರ ಮತ್ತು ಬಹು ನಿರೀಕ್ಷಿತ ಸೀಕ್ವೆಲ್ ಪುಷ್ಪಾ ದಿ ರೂಲ್‌ನ ಭಾಗವಾಗಲಿದ್ದಾರೆ ಎಂದು ತಿಳಿದುಬಂದಿದೆ.

ಅವ್ರು ಸುರಸುಂದರ... ಮದ್ವೆಯಾಗಲು ನನಗೇ ತೊಂದ್ರೆ ಇಲ್ಲ, ನಿಮ್ಮದೇನ್ರಿ? ಟ್ರೋಲಿಗರ ಕೆನ್ನೆಗೆ ಬಾರಿಸಿದ ನಟಿ ವರಲಕ್ಷ್ಮಿ

click me!