ಪ್ರಿಯಾಂಕಾಳ ಹಳೆ ಮನೆಗೆ ಶಿಫ್ಟ್ ಆಗ್ತಾರಾ ಜಾಕ್ವೆಲಿನ್: ಇಷ್ಟು ಸಮಯ ಇದ್ದಿದ್ದು ಬಾಡಿಗೆ ಮನೇಲಿ

By Suvarna NewsFirst Published Feb 6, 2021, 12:31 PM IST
Highlights

ಶ್ರೀಲಂಕಾ ಚೆಲುವೆ  ಜಾಕ್ವೆಲಿನ್ ಫರ್ನಾಂಡೀಸ್ ಬಾಡಿಗೆ ಮನೆಯಿಂದ ಶಿಫ್ಟ್ ಆಗುತ್ತಿದ್ದಾರೆ. ಎಲ್ಲಿಗೆ ಅಂತೀರಾ..? ಇಲ್ಲಿ ಓದಿ

ಕಳೆದ ಹಲವಾರು ವರ್ಷಗಳಿಂದ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಪ್ರಿಯಾಂಕಾ ಚೋಪ್ರಾ ಒಡೆತನದ ಜುಹು ಮನೆಗೆ ಶಿಫ್ಟ್ ಆಗುತ್ತಿದ್ದಾರೆ.

ಪ್ರಿಯಾಂಕಾ ಅವರು 2018 ರಲ್ಲಿ ನಿಕ್ ಜೊನಸ್ ಅವರೊಂದಿಗೆ ಮದುವೆಯಾದಾಗಾ ವಾಸಿಸುತ್ತಿದ್ದ ಮನೆಗೆ ಶಿಫ್ಟ್ ಆಗ್ತಿದ್ದಾರಂತೆ ಜಾಕಿ. ಈ ಮನೆ ಕರ್ಮಯೋಗ್ ಎಂಬ ಕಟ್ಟಡದಲ್ಲಿದ್ದು ಇದರ ಮೌಲ್ಯ ಬರೋಬ್ಬರಿ 7 ಕೋಟಿ.

ಇಬ್ಬಿಬ್ಬರು ಕಾಜಲ್: ಪತಿ ಗೌತಮ್ ಕನ್ಫ್ಯೂಸ್

ಜಾಕ್ವೆಲಿನ್ ಇತ್ತೀಚೆಗೆ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಇದು ವಿಸ್ತಾರವಾದ ಲಿವಿಂಗ್ ಏರಿಯಾ ಮತ್ತು ಬಿಸಿಲಿ ಬೀಲೋ ಬಾಲ್ಕನಿಯನ್ನು ಹೊಂದಿದೆ. ಬಾಂದ್ರಾದಲ್ಲಿದ್ದ ನಟಿ ಈ ಮನೆಯನ್ನು ನೋಡಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ಜಾಕಿ ಬಚ್ಚನ್ ಪಾಂಡೆ, ಭೂತ್ ಪೊಲೀಸ್, ಸರ್ಕಸ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಲಾಕ್‌ಡೌನ್ ಸಮಯದಲ್ಲಿ ಸಲ್ಮಾನ್ ಖಾನ್ ಜೊತೆ ಅವರ ಫಾರ್ಮ್ ಹೌಸ್‌ನಲ್ಲಿ ಉಳಿದುಕೊಂಡಿದ್ದರು.

click me!