ಮರ್ಯಾದಾ ಹತ್ಯೆ: ತೆರೆ ಕಾಣುತ್ತಿದೆ ಪ್ರಣಯ್- ಅಮೃತಾ ಪ್ರೇಮ ಕಥೆ!

By Suvarna NewsFirst Published Mar 12, 2020, 3:55 PM IST
Highlights

ಕುಟುಂಬವನ್ನು ವಿರೋಧಿಸಿ ಕೆಳ ವರ್ಗದ ಹುಡುಗನನ್ನು ವರಿಸಿದ ತಪ್ಪಿಗೆ ಪತಿಯನ್ನೇ ಕೊಲ್ಲಲಾಯಿತು. ರಿಯಲ್ ಎಸ್ಟೇಟ್ ಉದ್ಯಮಿ ಮಗಳ ಕಥೆ ಟಾಲಿವುಡ್‌ನಲ್ಲಿ ಇದೀಗ ಸಿನಿಮಾವಾಗಿದ್ದು, ತೆರೆ ಕಾಣುತ್ತಿದೆ. 

ಮಾರ್ಚ್‌ 20ರಂದು ರಾಜ್ಯದ್ಯಾಂತ ತೆರೆ ಕಾಣುತ್ತಿರುವ ತೆಲುಗು ಸಿನಿಮಾ 'ಅನ್ನಪೂರ್ಣಮ್ಮಗಾರಿ ಮನವಡು' ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದಲಿತ ಯುವಕ ಪ್ರಣಮ್‌ ಹಾಗೂ ಸಿರಿವಂತ ರಿಯಲ್ ಎಸ್ಟೇಟ್ ಉದ್ಯಮಿ ಕುಟುಂಬಕ್ಕೆ ಸೇರಿದ ಯುವತಿ ಅಮೃತಾಳ ಲವ್‌ ಸ್ಟೋರಿ ಇದು ಎನ್ನಲಾಗಿದೆ.

ನರಾ ಶಿವನಾಗೇಶ್ವರ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಣಯ್‌ ಹಾಗೂ ಅಮೃತಾಳ ಪಾತ್ರವನ್ನು ನಟ ಬಾಲಾದಿತ್ಯ ಹಾಗೂ ಅರ್ಚನಾ ನಿಭಾಯಿಸುತ್ತಿದ್ದಾರೆ.   

ಮಗಳು ದಲಿತ ಯುವಕನನ್ನು ಮದುವೆಯಾದ ಕಾರಣ ರಿಯಲ್‌ ಎಸ್ಟೇಟ್‌ ಉದ್ಯಮಿಯಾದ ಮಾರುತಿ ರಾವ್‌ ಅಳಿಯ ಪ್ರಣಯ್‌ ಕೊಲ್ಲಲು 1 ಕೋಟಿ ರೂ. ಸುಪಾರಿ ನೀಡಿ, ಹತ್ಯೆ ಮಾಡಿಸಿದ್ದಾರೆ. 2018ರಲ್ಲಿ ನಡೆದ ಈ ಘಟನೆಗೆ ಮಗಳೇ ತಂದೆ ವಿರುದ್ಧ ದೂರು ನೀಡಿದ್ದರು. ಪ್ರಕರಣದಲ್ಲಿ ನಾನು ದೋಷಿಯಾಗುತ್ತೇನೆಂದು ಖಚಿತವಾಗುತ್ತಿದ್ದಂತೆ, ಅಮೃತಾ ತಂದೆ ಕ್ಷಮಾಪಣೆ ರೂಪದ ಡೆತ್ ನೋಟ್ ಬರೆದು, ಹೈದರಾಬಾದ್‌ನ ಮಾರ್ಚ್‌ 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

1 ಕೋಟಿ ಕೊಟ್ಟು ಅಳಿಯನ ಮರ್ಯಾದಾ ಹತ್ಯೆ ಮಾಡಿಸಿದ್ದ ಉದ್ಯಮಿ ರಾವ್‌ ಆತ್ಮಹತ್ಯೆ!

ಆದರೆ, ಈ ಸಿನಿಮಾ ಮಾಡಲು ಅಮೃತಾ ಅನುಮತಿ ಪಡೆದಿಲ್ಲವೆಂದು ಹೇಳಲಾಗುತ್ತಿದೆ. ಮರಾಠಿಯಲ್ಲಿ ಇದೇ ಪ್ರೇಮಾ ಕಥಾ ಹಂದರವಿರುವ ಸೈರಾಟ್ ಎಂಬ ಚಿತ್ರವೂ ತೆರೆ ಕಂಡಿತ್ತು. ಬಡ ಹುಡುಗನನ್ನು ಮದುವೆಯಾದ ಸಿರಿವಂತರ ಮಗಳು ಎದುರಿಸುವ ಸಮಸ್ಯೆಗಳ ಕುರಿತ ಚಿತ್ರವಾಗಿತ್ತು ಅದು. ಇದೀಗ ಈ ತೆಲುಗು ಚಿತ್ರವೂ ಅದೇ ರೀತಿ ಇರುತ್ತಾ ಕಾದು ನೋಡಬೇಕು.

click me!