ಅತ್ಯಾಚಾರ ಯತ್ನ: 1 ವರ್ಷ ಆಸ್ಪತ್ರೆಯಲ್ಲಿ ಉಚಿತ ಸೇವೆಯ ಶಿಕ್ಷೆ

By Web DeskFirst Published Nov 1, 2019, 8:50 AM IST
Highlights

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಕೋರ್ಟಿಂಗ್ ಭಿನ್ನ ಶಿಕ್ಷೆಯೊಂದು ಸಿಕ್ಕಿದೆ. ಒಂದು ವರ್ಷಗಳ ಕಾಲ ಆತ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಲ್ಲಿಸಬೇಕಿದೆ. 

ಚಿತ್ರದುರ್ಗ [ಅ.01]: ಏಳು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಪ್ರಾಪ್ತನಿಗೆ 10 ಸಾವಿರ ರು. ದಂಡ ಹಾಗೂ ಒಂದು ವರ್ಷದ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಲ್ಲಿಸುವಂತೆ ಶಿಕ್ಷೆ ನೀಡಿ ಅ.18ರಂದು ಚಿತ್ರದುರ್ಗದ ಜಿಲ್ಲಾ ಬಾಲ ನ್ಯಾಯಾಮಂಡಳಿ ಅಪರೂಪದ ತೀರ್ಪೊಂದನ್ನು ನೀಡಿದೆ. 

7 ವರ್ಷದ ಬಾಲಕಿ ಮೇಲೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂಬಂಧ ಚಳ್ಳಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಅನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಮಂಡಳಿಗೆ ದೋಷಾರೋಪಣಾ ಪಟ್ಟಿಸಲ್ಲಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಲಿಸಿ

ಪ್ರಕರಣದ ವಾದ ಪ್ರತಿವಾದವನ್ನು ಆಲಿಸಿದ ಚಿತ್ರದುರ್ಗ ಬಾಲ ನ್ಯಾಯಮಂಡಳಿಯ ಪ್ರಧಾನ ದಂಡಾಧಿಕಾರಿ ಸಿ.ಎಸ್‌.ಜಿತೇಂದ್ರನಾಥ್‌ ಮತ್ತು ಸದಸ್ಯರಾದ ಎಸ್‌.ಮಧುಕರ್‌ ಹಾಗೂ ಸುಮನಾ ಎಸ್‌.ಅಂಗಡಿ ಅವರು ಪ್ರಕರಣದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಐಪಿಎಸ್‌ ಕಲಂ 354(ಬಿ) ಹಾಗೂ ಪೋಕ್ಸೋ ಕಾಯ್ದೆ ಕಲಂ 8ರ ಅಪರಾಧಕ್ಕೆ ರು.10 ಸಾವಿರ ದಂಡ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ವರ್ಷ(ಪ್ರತಿ ಶನಿವಾರ) ಉಚಿತ ಸೇವೆ ಸಲ್ಲಿಸುವಂತೆ ತೀರ್ಪು ನೀಡಿ ಆದೇಶ ಹೊರಡಿಸಿದೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ವಾದ ಮಂಡಿಸಿದ್ದರು.

click me!