ನಬಾರ್ಡ್‌ನಿಂದಲೂ ಕರ್ನಾಟಕಕ್ಕೆ ಘೋರ ಅನ್ಯಾಯ: ಸಚಿವ ಡಿ.ಸುಧಾಕರ್‌

By Kannadaprabha News  |  First Published Nov 17, 2024, 6:00 AM IST

ನಬಾರ್ಡ್ ನಿಂದ ರಾಜ್ಯಕ್ಕೆ ಬರುತ್ತಿದ್ದ ಆರ್ಥಿಕ ನೆರವಿನಲ್ಲಿ ಶೇ.58ರಷ್ಟು ಕಡಿತ ಮಾಡಲಾಗಿದೆ. ಈ ವರ್ಷ ರಾಜ್ಯಕ್ಕೆ ನಬಾರ್ಡ್ ನೀಡಬೇಕಿದ್ದರು. 5800 ಕೋಟಿ ಆರ್ಥಿಕ ನೆರವಿನಲ್ಲಿ ಕೇವಲ ರು.2300 ಕೋಟಿ ಮಾತ್ರ ನೀಡಿದೆ. ರು. 3500 ಕೋಟಿ ಬಿಡುಗಡೆ ಮಾಡಿಲ್ಲ ಎಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌


ಚಿತ್ರದುರ್ಗ(ನ.17):  ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ನಿಂದಲೂ ರಾಜ್ಯಕ್ಕೆ ಘೋರ ಅನ್ಯಾಯವಾಗಿದ್ದು, ಸಾವಿರಾರು ಕೋಟಿ ರುಪಾಯಿ ಅನುದಾನ ಕಡಿತವಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಹೇಳಿದರು. 

ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಆಯೋಜಿ ಸಲಾಗಿದ್ದ, 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಉದ್ಘಾಟಿಸಿ ಮಾತನಾಡಿದ ಅವರು, ನಬಾರ್ಡ್ ನಿಂದ ರಾಜ್ಯಕ್ಕೆ ಬರುತ್ತಿದ್ದ ಆರ್ಥಿಕ ನೆರವಿನಲ್ಲಿ ಶೇ.58ರಷ್ಟು ಕಡಿತ ಮಾಡಲಾಗಿದೆ. ಈ ವರ್ಷ ರಾಜ್ಯಕ್ಕೆ ನಬಾರ್ಡ್ ನೀಡಬೇಕಿದ್ದರು. 5800 ಕೋಟಿ ಆರ್ಥಿಕ ನೆರವಿನಲ್ಲಿ ಕೇವಲ ರು.2300 ಕೋಟಿ ಮಾತ್ರ ನೀಡಿದೆ. ರು. 3500 ಕೋಟಿ ಬಿಡುಗಡೆ ಮಾಡಿಲ್ಲ ಎಂದರು. 

Tap to resize

Latest Videos

undefined

ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ, ಎರಡೂ ಒಂದೇ: ಶಂಕರ ಬಿದರಿ

ಬರಗಾಲದಿಂದ ತತ್ತರಿಸಿದ ರಾಜ್ಯದ ರೈತರಿಗೆ ನಬಾರ್ಡ್ ನೆರವಿನ ಹಸ್ತ ಚಾಚಬೇಕಿದೆ. ರಾಜ್ಯದ ಎಲ್ಲಾ ರಾಜಕೀಯ ನಾಯಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕಡಿತಗೊಳಿಸಿದ ಬಾಕಿ ಹಣವನ್ನುನಬಾಡ್ ೯ನಿಂದ ಬಿಡುಗಡೆ ಮಾಡಿಸಬೇಕು. ರಾಜ್ಯದ ಡಿಸಿಸಿ ಬ್ಯಾಂಕುಗಳು ನಬಾರ್ಡ್‌ನಿಂದ ಪಡೆದ ಸಾಲ ಮರುಪಾತಿ ಮಾಡಲು ಹೆಚ್ಚಿನ ಬಡ್ಡಿ ದರದಲ್ಲಿ ಬೇರೆ ಕಡೆಯಿಂದ ಸಾಲ ಮಾಡುವ ಪರಿಸ್ಥಿತಿ ಉಂಟಾಗಿದೆ. ನಬಾರ್ಡ್ ಆರ್ಥಿಕ ನೆರವು ಹೆಚ್ಚಿಸುವ ಕುರಿತು,
ಮುಖ್ಯಂತ್ರಿಗಳು ಹಾಗೂ ಸಹಕಾರಿ ಸಚಿವರು, ಪ್ರಧಾನ ಮಂತ್ರಿ ಹಾಗೂ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ. ನಬಾರ್ಡ್‌ ನೆರವು ನೀಡದಿದ್ದರೆರಾಜ್ಯದ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಸಚಿವ ಡಿ.ಸುಧಾಕರ್‌ ತಿಳಿಸಿದರು.  

ಚಿತ್ರದುರ್ಗ ಬರಪೀಡಿತ ಜಿಲ್ಲೆಯಾಗಿದ್ದು, ಡಿಸಿಸಿ ಬ್ಯಾಂಕ್ ಮೂಲಕ 70300 ರೈತರಿಗೆ ರು. 700 ಕೋಟಿ ಬೆಳೆ ಸಾಲ ಹಾಗೂ ಕೃಷಿ ಸಾಲ ನೀಡಲಾಗಿದೆ. ಇನ್ನೂ ಹೆಚ್ಚಿನ ರೈತರು ಸಾಲಕ್ಕೆ ಬೇಡಿಕೆ ಇಟ್ಟಿದ್ದಾರೆ. ನಬಾರ್ಡ್ ನೆರವು ದೊರೆತರೆ ಇನ್ನೂ ಹೆಚ್ಚಿನ ರೈತರಿಗೆ ನೆರವು ನೀಡಬಹುದು. ಸಹಕಾರ ಚಳುವಳಿ ವಿಶ್ವದಾದ್ಯಂತ ವ್ಯಾಪಿಸಿದೆ. 130 ದೇಶಗಳಲ್ಲಿ 30 ಲಕ್ಷ ಸಹಕಾರಿ ಸಂಘ ಗಳಿಂದ 100 ಕೋಟಿಗೂ ಅಧಿಕ ಜನ ಸದಸ್ಯರಿದ್ದಾರೆ. ಭಾರತ ದೇಶದ ಸಹಕಾರಿ ಚಳುವಳಿ ದೊಡ್ಡದು. ರಾಷ್ಟ್ರ ದಲ್ಲಿ 8.5 ಲಕ್ಷ ಸಹಕಾರಿ ಸಂಸ್ಥೆಗಳು ಇದ್ದು, ಇದರಲ್ಲಿ 31ಕೋಟಿ ಜನರು ಇದ್ದಾರೆ. ಸಹಕಾರತ ರತತ್ವದ ಆಚರಣೆ ಬಗ್ಗೆ ಜನ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದರು. 

ರಾಜ್ಯದಲ್ಲಿ 47 ಸಾವಿರ ಸಹಕಾರಿ ಸಂಘಗಳು ಇದ್ದು.2.7ಕೋಟಿಜನರುಇದರಲ್ಲಿಪಾಲ್ಗೊಂಡಿದ್ದಾರೆ. ರಾಜ್ಯದ ಸಹಕಾರಿ ವ್ಯವಸ್ಥೆಯಲ್ಲಿ ಕೃಷಿ ಪತ್ತಿನ, ಹೈನುಗಾರಿಕೆ, ಸಹಕಾರಿ ಬ್ಯಾಂಕುಗಳು ಗಣನೀಯ ಸಾಧನೆ ಮಾಡಿವೆ. ಅಪೆಕ್ಸ್, ಡಿಸಿಸಿ ಬ್ಯಾಂಕ್‌ಗಳು ಸಧೃಡವಾಗಿವೆ. ಸಹಕಾರ ವಲಯದ ಬಗ್ಗೆ ಜನರಿಗೆ ಸಾಕಷ್ಟು ಪ್ರಚಾರ ನೀಡಬೇಕಿದೆ ಎಂದು ಡಿ.ಸುಧಾಕರ್ ಹೇಳಿದರು. 

ಸಂಸದ ಎಂಗೋವಿಂದ ಕಾರಜೋಳ ಮಾತನಾಡಿ, ಸಹಕಾರಿ ಬ್ಯಾಂಕುಗಳು ಗ್ರಾಮೀಣ ಕ್ಷೇತ್ರಕ್ಕೂ ತಮ್ಮ ಸೇವೆಯನ್ನು ನೀಡುತ್ತಿವೆ. ಶೂನ್ಯ ಬಡ್ಡಿದರಲ್ಲಿ ರೈತರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಸಹಕಾರಿ ಇಲಾಖೆ ಸ್ಥಾಪಿಸಿ, ಸಹಕಾರಿ ಸಂಸ್ಥೆಗಳಿಗೆ ಹಲವು ಉದ್ದಿಮೆ ಸ್ಥಾಪಿಸಲು ನೆರವು ನೀಡುತ್ತಿದ್ದಾರೆ. ರಾಜ್ಯದ ಸಹಕಾರಿ ಸಂಸ್ಥೆಗಳಲ್ಲಿ ಶೇ.50 ರಷ್ಟು ಮಹಿಳೆಯರನ್ನು ಸದಸ್ಯರನ್ನಾಗಿಸಲುಪ್ರಯತ್ನ ನಡೆಸಬೇಕು. ರಾಜ್ಯದಲ್ಲಿ ಯಾವುದೇ ಸಹಕಾರಿ ಸಂಸ್ಥೆಗಳು ಮುಚ್ಚುವಂತಾಗ ಬಾರದು. ಇವುಗಳಿಗೆ ರಾಜ್ಯ ಸರ್ಕಾರದಿಂದ ಅಗತ್ಯ ನೆರವು ನೀಡಿ ಪುನಶ್ಚತನಗೊಳಿಸಬೇಕು ಎಂದರು. 

ಬಹಿರಂಗವಾಗಿ ಹಣ ಹಂಚುವ ಕಾಂಗ್ರೆಸ್‌ಗೆ ಸಾಕ್ಷಿಗುಡ್ಡೆ ಬೇಕಾ?: ಅಶೋಕ್‌ ಕಿಡಿ

ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷಹಾಗೂ ಶಾಸಕ ಜಿ.ಟಿ.ದೇವೇಗೌಡ, ರಾಜ್ಯದಲ್ಲಿ 47 ಸಾವಿರ ಸಹಕಾರಿ ಸಂಸ್ಥೆಗಳು ಇದ್ದು, ಇವುಗಳಲ್ಲಿ ಒಟ್ಟು ರು. 2ಲಕ್ಷ ಕೋಟಿ ಠೇವಣಿ ಹಣವಿದೆ. ಮಹಿಳೆಯರು ಸಹ ಆರ್ಥಿಕವಾಗಿ ಸ್ವಾವಲಂಬಿಯಾಗಲು ಸಹಕಾರಿ ಕ್ಷೇತ್ರ ಸಂಜೀವಿನಿಯಾಗಿದೆ. ಈ ಹಿಂದೆ ನರ್ಬಾಡ್ ಶೇ.1ರ ಬಡ್ಡಿದರದಲ್ಲಿ ಸಾಲ ನೀಡುತ್ತಿತ್ತು. ಸದ್ಯ ಈ ಬಡ್ಡಿದರ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇದರಿಂದ ಸಹಕಾರಿ ಸಂಘಗಳ ಮೇಲೆ ಹೆಚ್ಚಿನ ಹೊರಬೀಳುತ್ತಿದೆ. ಬ್ಯಾಂಕುಗಳ ರಾಷ್ಟ್ರೀಕರಣ, ಉದಾರೀಕರಣ, ಖಾಸಗಿ ಬ್ಯಾಂಕ್‌ಗಳ ಲಗ್ಗೆಯ ನಡುವೆಯೂ ಸಹಕಾರಿ ಬ್ಯಾಂಕ್ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ನಾಡಿನ ಜನರಿಗೆ ಸೇವೆ ನೀಡುತ್ತಿವೆ.

ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಅನುಪಮಸೇವೆ ಸಲ್ಲಿಸಿರುವ 6 ಹಿರಿಯ ಸಹಕಾರಿಗಳಿಗೆ ಹಾಗೂ 6 ಸಹಕಾರಿ ಸಂಘಗಳಿಗೆ ಸನ್ಮಾನಿಸಲಾಯಿತು.ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಚಿದಾನಂದಎಂ.ಗೌಡ, ಕರ್ನಾಟಕ ಸಹಕಾರಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳದ ಅಧ್ಯಕ್ಷ ವೆಂಕಟರಾವ್ ನಾಡಗೌಡ, ಸಹಕಾರಮಂಡಳಿಯ ನಿರ್ದೇಶಕ ಎನ್ ಗಂಗಣ್ಣ, ಹೆಚ್.ಮಂಜುನಾಥ್, ಆರ್.ರಾಮರೆಡ್ಡಿ, ಎಸ್.ಆರ್.ಗಿರೀಶ್, ಶಿಮೂಲ್ ನಿರ್ದೇಶಕಜಿ.ಪಿ.ರೇವಣಸಿದ್ದಪ್ಪ,ಜಿ.ಬಿ.ಶೇಖರ್, ಸಂಜೀವ್ ಮೂರ್ತಿ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಕೋಗುಂಡೆ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ಇಲ್ಯಾಸ್ ಉಲ್ಲಾಷರೀಫ್, ಸಹಕಾರಿ ಸಂಘಗಳ ಉಪನಿಬಂಧಕ ಆ‌ರ್.ಎಸ್.ದಿಲೀಪ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಬಾಹುಬಲಿ ಹಂಜೆ ಇದ್ದರು.

click me!