Bengaluru Rain: ಕಾರು ಮುಳುಗಿದರೆ ಏನು ಮಾಡಬೇಕು?

By Suvarna NewsFirst Published Sep 7, 2022, 2:53 PM IST
Highlights

ಬೆಂಗಳೂರಿನ ಮಳೆಗೆ ಅರ್ಧ ಮುಳುಗಿರುವ, ಪೂರ್ತಿ ಮುಳುಗಿರುವ ಬೆಂಜ್, ಆಡಿಯಂಥ ಕಾರುಗಳ ಚಿತ್ರ ವಿಡಿಯೋಗಳನ್ನು ನೀವು ನೋಡಿಯೇ ಇರುತ್ತೀರಿ. ಇಂಥ ಸನ್ನಿವೇಶ ನಿಮ್ಮ ಕಾರಿಗೆ ಬರಬಾರದು ಎಂದೇನಿಲ್ಲ. ಹಾಗೇನಾದರೂ ಆದರೆ ಏನು ಮಾಡಬೇಕು? ತಿಳಿದುಕೊಂಡಿರಿ.

ಈ ಬೆಂಗಳೂರಿನ ರಣಭಯಂಕರ ಮಳೆಗೆ (bangalore rains) ನಿಮ್ಮ ಲೇಔಟ್‌ಗೂ ನೀರು ನುಗ್ಗಬಹುದು. ನಿಮ್ಮ ಕಾರು ಸಹ ನೀರಿನಲ್ಲಿ ಮುಳುಗಬಹುದು. ಅಥವಾ ರಣಮಳೆಗೆ ರಸ್ತೆಯಲ್ಲಿ ಸಿಕ್ಕುಹಾಕಿಕೊಂಡು ಕಾರು ನೀರಿನಲ್ಲಿ ಅರ್ಧ ಮುಳುಗಿ ಚಲಿಸಲಾಗದ ಸ್ಥಿತಿಗೆ ಬರಬಹುದು. ಇದರಲ್ಲಿ ಅತಿಶಯೋಕ್ತಿ ಏನಿಲ್ಲ. ಈಗ ಆಗುತ್ತಿರುವುದು ಅದೇ. ದೊಡ್ಡ ದೊಡ್ಡ ಪ್ರತಿಷ್ಠಿತ ಬಡಾವಣೆಗಳಲ್ಲಿ ನಿಂತ ಬೆಂಜ್, ಜಾಗುವಾರ್‌ನಂಥ ಭಾರಿ ಕಾರುಗಳೇ ಈ ಪ್ರವಾಹಕ್ಕೆ ಸಿಲುಕಿ ತತ್ತರಿಸಿವೆ. ಇಂಥ ಸನ್ನಿವೇಶದಲ್ಲಿ ನಿಮ್ಮ ಕಾರು ಪೂರ್ತಿ ಕೆಟ್ಟು ಹೋಗದಂತೆ ಕಾಪಾಡಿಕೊಳ್ಳುವುದು ಹೇಗೆ? 

ನೀರಿನಲ್ಲಿ ಮುಳುಗುವುದರಿಂದ ಕಾರಿನ ಎಂಜಿನ್, ಎಲೆಕ್ಟ್ರಿಕ್ ಸರ್ಕಿಟ್ (electric circuit) ಮತ್ತು ಒಳಭಾಗದಲ್ಲಿ ಹಾನಿಯುಂಟಾಗುತ್ತದೆ. ನಿಮ್ಮ ಕಾರು ಅದರ ಚಕ್ರಗಳ ಅರ್ಧದಷ್ಟು ನೀರಿನಲ್ಲಿ ನಿಂತಿದ್ದರೆ ಕಳವಳಕ್ಕೆ ಕಾರಣವಿಲ್ಲ. ಆದರೆ ನೀರು ಚಕ್ರವನ್ನೂ ಮುಳುಗಿಸಿ ಮೇಲೆ ಬಂದಿದ್ದರೆ, ಕಾರಿನ ಫ್ಲೋರ್‌ನಲ್ಲೂ ನೀರು ನಿಂತಿದ್ದರೆ ಆಗ ಸಮಸ್ಯೆ ಉಂಟಾಗುತ್ತದೆ. ಅಂಥ ಸನ್ನಿವೇಶದಲ್ಲಿ ಈ ಕೆಳಗಿನ 10 ಹಂತಗಳನ್ನು ಅನುಸರಿಸಿ:

- ಕಾರನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸಬೇಡಿ! ಅದನ್ನು ಚಲಾಯಿಸಲು ಪ್ರಯತ್ನಿಸಿದರೆ ಅದು ಸರಿಪಡಿಸಲಾಗದಷ್ಟು ಹಾನಿಗೊಳಗಾಗಬಹುದು. ಕಾರನ್ನು ಮೆಕ್ಯಾನಿಕ್‌ ಬಳಿಗೆ ಅಥವಾ ಸರ್ವಿಸ್ ಸೆಂಟರ್‌ಗೆ ಟೋ ಮಾಡುವುದು ಉತ್ತಮ.

- ಕಾರು ಎಷ್ಟು ಆಳದಲ್ಲಿ ಮುಳುಗಿದೆ ಎಂಬುದನ್ನು ನಿರ್ಧರಿಸಿ. ಕೆಸರು ಮತ್ತು ನೀರಿನ ಗುರುತುಗಳು ಕಾರಿನ ಒಳಭಾಗದಲ್ಲಿ ಮತ್ತು ಹೊರಗೆ ಗುರುತನ್ನು ಬಿಡುತ್ತವೆ. ಬಾಗಿಲುಗಳ ಕೆಳಭಾಗದಲ್ಲಿ ನೀರು ಏರದಿದ್ದರೆ, ನಿಮ್ಮ ಕಾರು ಬಹುಶಃ ಉತ್ತಮ ಸ್ಥಿತಿಯಲ್ಲಿರುತ್ತದೆ. ಹೆಚ್ಚಿನ ವಿಮಾ ಕಂಪನಿಗಳು (car insurance) ಡ್ಯಾಶ್‌ಬೋರ್ಡ್‌ನ ಕೆಳಭಾಗಕ್ಕೆ ನೀರು ತಲುಪಿದರೆ ಕಾರಿಗೆ ದುರಸ್ತಿಗೆ ತಕ್ಕ ಹಾನಿಯಾಗಿದೆ ಎಂದು ಪರಿಗಣಿಸುತ್ತವೆ. 

- ನಿಮ್ಮ ವಿಮಾ ಕಂಪನಿಗೆ (Insurance Company) ಕರೆ ಮಾಡಿ. ಪ್ರವಾಹದ ಹಾನಿಯನ್ನು (flood damage) ಸಾಮಾನ್ಯವಾಗಿ ಸಮಗ್ರ ವಿಮೆಯಿಂದ ಕವರ್ ಮಾಡಲಾಗಿರುತ್ತದೆ. ಆದ್ದರಿಂದ ನೀವು ರಿಪೇರಿ ಅಥವಾ ಬದಲಿಗಾಗಿ ಕವರ್ ಪಡೆಯಬಹುದು. ಈ ಸಂದರ್ಭದಲ್ಲಿ ನಿಮ್ಮ ವಿಮಾ ಕಂಪನಿ ಬಹುಶಃ ಕ್ಲೈಮ್‌ಗಳಿಂದ ತುಂಬಿರುತ್ತದೆ, ಆದ್ದರಿಂದ ಈ ಪ್ರಕ್ರಿಯೆಯನ್ನು ಬೇಗನೇ ಪ್ರಾರಂಭಿಸುವುದು ಒಳ್ಳೆಯದು.

- ಒಳಾಂಗಣವನ್ನು ಒಣಗಿಸಲು ಪ್ರಾರಂಭಿಸಿ. ಕಾರಿನೊಳಗೆ ನೀರು ಬಂದರೆ, ಅದು ಒಣಗಿದ ನಂತರವೂ ಅದರ ಫಂಗಸ್ ತ್ವರಿತವಾಗಿ ಬೆಳೆಯುತ್ತದೆ. ಬಾಗಿಲುಗಳು ಮತ್ತು ಕಿಟಕಿಗಳನ್ನು ತೆರೆದಿಡಿ. ನೀರನ್ನು ಒಣಗಿಸಲು ಫ್ಲೋರ್ ಮೇಲೆ ಒಣ ಟವೆಲ್‌ಗಳನ್ನು ಹಾಕಿ. ಆದರೆ ಕಾರ್ಪೆಟ್, ಫ್ಲೋರ್ ಮ್ಯಾಟ್, ಡೋರ್ ಪ್ಯಾನಲ್‌ಗಳು, ಸೀಟ್ ಪ್ಯಾಡಿಂಗ್ ಮತ್ತು ಅಪ್ಹೋಲ್ಸ್ಟರಿ ಸೇರಿದಂತೆ ತೇವವಾದ ವಸ್ತುಗಳನ್ನು ಬದಲಿಸಬೇಡಿ. ಈ ರಿಪೇರಿಗಳು ನಿಮ್ಮ ಸಮಗ್ರ ವಿಮೆಯಲ್ಲಿರಬಹುದು. 

- ಫ್ಯುಯೆಲ್, ಆಯಿಲ್ ಮತ್ತು ಏರ್ ಕ್ಲೀನರ್ ಅನ್ನು ಪರಿಶೀಲಿಸಿ. ನೀವು ಡಿಪ್ ಸ್ಟಿಕ್‌ನಲ್ಲಿ ನೀರಿನ ಹನಿಗಳನ್ನು ಕಂಡರೆ ಅಥವಾ ಫ್ಯುಯೆಲ್ ಮಟ್ಟ ಹೆಚ್ಚಿದ್ದರೆ ಅಥವಾ ಏರ್ ಫಿಲ್ಟರ್‌ನಲ್ಲಿ ನೀರು ಇದ್ದರೆ, ಎಂಜಿನ್ ಅನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸಬೇಡಿ. ನೀರನ್ನು ತೆರವುಗೊಳಿಸಲು ಮತ್ತು ಪೆಟ್ರೋಲ್, ಆಯಿಲ್ ಬದಲಾಯಿಸಲು ಮೆಕ್ಯಾನಿಕ್ ಬಳಿಗೆ ಕೊಂಡೊಯ್ಯಿರಿ. 

- ಎಲ್ಲಾ ಇತರ ದ್ರವಗಳನ್ನು ಪರಿಶೀಲಿಸಿ. ಲೇಟ್ ಮಾಡೆಲ್ ಕಾರುಗಳಲ್ಲಿನ ಇಂಧನ ವ್ಯವಸ್ಥೆಗಳನ್ನು ಸಾಮಾನ್ಯವಾಗಿ ಸೀಲ್ ಮಾಡಲಾಗಿರುತ್ತದೆ, ಆದರೆ ಹಳೆಯ ಕಾರುಗಳ ಫ್ಯುಯೆಲ್ ವ್ಯವಸ್ಥೆಯನ್ನು ಬರಿದು ಮಾಡಬೇಕಾಗಬಹುದು. ಬ್ರೇಕ್, ಕ್ಲಚ್, ಪವರ್ ಸ್ಟೀರಿಂಗ್ ಮತ್ತು ಕೂಲಂಟ್ ಸಿಸ್ಟಮ್‌ಗಳನ್ನು ಮಾಲಿನ್ಯಕ್ಕಾಗಿ ಪರೀಕ್ಷಿಸಬೇಕು.

Seat Belt ಹಾಕ್ಕೊಂಡು ಪ್ರಾಣ ಉಳಿಸ್ಕಳಿ..! ಬೆಲ್ಟ್‌ ಹಾಕ್ಕೊಂಡ್ರಷ್ಟೇ ಏರ್‌ಬ್ಯಾಗ್‌ ಓಪನ್‌

- ಎಲ್ಲಾ ಎಲೆಕ್ಟ್ರಿಕ್ ಸರ್ಕಿಟ್‌ಗಳನ್ನು ಪರಿಶೀಲಿಸಿ. ಎಂಜಿನ್ ಸ್ಟಾರ್ಟ್ ಮಾಡಲು ಓಕೆ ಎಂದು ತೋರುತ್ತಿದೆಯೇ ಪರೀಕ್ಷಿಸಿ. ಹೆಡ್‌ಲೈಟ್‌ಗಳು, ಟರ್ನ್ ಸಿಗ್ನಲ್‌ಗಳು, ಹವಾನಿಯಂತ್ರಣ, ಸ್ಟೀರಿಯೋ, ಪವರ್ ಲಾಕ್‌ಗಳು, ಕಿಟಕಿಗಳು ಮತ್ತು ಆಸನಗಳು, ಆಂತರಿಕ ದೀಪಗಳು ಸಹ ಪರಿಶೀಲಿಸಿ. ಕಾರು ಚಲಿಸುವ ರೀತಿ ಅಥವಾ ಟ್ರಾನ್ಸ್‌ಮಿಷನ್ ಶಿಫ್ಟ್ ಆಗುವುದು ಸೇರಿದಂತೆ ಯಾವುದಾದರೂ ಸ್ವಲ್ಪ ತಪ್ಪಾಗಿದೆ ಎನಿಸಿದರೆ, ಅದು ಸರ್ಕಿಟ್ ತೊಂದರೆಯ ಸಂಕೇತವಾಗಿರಬಹುದು. ಕಾರನ್ನು ಮೆಕ್ಯಾನಿಕ್ ಬಳಿಗೆ ತೆಗೆದುಕೊಂಡು ಹೋಗಿ ಮತ್ತು ಹಾನಿಯನ್ನು ಇನ್ಷೂರೆನ್ಸ್ ಕವರ್ ಮಾಡಬಹುದು. 

- ಚಕ್ರಗಳು ಮತ್ತು ಟೈರುಗಳ ಸುತ್ತಲೂ ಪರಿಶೀಲಿಸಿ. ಕಾರನ್ನು ಚಲಾಯಿಸಲು ಪ್ರಯತ್ನಿಸುವ ಮೊದಲು, ಚಕ್ರಗಳು, ಬ್ರೇಕ್‌ಗಳು ಮತ್ತು ಅಂಡರ್‌ಬಾಡಿಗಳ ಸುತ್ತಲೂ ನೋಡಿ. ಪಾರ್ಕಿಂಗ್ ಬ್ರೇಕ್ ಪರಿಶೀಲಿಸಿ. 

- ಸಂದೇಹವಿದ್ದರೆ, ಕಾರನ್ನು ಟೋ ಮಾಡಿಸಿ. ಪ್ರವಾಹದಿಂದ ಹಾನಿಗೊಳಗಾದ ಕಾರು ಅದರ ತಿಂಗಳುಗಳು ಅಥವಾ ವರ್ಷಗಳ ನಂತರವೂ ಸಮಸ್ಯೆಗಳನ್ನು ಅನುಭವಿಸಬಹುದು. ಹೆಚ್ಚಿನ ದುರಸ್ತಿ ಇದೆಯೆನಿಸಿದರೆ, ಕಾರು ಬದಲಾಯಿಸುವುದಕ್ಕೇ ನಿಮ್ಮ ಆದ್ಯತೆ ಇರಲಿ. ಇದರಿಂದ ಮುಂದೆ ರಸ್ತೆಯಲ್ಲಿ ನಿಮಗೆ ಆಗಬಹುದಾದ ದುಬಾರಿ ತಲೆನೋವಿನಿಂದ ನಿಮ್ಮನ್ನು ಉಳಿಸಿಕೊಳ್ಳಬಹುದು.

- ಪ್ರವಾಹದಿಂದ ಹಾನಿಗೊಳಗಾದ ಕಾರುಗಳು ಸೆಕೆಂಡ್‌ಹ್ಯಾಂಡ್‌ಗೆ ಬರಬಹುದು. ಅಂಥವುಗಳ ಖರೀದಿಯಲ್ಲಿ ಎಚ್ಚರ ಬೇಕು. ಪ್ರವಾಹದಿಂದ ಹಾನಿಯಾದ ಕಾರುಗಳನ್ನು ಸ್ವಚ್ಛಗೊಳಿಸಿ, ರಿಪೇರಿ ಮಾಡಿ ಮರು-ಮಾರಾಟ ಮಾಡಲಾಗುತ್ತದೆ. ಬಳಸಿದ ಕಾರನ್ನು ಖರೀದಿಸುವಾಗ, ದಾಖಲೆಯಲ್ಲಿ "ಫ್ಲಡ್ ಡ್ಯಾಮೇಜ್‌'ನಂತಹ ಪದಗಳು ಕಂಡರೆ ಖರೀದಿಯಿಂದ ದೂರವಿರಿ. ಕಾರ್‌ನ ಸಮಗ್ರ ಇತಿಹಾಸವನ್ನು ಪಡೆದುಕೊಳ್ಳಿ, ಕಾರನ್ನು ಬೇರೆ ರಾಜ್ಯದಿಂದ ಸ್ಥಳಾಂತರಿಸಿದ್ದರೆ ಮತ್ತು ಟೈಟಲ್ ಬದಲಾಯಿಸಿದ್ದರೆ, ಮಾರಾಟಗಾರನು ಪ್ರವಾಹ ಹಾನಿಯನ್ನು ಮರೆಮಾಚಲು ಪ್ರಯತ್ನಿಸಿದ್ದಿರಬಹುದು.

ಸಡನ್ನಾಗಿ ಕಾರಿನ ಬ್ರೇಕ್ ಫೇಲ್ ಆದ್ರೆ ಹೀಗೆ ಮಾಡಿ, ಪ್ರಾಣಾಪಾಯದಿಂದ ಪಾರಾಗಿ!
 

click me!