Viral News: ಐದು ಗಂಟೆ ಕೆಲಸಕ್ಕೆ 50 ಸಾವಿರ ಸಂಬಳ ಕೇಳಿದ ಇಂಟರ್ನ್!

Published : Jul 22, 2023, 10:35 AM IST
Viral News: ಐದು ಗಂಟೆ ಕೆಲಸಕ್ಕೆ 50 ಸಾವಿರ ಸಂಬಳ ಕೇಳಿದ ಇಂಟರ್ನ್!

ಸಾರಾಂಶ

ಜಾಸ್ತಿ ಸಂಬಳ ಬೇಕು, ಕೆಲಸ ಆರಾಮವಾಗಿರಬೇಕು ಅನ್ನುವ ಪಾಲಿಸಿ ಈಗಿನ ಮಕ್ಕಳದ್ದು. ಕಷ್ಟಪಡದೆ ಹೆಚ್ಚು ಸ್ಯಾಲರಿ ಪಡೆಯಲು ಅವರು ಇಷ್ಟಪಡ್ತಾರೆ. ಟ್ವಿಟರ್ ನಲ್ಲಿ ಇಂಟರ್ ಒಬ್ಬ ಇಟ್ಟ ಡಿಮ್ಯಾಂಡ್ ಈಗ ಸುದ್ದಿಯಾಗ್ತಿದೆ.  

ಇಂಟರ್ನ್‌ಶಿಪ್ ಮಾಡುವ ಜನರಿಗೆ ಸಂಬಳ ಸಿಗೋದು ಬಹಳ ಅಪರೂಪ. ಕೆಲ ಕಂಪನಿಗಳು ಇಂಟರ್ನ್ ಶಿಪ್ ಮಾಡುವ ಫ್ರೆಶರ್ ಗಳಿಗೂ ಸ್ವಲ್ಪ ಹಣ ಪಾವತಿ ಮಾಡುತ್ತದೆ. ಇಂಟರ್ನ್ ಶಿಪ್ ನಲ್ಲಿ ಹಣ ಸಿಕ್ಕಿದ್ರೆ ಫ್ರೆಶರ್ಸ್ ನೆಮ್ಮದಿಯಿಂದ ಇರ್ತಾರೆ. ಕೆಲಸ ಕಲಿಯುವ ಜೊತೆಗೆ ನಾಲ್ಕು ಕಾಸು ಕೈ ಸೇರಿದ್ರೆ ಅದೇನೋ ಖುಷಿ ಇರುತ್ತದೆ. 

ಎಲ್ಲ ಕಂಪನಿಗಳು ಇಂಟರ್ನ್ಶಿಪ್ (Internship) ಮಾಡೋರಿಗೆ ಹಣ ನೀಡೋದಿಲ್ಲ. ಅದ್ರಲ್ಲೂ ಎಂಟು ಗಂಟೆ ಬದಲು 5 ಗಂಟೆ ಕೆಲಸ ಮಾಡಿ, ಹೆಚ್ಚಿಗೆ ಸಂಬಳ (Salary) ಕೊಡ್ತೇನೆ ಬನ್ನಿ ಅಂತಾ ಯಾವುದೇ ಕಂಪನಿ ಕರೆಯೋದಿಲ್ಲ. ಕಂಪನಿ ಹೇಳೋದಿರಲಿ, ಇಂಟರ್ನ್ಶಿಪ್ ಗೆ ಬರೋರು, ಸಂಬಳ ಕೊಡ್ತೀರಾ ಅಂತಾ ಕೇಳುವ ಧೈರ್ಯವನ್ನೇ ಮಾಡೋದಿಲ್ಲ. ಕೊಟ್ಟರೆ ಜೇಬಿಗೆ ಹಾಕಿಕೊಂಡು ಹೋಗ್ತಿರುತ್ತಾರೆ. ನಾನು ಈಗ ಹೇಳಿದ್ದು ಹಳೆ ಕಾಲದ ಕಥೆ. ಈಗಿನ ಜನರೇಷನ್ ಬದಲಾಗಿದ್ದಾರೆ. ಜಿನ್ ಝೆಡ್ ಅಂದ್ರೆ 1996ರಿಂದ 2010ರಲ್ಲಿ ಜನಿಸಿದ ಜನರ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುದ್ದಿ ಉತ್ತಮ ಉದಾಹರಣೆ. ಇದ್ರಲ್ಲಿ ಇಂಟರ್ನ್ ಒಬ್ಬ ಕೇಳಿದ ಸಂಬಳ ಹಾಗೂ ಡಿಮ್ಯಾಂಡ್ ನೋಡಿ ಎಲ್ಲರೂ ಹುಬ್ಬೇರಿಸಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದಲ್ಲಿ 1500 ಕೋಟಿ!

40-50 ಸಾವಿರ ಸ್ಟೈಫಂಡ್ ಕೇಳಿದ ಭೂಪ:  ಸಮೀರಾ ಎಂಬುವವರು @sameeracan ಎಂಬ ಟ್ವಿಟರ್ ಖಾತೆಯಲ್ಲಿ ಒಂದು ಫೋಸ್ಟ್ ಹಂಚಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಪೋಸ್ಟ್ ಆಗಿರುವ ಇದನ್ನು ಈವರೆಗೆ 7 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಇಂದು ನಾನು ಒಬ್ಬ ಇಂಟರ್ನ್‌ನ ಸಂದರ್ಶನ ಮಾಡುತ್ತಿದ್ದೆ. ಅವರು ಕೆಲಸದ ಜೊತೆ ಜೀವನವನ್ನು ಬ್ಯಾಲೆನ್ಸ್ ಮಾಡುವಂತಹ ಉದ್ಯೋಗ ಹುಡುಕುತ್ತಿದ್ದೇನೆ ಎಂದರು. ಪ್ರತಿ ದಿನ 5 ಗಂಟೆಗಿಂತ ಹೆಚ್ಚು ಸಮಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದ ಅವರು ಎಂಎನ್ ಸಿ (MNC) ಸಂಸ್ಕೃತಿಯನ್ನು ಇಷ್ಟಪಡುವುದಿಲ್ಲವಂತೆ. ಅದೇ ಕಾರಣಕ್ಕೆ ಸ್ಟಾರ್ಟ್ ಅಪ್‌ನಲ್ಲಿ ಕೆಲಸ ಮಾಡಲು ಬಯಸುತ್ತಿದ್ದೇನೆ.  ನನಗೆ 40-50 ಸಾವಿರ ಸ್ಟೈಫಂಡ್ ಬೇಕು ಎಂದು ಡಿಮ್ಯಾಂಡ್ ಮಾಡಿದ್ರು. ಅವರಿಗೆ ಒಳ್ಳೆ ಕೆಲಸ ಸಿಗಲಿ ಎಂದು ಆಶೀಸುತ್ತೇನೆ ಎಂದು ಸಮೀರ್ ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ.

ಸ್ಟಾರ್ಟ್ ಅಪ್ ನಲ್ಲಿ ಐದು ಗಂಟೆ ಕೆಲಸ! : ಆತ್ಮವಿಶ್ವಾಸದಿಂದ ಕೂಡಿದ  ಇಂಟರ್ನ್‌ನ ಬೇಡಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಅನೇಕರು ಜಿನ್ ಝೆಡ್ ಬಗ್ಗೆ  ಬಗ್ಗೆ ಮಾತನಾಡಿದ್ದಾರೆ.   ಪ್ರಾರಂಭದಲ್ಲಿ ಪ್ರತಿದಿನ ಐದು ಗಂಟೆಗಳ ಕೆಲಸ? ಯೋಚಿಸಲೂ ಸಾಧ್ಯವಿಲ್ಲ ಎಂದು ಒಬ್ಬರು ಬರೆದಿದ್ದಾರೆ. ಮೊದಲು ಇಂಟರ್ನ್‌ಶಿಪ್ ಮಾಡಬೇಕು ಮತ್ತು ನಂತರ ಈ ವಿಷಯಗಳ ಬಗ್ಗೆ ಯೋಚಿಸಬೇಕು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇಡೀ ಪ್ರಪಂಚವು ಕೆಲಸ ಮತ್ತು ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಹಾಗಿರುವಾಗ ಇದ್ರ ಬಗ್ಗೆ ಮಾತನಾಡಲು ಹಿಂಜರಿಕೆ ಏಕೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಶೀಘ್ರದಲ್ಲೇ ಒಳ ಉಡುಪು ಮಾರುಕಟ್ಟೆಗೆ ರಿಲಯನ್ಸ್ ರಿಟೇಲ್ ಪ್ರವೇಶ; ಕೇವಲ

ಕೆಲಸ ಮತ್ತು ಜೀವನದ ಮಧ್ಯೆ ಸಮತೋಲನಕ್ಕೆ ಆದ್ಯತೆ ನೀಡುವುದು ಉತ್ತಮ. ಆದರ  ಇಂಟರ್ನ್‌ಶಿಪ್‌ ಹುಡುಕುತ್ತಿರುವಾಗ ಕಲಿಕೆ, ಬೆಳವಣಿಗೆ, ಉತ್ತಮ ಯೋಜನೆ ಮತ್ತು ಗೆಳೆಯರನ್ನು ಹುಡುಕಬೇಕು. ನಂತ್ರ ಜೀವನ ತಾನಾಗಿಯೇ ಬ್ಯಾಲೆನ್ಸ್ ಗೆ ಬರುತ್ತದೆ ಎಂದು ಸಮೀರಾ ಮತ್ತೊಂದು ಟ್ವಿಟ್ ಮೂಲಕ ಉತ್ತರ ನೀಡಿದ್ದಾರೆ. 

ಈಗಿನ ಜನರೇಷನ್ ಜನರು ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ. ಆದ್ರೆ ದೊಡ್ಡ ಮೊತ್ತದ ಹಣವನ್ನು ಅವರು ನಿರೀಕ್ಷೆ ಮಾಡ್ತಾರೆ. ಈಗಿನ ಯುವಜನತೆ ಸೃಜನಶೀಲರು. ಆದ್ರೆ ಕೆಲಸವನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!