
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೈಸ್ಪೀಡ್ ರೈಲು ಯೋಜನೆ ಮಂತ್ರ ಜಪಿಸುತ್ತಿದ್ದರೂ, ಅಂತಹ ಯಾವುದೇ ಕ್ರಾಂತಿಕಾರಿ ಘೋಷಣೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ
ಸೀತಾರಾಮನ್ ಅವರು ಮಾಡಿಲ್ಲ.
Union budget 2019: ಕರ್ನಾಟಕಕ್ಕೆ ಸಿಕ್ಕಿದ್ದೇನು?
ಹಣಕಾಸು ಬಜೆಟ್‌ನಲ್ಲಿ ರೈಲ್ವೆಗೆ 655, 837 ಕೋಟಿ ರು. ಅನುದಾನವನ್ನು ನಿಗದಿಪಡಿಸಿದ್ದಾರೆ. ಸಾರ್ವಕಾಲಿಕ ದಾಖಲೆಯ 1.60 ಲಕ್ಷ ಕೋಟಿ ರು. ಬಂಡವಾಳ ವೆಚ್ಚಕ್ಕೆ ಒಪ್ಪಿದ್ದಾರೆ. ಫೆಬ್ರವರಿಯಲ್ಲಿ ಸಚಿವ ಪೀಯೂಷ್ ಗೋಯಲ್ ಮಂಡನೆ ಮಾಡಿದ ಬಜೆಟ್‌ನಲ್ಲಿ ಹೆಚ್ಚೂಕಡಿಮೆ ಇಷ್ಟೇ ಅನುದಾನವಿತ್ತು. ರೈಲ್ವೆಗೆ ನಿಗದಿಯಾಗಿರುವ ಅನುದಾನದಲ್ಲಿ 7255 ಕೋಟಿ ರು. ಹೊಸ ಮಾರ್ಗಗಳ ನಿರ್ಮಾಣ, 2200 ಕೋಟಿ ರು. ಗೇಜ್ ಪರಿವರ್ತನೆ, 700 ಕೋಟಿ ರು. ಜೋಡಿ ಮಾರ್ಗ, 6114.82 ಕೋಟಿ ರು. ಸಾಮಗ್ರಿ, 1750 ಕೋಟಿ ರು. ಸಿಗ್ನಲಿಂಗ್ ಮತ್ತು ಟೆಲಿಕಾಂಗೆಂದು ಮೀಸಲಾಗಿದೆ.
ಪೀಯೂಷ್ ಗೋಯಲ್ ಅವರು ನಿಗದಿಪಡಿಸಿದ್ದ ಅನುದಾನವೇ ಮುಂದುವರಿದಿದೆ. 2018 ರಿಂದ 2030 ರ ನಡುವಣ ಅವಧಿಯಲ್ಲಿ ರೈಲ್ವೆ ಮೂಲಸೌಕರ್ಯಕ್ಕೆ 50 ಲಕ್ಷ ಕೋಟಿ ರು. ಬಂಡವಾಳದ ಅವಶ್ಯಕತೆ ಇದೆ. ವಿಶೇಷ ಉದ್ದೇಶದ ವಾಹಕ (ಎಸ್‌ಪಿವಿ) ಗಳ ಮೂಲಕ ಸಬರ್ಬನ್ ರೈಲ್ವೆ ಯೋಜನೆಗಳಲ್ಲಿ ಹಣ ಹೂಡಲು ಹಾಗೂ ಸಾರ್ವಜನಿಕ- ಖಾಸಗಿ ಪಾಲುದಾರಿಕೆಯಡಿ ಮೆಟ್ರೋ ರೈಲು ಸಂಪರ್ಕ
ಹೆಚ್ಚಳಗೊಳಿಸಲು ರೈಲ್ವೆ ಇಲಾಖೆಗೆ ಪ್ರೋತ್ಸಾಹ ನೀಡಲಾಗುವುದು. ಸರಕು ಸಾಗಣೆಗೆ ನದಿಗಳನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ರಸ್ತೆ ಹಾಗೂ ರೈಲ್ವೆ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ನಿರ್ಮಲಾ ವಿವರಿಸಿದ್ದಾರೆ. ರೈಲು ನಿಲ್ದಾಣಗಳ ಆಧುನೀಕರಣಕ್ಕೆ ಈ ವರ್ಷ ಚಾಲನೆ ನೀಡಲಾಗುವುದು ಎಂದಿದ್ದಾರೆ.
27.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್: ಆದಾಯ ಎಲ್ಲಿಂದ? ಖರ್ಚು ಹೇಗೆ?
ಪ್ರಯಾಣಿಕೆ ಸೌಕರ್ಯಕ್ಕೆ ಒತ್ತು: ಬಜೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರಯಾಣಿಕ ಸೌಲಭ್ಯಕ್ಕೆ ನಿರ್ಮಲಾ ಅವರು ಒತ್ತು ನೀಡಿದಂತೆ ಕಾಣಿಸುತ್ತದೆ. ಪ್ರಯಾಣಿಕ ಸೌಲಭ್ಯಗಳ ಅಭಿವೃದ್ಧಿಗಾಗಿ ಅವರು ಬಜೆಟ್‌ನಲ್ಲಿ 3422.57 ಕೋಟಿ ರು. ಮೀಸಲಿಟ್ಟಿದ್ದಾರೆ. ರೈಲು ಪ್ರಯಾಣಿಕರ ನೆಮ್ಮದಿಯ ಪ್ರಯಾಣಕ್ಕೆ ಹೆಚ್ಚುವರಿಯಾಗಿ 1000 ಕೋಟಿ ರು. ತೆಗೆದಿರಿಸಿದ್ದಾರೆ. ಆದರೆ ಪ್ರತಿ ವರ್ಷ 86,554 ಕೋಟಿ ರು.ಗಳನ್ನು ವೇತನ ರೂಪದಲ್ಲಿ ಪಾವತಿಸಬೇಕಾಗಿರುವುದು ರೈಲ್ವೆಗೆ ತಲೆನೋವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.