ಹೊಸ ತೆರಿಗೆ ನೀತಿ; 26A ಟ್ಯಾಕ್ಸ್ ಫಾರ್ಮ್ ಸಲ್ಲಿಕೆ ಹೊರೆಯಾಗಿದ್ದು ಹೇಗೆ?

By Suvarna NewsFirst Published Aug 17, 2020, 6:55 PM IST
Highlights

ತೆರಿಗೆ ಸಲ್ಲಿಕೆ ಹಲವರಲ್ಲಿ ಗೊಂದಲ ಹಾಗೂ ಆತಂಕ ಸೃಷ್ಟಿಸುವುದು ಸಹಜ. ಆದರೆ ಹೊಸ ತೆರಿಗೆ ನೀತಿಯಿಂದ ತೆರಿಗೆ ಫಾರ್ಮ್ ಸಲ್ಲಿಕೆ ಮತ್ತಷ್ಟು ಹೊರೆಯಾಗಿದೆ. ನೂತನ ತೆರಿಗೆ ನೀತಿಯಲ್ಲಿ ಮಾಡಿದ ಬದಲಾವಣೆಗಳೇನು? ಇಲ್ಲಿದೆ ವಿವರ.
 

ನವದೆಹಲಿ(ಆ.17): 74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತಷ್ಟು ಬಿಗಿಯಾದ ತೆರಿಗೆ ನೀತಿ ಘೋಷಿಸಿದ್ದಾರೆ. ಸರಿಯಾಗಿ ತೆರಿಗೆ ಸಲ್ಲಿಸುವ ಭಾರತೀಯನಿಗೆ ಹೆಚ್ಚಿನ ಆದ್ಯತೆ ನೀಡಿ ಹೊಸ ನೀತಿ ಜಾರಿ ಮಾಡಲಾಗಿದೆ. ನೂತನ ತೆರಿಗೆ ನೀತಿ ಕುರಿತು ಹಲವು ಚರ್ಚೆಗಳು ನಡೆಯುತ್ತಿದೆ. ಪರ ವಿರೋಧಗಳು ಕೇಳಿ ಬರುತ್ತಿದೆ. ಆದರೆ ಸರಿಯಾದ ಸಮಯಕ್ಕೆ, ಚಾಚೂ ತಪ್ಪದೆ ತೆರಿಗೆ ಸಲ್ಲಿಸುವ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೂತನ ನೀತಿ ಜಾರಿಗೆ ಬಂದಿದೆ.

ಐಟಿ ಇನ್ನಷ್ಟು ಬಿಗಿಯಾಗೈತಿ! ಯಾರೂ ತಪ್ಪಿಸಿಕೊಳ್ಳುವ ಹಂಗಿಲ್ಲ! 

ವಾರ್ಷಿಕ ಖರ್ಚು  ವೆಚ್ಚ ಹೆಚ್ಚಾದರೆ, ಆದಾಯ ತೆರಿಗೆ ರಿಟರ್ನ್ ಅಥವಾ ಹೆಚ್ಚಿನ ಶೇಕಡಾ ತೆರಿಯನ್ನೂ ಪಾವತಿಸಬೇಕು.   ಉದಾಹರಣೆಗೆ ಹೊಟೆಲ್‌ , ಆಸ್ತಿ ತೆರಿಗೆ, ವಿಮಾ ಪಾಲಿಸಿಗಳಿಗೆ ವಾರ್ಷಿಕ 20,000 ರೂಪಾಯಿ ಖರ್ಚು ಮಾಡಿದ್ದರೆ, ಈ ವ್ಯವಹಾರಗಳು ಆದಾಯ ತೆರಿಗೆ ಇಲಾಖೆಯಲ್ಲಿ ದಾಖಲಾಗುತ್ತದೆ.  ನಿಮ್ಮ ವಾರ್ಷಿಕ ಬಾಡಿಗೆ 40,000 ರೂಪಾಯಿ ಮೀರಿದರೆ, ಇನ್ಶೂರೆನ್ಸ್ ಪಾಲಿಸಿ ಕನಿಷ್ಠ 50,000 ರೂಪಾಯಿ ಅಥವಾ ವಿದ್ಯುತ್ ಬಿಲ್ 1 ಲಕ್ಷ ಮೀರಿದರೆ ನೀವು ಆದಾಯ ತೆರಿಗೆ ಸಲ್ಲಿಸಬೇಕು. ಅಥವಾ ನೊಟೀಸ್‌ಗೆ ಉತ್ತರಿಸಲೇಬೇಕು.

ಪ್ರಧಾನಿಯಿಂದ ತೆರಿಗೆ ಸುಧಾರಣೆ ಪ್ರಕಟ!.

ತರಿಗೆ ವಂಚನೆಯನ್ನು ತಡೆಯಲು ಈ ಕ್ರಮ ಜಾರಿ ಮಾಡಲಾಗಿದೆ. ಈ ನಿತಿಯಲ್ಲಿ ಪ್ರಮುಖವಾಗಿ ನಿಮ್ಮ ಆದಾಯಕ್ಕೆ ಅನುಗುಣವಾಗಿ ಖರ್ಚು ಇದಯೇ ಅನ್ನೋದು ಕೂಡ ಪರಿಶೀಲನೆಯಾಗಲಿದೆ. ಈ ನೀತಿ ಮೂಲಕ ನಗದು ವ್ಯವಹಾರಕ್ಕೆ ಸಂಪೂರ್ಣ ಬ್ರೇಕ್ ನೀಡಿ, ಕ್ಯಾಶ್‌ಲೆಸ್ ಟ್ರಾನ್ಸಾಕ್ಷನ್‌ಗೆ ಒತ್ತು ನೀಡಲಿದೆ. ಹೊಸ ನೀತಿಯಿಂದ ಖರ್ಚು ವೆಚ್ಚದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಹೊಸ ನೀತಿಯಿಂದ ತೆರಿಗೆದಾರರ ಹೊರೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿ 50 ವರ್ಷ ದಾಟಿದಾಗ ವಿಮಾ ಪಾಲಿಸಿ ಮೊತ್ತವೂ ಹೆಚ್ಚಾಗಲಿದೆ. ಹೀಗಾಗಿ 20,000 ರೂಪಾಯಿ ನಿಗದಿ ಮಾಡಿರುವುದ ಸಮಂಜಸವಲ್ಲ. ಇಷ್ಟೇ ಅಲ್ಲ ಆದಾಯವಿಲ್ಲದಿದ್ದರೂ ಆತನ ವ್ಯವಹಾರಗಳು ದಾಖಲಾಗಿರುತ್ತದೆ. ಇದರ ಮೇಲೆ ಆತ ತರಿಗೆ ಸಲ್ಲಿಸಬೇಕಾಗುತ್ತದೆ. ಇದು ಮತ್ತೊಂದು ಹೊರೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

click me!