Income From Foreign Satellite:ವಿದೇಶಿ ಉಪಗ್ರಹ ಉಡಾವಣೆಯಿಂದ ಭಾರತಕ್ಕೆ 35 ಮಿಲಿಯನ್ ಡಾಲರ್ ಆದಾಯ

By Suvarna News  |  First Published Dec 17, 2021, 6:09 PM IST

*ಇಸ್ರೋ ವಾಣಿಜ್ಯ ವಿಭಾಗದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್  ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಉಡಾವಣೆ
*34 ದೇಶಗಳ 342 ವಿದೇಶಿ ಉಪಗ್ರಹಗಳು ಭೂ ಕಕ್ಷೆಗೆ
*PSLV ಮೂಲಕ ಉಪಗ್ರಹಗಳನ್ನು ಉಡಾಯಿಸಲು ನಾಲ್ಕು ದೇಶಗಳ ಗ್ರಾಹಕರೊಂದಿಗೆ ಇಸ್ರೋ ಒಪ್ಪಂದ 


ನವದೆಹಲಿ (ಡಿ.17): ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಭಾರತದ ಉಪಗ್ರಹಗಳು  ಮಾತ್ರವಲ್ಲದೆ, ವಿದೇಶಿ ಉಪಗ್ರಹಗಳನ್ನು ಕೂಡ ಕಕ್ಷೆಗೆ ಸೇರಿಸಿದ ಕೀರ್ತಿ ಇಸ್ರೋಗೆ (ISRO)ಸಲ್ಲುತ್ತದೆ. ಈ ರೀತಿ 26 ದೇಶಗಳ  ಉಪಗ್ರಹಗಳ ಉಡಾವಣೆ ಮೂಲಕ ಕಳೆದ 5 ವರ್ಷಗಳಲ್ಲಿ ಭಾರತ ಸುಮಾರು 1,245ಕೋಟಿ ರೂ.  (35 ಮಿಲಿಯನ್ ಅಮೆರಿಕ ಡಾಲರ್ ಮತ್ತು 10 ಮಿಲಿಯನ್ ಯುರೋಗಳಷ್ಟು) ಆದಾಯ ಗಳಿಸಿದೆ. ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್  (Jitendra Singh)ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡೋ ಸಮಯದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಇಸ್ರೋ ವಾಣಿಜ್ಯ ವಿಭಾಗದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್  ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮೂಲಕ ಇತರ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಇದ್ರಿಂದ ಇಸ್ರೋಗೆ ಆದಾಯ ಬರುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. 2020-23ರ ಅವಧಿಯಲ್ಲಿ PSLV ಮೂಲಕ ಉಪಗ್ರಹಗಳನ್ನು ಉಡಾಯಿಸಲು ಇಸ್ರೋ ನಾಲ್ಕು ದೇಶಗಳ ಗ್ರಾಹಕರೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ಒಟ್ಟು ಆರು ಒಪ್ಪಂದಗಳಿಗೆ ಇಸ್ರೋ ಸಹಿ ಹಾಕಿದೆ. ಈ ವಿದೇಶಿ ಉಪಗ್ರಹಗಳ ಉಡಾವಣೆಯಿಂದ ಅಂದಾಜು 132 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಇಸ್ರೋ ಗಳಿಸಲಿದೆ.
34 ದೇಶಗಳ 342 ವಿದೇಶಿ ಉಪಗ್ರಹಗಳನ್ನು ಸ್ವದೇಶಿ ಉಡಾವಣಾ ವಾಹನಗಳ ಮೂಲಕ ಭೂ ಕಕ್ಷೆಗೆ ಸೇರಿಸಲಾಗಿದೆ. ಇನ್ನು ವಿದ್ಯಾರ್ಥಿಗಳು ನಿರ್ಮಿಸಿರೋ 12 ಉಪಗ್ರಹಗಳು ಸೇರಿದಂತೆ ಒಟ್ಟು 124 ಸ್ವದೇಶಿ ಉಪಗ್ರಹಗಳನ್ನು ಕ್ಷಕೆಗೆ ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ. 

Latest Videos

undefined

SBI hikes Interest Rates: ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಬೇಸ್ ರೇಟ್ ನಲ್ಲೂ ಏರಿಕೆ

ಭಾರತೀಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಈ ತನಕ 50 ಟನ್ ನಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಅದ್ರಲ್ಲಿ ಸುಮಾರು ಶೇ.17ರಷ್ಟು ವಿದೇಶಿ ಗ್ರಾಹಕರ ಉಪಗ್ರಹಗಳು ಸೇರಿವೆ. ಇನ್ನು 2018-19ನೇ ಆರ್ಥಿಕ ಸಾಲಿನಲ್ಲಿ ಭಾರತ  91.63 ಕೋಟಿ ರೂ. ವಿದೇಶಿ ವಿನಿಮಯ ಗಳಿಸಲು ಇಸ್ರೋ ನೆರವು ನೀಡಿದೆ. ಕಳೆದ 5 ವರ್ಷಗಳಲ್ಲಿ ಇಸ್ರೋ ಅಮೆರಿಕ, ಇಂಗ್ಲೆಂಡ, ಜರ್ಮನಿ, ಕೆನಡಾ, ಸಿಂಗಾಪುರ, ನೆದರ್ಲ್ಯಾಂಡ್, ಜಪಾನ್, ಮಲೇಷ್ಯಾ, ಅಲ್ಜೆರಿಯಾ ಹಾಗೂ ಫ್ರಾನ್ಸ್ ಸೇರಿದಂತೆ ಒಟ್ಟು 10 ರಾಷ್ಟ್ರಗಳ  ಜೊತೆಗೆ ಉಪಗ್ರಹ ಉಡಾವಣೆಗೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿದೆ. 1999ರಿಂದ ಈ ತನಕ ಭಾರತ 319 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. 

Life Insurance Premium Increase:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ?

2022ರ ಅಂತ್ಯದ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯಾನ 'ಗಗನಯಾನ' (Gaganyaan)  ಆರಂಭವಾಗಲಿದ್ದು,  ಈ ಯೋಜನೆಗೂ ಮುನ್ನ ಭಾರತ ಮುಂದಿನ ವರ್ಷ ಎರಡು ಮಾನವರಹಿತ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇತ್ತೀಚೆಗೆ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಈ ಮಾನವ ರಹಿತ ಬಾಹ್ಯಾಕಾಶ ಯಾನದಲ್ಲಿ"ವಾಯುಮಿತ್ರ" ಎಂಬ ಹೆಸರಿನ ರೋಬಾಟ್‌ಗಳನ್ನು ಬಳಸಲಾಗುವುದು. ಇದನ್ನು ಅನುಸರಿಸಿದರೆ ಮುಂದಿನ 2023ರ ಗಗನಯಾನ ಯೋಜನೆಗೆ ಸಹಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬಾಹ್ಯಾಕಾಶ ಯೋಜನೆಗಳು ವಿಳಂಬವಾಗುತ್ತಿವೆ ಸದ್ಯದ ಮಾಹಿತಿಯಂತೆ 2022ರಲ್ಲಿ ಶುಕ್ರ ಮಿಷನ್, 23ರಲ್ಲಿ ಸೌರ ಮಿಷನ್ ಹಾಗೂ 2030ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಯೋಜನೆ ಸರಕಾರ ಪಟ್ಟಿಯಲ್ಲಿದೆ. ಗಗನಯಾನ ಯೋಜನೆಗೆ (gaganyaan programme) 10,000 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಕನಿಷ್ಟ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಸ್ರೋದ ಈ ಮಹತ್ವಾಕಾಂಕ್ಷೆಯ ಯೋಜನೆ ನಾಲ್ಕು ಮಂದಿ ಗಗನಯಾನಿಗಳು ಆಯ್ಕೆಯಾಗಿದ್ದು, ಇವರೆಲ್ಲರೂ ರಷ್ಯಾದಲ್ಲಿ(Russia) ತಮ್ಮ ತರಬೇತಿಯನ್ನು  ಪೂರ್ಣಗೊಳಿಸಿದ್ದಾರೆ. 

click me!