ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಲಿನಿಕಲ್ ಟ್ರೈಯಲ್ ಜನಪ್ರಿಯತೆ ಗಳಿಸಲು ಪ್ರಾರಂಭಿಸಿದೆ. ಇದಕ್ಕೆ ಪೂರಕ ಎಂಬಂತೆ ಭಾರತವು ಕ್ಲಿನಿಕಲ್ ಟ್ರೈಯಲ್ ನಡೆಸಲು ಭಾರತ ಅತ್ಯಂತ ಮೆಚ್ಚಿನ ತಾಣವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಪಿಡಬ್ಲ್ಯುಸಿ ಇಂಡಿಯಾ ಹಾಗೂ ಯುಎಸ್-ಇಂಡಿಯಾ ಚೇಂಬರ್ ಆಫ್ ಕಾಮರ್ಸ್ (ಯುಎಸ್ಎಐಸಿ) ಜಂಟಿ ವರದಿ ತಿಳಿಸಿದೆ.
Business Desk: ಭಾರತದಲ್ಲಿ ಕ್ಲಿನಿಕಲ್ ಟ್ರೈಯಲ್ ಚಟುವಟಿಕೆಗಳು 2014ರ ತನಕ ತುಂಬಾ ಕಡಿಮೆಯಿದ್ದವು. ಇದಕ್ಕೆ ಮುಖ್ಯಕಾರಣ ಈ ಸಮಯದಲ್ಲಿ ಜಾರಿಯಲ್ಲಿದ್ದ ಕ್ಲಿನಿಕಲ್ ಟ್ರೈಯಲ್ ಗೆ ಅನನುಕೂಲಕರವಾದ ನಿಯಮಗಳು. ಆದರೆ, 2014ರ ಬಳಿಕ ದೇಶದಲ್ಲಿ ಕ್ಲಿನಿಕಲ್ ಟ್ರೈಯಲ್ ಗೆ ಸಂಬಂಧಿಸಿದ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬಂದಿದೆ ಎಂದು ಪಿಡಬ್ಲ್ಯುಸಿ ಇಂಡಿಯಾ ಹಾಗೂ ಯುಎಸ್-ಇಂಡಿಯಾ ಚೇಂಬರ್ ಆಫ್ ಕಾಮರ್ಸ್ (ಯುಎಸ್ಎಐಸಿ) ಜಂಟಿ ವರದಿ ತಿಳಿಸಿದೆ. 'ಭಾರತದಲ್ಲಿ ಕ್ಲಿನಿಕಲ್ ಟ್ರೈಯಲ್ ಅವಕಾಶಗಳು' ಎಂಬ ಈ ವರದಿಯನ್ನು ಮೇ 3ರಂದು ನಡೆದ ಯುಎಸ್ ಎಐಸಿ ಬಯೋಫಾರ್ಮ್ ಹಾಗೂ ಹೆಲ್ತ್ ಕೇರ್ ವರ್ಚುವಲ್ ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ವರದಿಯು ಕ್ಲಿನಿಕಲ್ ಟ್ರೈಯಲ್ ನಡೆಸಲು ಭಾರತ ಅತ್ಯಂತ ಮೆಚ್ಚಿನ ತಾಣವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಈ ವರದಿ ತಿಳಿಸಿದೆ. ಪ್ರಸಕ್ತ ಭೌಗೋಳಿಕ ರಾಜಕೀಯ ವಾತಾವರಣದಲ್ಲಿ ಟ್ರೈಯಲ್ ಪ್ರೋತ್ಸಾಹಕರು ಸಂಶೋಧನೆಗೆ ಭಾರತವನ್ನು ಅತ್ಯಂತ ಸೂಕ್ತ ತಾಣವೆಂದು ಪರಿಗಣಿಸಬಹುದು.
ನಿಯಂತ್ರಣ ಸುಧಾರಣೆಗಳ ಜೊತೆಗೆ ಅತ್ಯಧಿಕ ಪ್ರಮಾಣದಲ್ಲಿರುವ ರೋಗಗಳಿಗೆ ಸಂಬಂಧಿಸಿ ಸಂಶೋಧನೆ ಹಾಗೂ ಔಷಧಗಳ ಅಭಿವೃದ್ಧಿಗೆ ಭಾರತ ಅನೇಕ ಸಹಯೋಗ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳ ಸಹಭಾಗಿತ್ವದಲ್ಲಿ ಅಧಿಕ ಕಾಳಜಿಯ ಅಗತ್ಯವಿರುವ ರೋಗಿಗಳನ್ನು ಹಾಗೂ ಅವರಿರುವ ಸ್ಥಳಗಳನ್ನು ವೇಗವಾಗಿ ತಲುಪಲು ಅತ್ಯುನ್ನತ ಬಯೋಫಾರ್ಮಗಳಿಗೆ ಸಾಧ್ಯವಾಗಲಿದೆ.
undefined
ಅಮೆರಿಕಕ್ಕೆ ಆರ್ಥಿಕ ಮುಗ್ಗಟ್ಟಿನ ಭೀತಿ;ಜೂನ್ ನಲ್ಲಿ ಬಿಲ್ ಪಾವತಿಗೂ ಹಣವಿರಲ್ಲ, ಬಿಡೆನ್ ಗೆ ಅಧಿಕಾರಿಗಳ ಎಚ್ಚರಿಕೆ
'ಅನೇಕ ಪ್ರಮುಖ ನಿಯಂತ್ರಣ ಸುಧಾರಣೆಗಳ ಕಾರಣದಿಂದ ಭಾರತದಲ್ಲಿ 2014ರಿಂದ ಕ್ಲಿನಿಕಲ್ ಟ್ರೈಯಲ್ ಚಟುವಟಿಕೆಗಳು ನಿಧಾನವಾಗಿ ಏರಿಕೆ ಕಾಣುತ್ತಿವೆ. ಹಾಗೆಯೇ ಇವು ಜಾಗತಿಕ ಸಮನ್ವಯತೆಯ ಗುರಿ ಹೊಂದಿದ್ದು, ಭಾರತದಲ್ಲಿ ಕ್ಲಿನಿಕಲ್ ಟ್ರೈಯಲ್ ಗಳಿಗೆ ಮುಕ್ತ ಅವಕಾಶಗಳನ್ನು ನೀಡಿವೆ. ದೇಶದ ವೈವಿಧ್ಯಮಯ ಜನಸಮೂಹದ ಜೊತೆಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರೋಗ್ಯ ಸೇವಾ ಮೂಲಸೌಕರ್ಯಕ್ಲಿನಿಕಲ್ ಟ್ರೈಯಲ್ ಗಳು ಪ್ರಗತಿ ಹೊಂದಲು ಸಂಪದ್ಭರಿತವಾದ ಸ್ಥಳಾವಕಾಶ ನೀಡಿದೆ. ಇದು ಟಾಪ್ ಬಯೋಫಾರ್ಮಾ ಕಂಪನಿಗಳಿಗೆ ದೀರ್ಘಾವಧಿಯ ಪ್ಲ್ಯಾನ್ ಗಳನ್ನು ರೂಪಿಸಲು ಅವಕಾಶ ಒದಗಿಸಿವೆ' ಎಂದು ಪಿಡಬ್ಲ್ಯುಸಿ ಪಾರ್ಟನರ್ ಹಾಗೂ ಗ್ಲೋಬಲ್ ಹೆಲ್ತ್ ಇಂಡಸ್ಟ್ರೀಸ್ ಲೀಡರ್ ಸುಜಯ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವರದಿಯಲ್ಲಿ ಉಲ್ಲೇಖಿಸಿರುವ ಸುಧಾರಣೆಗಳ ಪಟ್ಟಿಯಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳುವ ವಿರಳ ಕಾಯಿಲೆಗಳ ಮಾಹಿತಿ ಕಲೆ ಹಾಕಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಆಸ್ಪತ್ರೆಗಳಲ್ಲಿ 'ವಿರಳ ರೋಗಗಳ ರಾಷ್ಟ್ರೀಯ ನೋಂದಣಿ' ಸಿದ್ಧಪಡಿಸಿರೋದು ಕೂಡ ಸೇರಿದೆ. ಇನ್ನು ರಾಷ್ಟ್ರೀಯ ಬಯೋಫಾರ್ಮ ಮಿಷನ್ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಇದು ಭಾರತದಲ್ಲಿ ಅಂಕಾಲಜಿ, ಅಪ್ತಮಾಲಜಿ, ರೆಮಾಟಾಲಜಿ ಹಾಗೂ ಡೈಯಬೆಟಾಲಜಿ ಕ್ಷೇತ್ರಗಳಲ್ಲಿ ಕ್ಲಿನಿಕಲ್ ಟ್ರೈಯಲ್ ಗಳನ್ನು ನಡೆಸುವ ಸಾಮರ್ಥ್ಯವನ್ನು ಬಲಪಡಿಸಲು 18 ರಾಜ್ಯಗಳ 36 ಸಂಸ್ಥೆಗಳಲ್ಲಿ ಐದು ವಿಶೇಷ ನೆಟ್ ವರ್ಕ್ ಗಳನ್ನು ಸ್ಥಾಪಿಸಿದೆ.
ಅಮೆರಿಕದ ಮತ್ತೊಂದು ಬ್ಯಾಂಕ್ ಪತನ: ದೊಡ್ಡಣ್ಣನಿಗೆ ಸರಣಿ ಶಾಕ್
ಇನ್ನು ಭಾರತದಲ್ಲಿ ಟ್ರೈಯಲ್ ಪ್ರಕ್ರಿಯೆಗಳನ್ನು ಕೈಗೊಳ್ಳಲು ಇರುವ ತೊಂದರೆಗಳು ಹಾಗೂ ಟ್ರೈಯಲ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ಪ್ರಮಾಣದಲ್ಲಿ ಕಡಿಮೆಯಿರೋದನ್ನು ಕೂಡ ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಈ ವರದಿ ಟಾಪ್ ಬಯೋಫಾರ್ಮ ಕಂಪನಿಗಳು ತಮ್ಮ ತಂತ್ರಗಳನ್ನು ಟೈರ್ -1 ನಗರಗಳು (ಉದಾಹರಣೆಗೆ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ) ಕಡೆಗೆ ಕೇಂದ್ರೀಕರಿಸುವಂತೆ ಶಿಫಾರಸ್ಸು ಮಾಡಿದೆ. ಈ ನಗರಗಳಲ್ಲಿ ಹಾಸಿಗೆ ಸಾಮರ್ಥ್ಯ, ವೈದ್ಯರುಗಳ ಸಂಖ್ಯೆ ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿರುವ ಕಾರಣ ಈ ಟ್ರೈಯಲ್ ಗಳನ್ನು ವೇಗವಾಗಿ ಹಾಗೂ ಹೆಚ್ಚು ದಕ್ಷತೆಯಿಂದ ಮಾಡಲು ಸಾಧ್ಯವಾಗಲಿದೆ.
ಇನ್ನು ರಷ್ಯಾ ಹಾಗೂ ಉಕ್ರೇನ್ ನಲ್ಲಿ ದೊಡ್ಡ ಫಾರ್ಮಾ ಉತ್ತೇಜಿತ ಫೇಸ್ 1-3ರ ತನಕ ಕ್ಲಿನಿಕಲ್ ಟ್ರೈಯಲ್ ಸ್ಥಳಗಳು ಅಭ್ಯರ್ಥಿಗಳನ್ನು ಇನ್ನೂ ನೇಮಕ ಮಾಡಿಲ್ಲ. ಹೀಗಾಗಿ ಈ ಟ್ರೈಯಲ್ ಗಳನ್ನು ಸ್ಥಳಾಂತರಿಸಲು ಭಾರತ ಸೂಕ್ತ ತಾಣವಾಗಿದೆ ಎಂದು ವರದಿ ಹೇಳಿದೆ.