
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಷೇರು ಮಾರುಕಟ್ಟೆಯತ್ತ ಆಕರ್ಷಿತರಾಗುತ್ತಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಷೇರು ಮಾರುಕಟ್ಟೆಯಿಂದ ಮ್ಯೂಚುಯಲ್ ಫಂಡ್‌ಗಳವರೆಗೆ ಹೂಡಿಕೆ ಮಾಡುತ್ತಿದ್ದಾರೆ. ಆದ್ರೆ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಮಾರುಕಟ್ಟೆಯಲ್ಲಿನ ಅಪಾಯಗಳನ್ನು ಒಳಗೊಂಡಿರುತ್ತದೆ. ಒಂದಿಷ್ಟು ಮಂದಿ ತಮ್ಮ ಉದ್ಯೋಗದ ಜೊತೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡಿಕೊಂಡು ಲಾಭ ಪಡೆಯುತ್ತಿರುತ್ತಾರೆ. ಆದರೆ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ತುಂಬಾ ಕ್ರಮಬದ್ಧವಾಗಿದ್ದರೆ ಮಾತ್ರ ಅದರಿಂದ ಲಾಭ ನಿರೀಕ್ಷೆ ಮಾಡಬಹುದು. ಕೆಲವರು ಷೇರು ಮಾರುಕಟ್ಟೆ ಏರುಪೇರು ಗಮನಿಸಲು ಸಾಧ್ಯವಾಗದ ಜನರು ಮ್ಯೂಚುಯಲ್ ಫಂಡ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಮ್ಯೂಚುಯಲ್ ಫಂಡ್‌ನಲ್ಲಿ SIP ಮತ್ತು ಒಟ್ಟು ಮೊತ್ತ ಎರಡು ರೀತಿಯಲ್ಲಿ ಹೂಡಿಕೆ ಮಾಡಲಾಗುತ್ತದೆ. ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವ ಮೂಲಕ ಕೋಟಿಗಳಷ್ಟು ಹಣ ಗಳಿಸಬಹುದು. ಹೂಡಿಕೆದಾರರಿಗೆ ಸಂಯುಕ್ತ ಬಡ್ಡಿಯ ಲಾಭ ಸಿಗುತ್ತದೆ, ಇದು ಅವರ ಹಣವನ್ನು ಹಲವು ಪಟ್ಟು ಹೆಚ್ಚಿಸುತ್ತದೆ. ಸುಮಾರು ₹170 ಹೂಡಿಕೆ ಮಾಡಿ ₹5 ಕೋಟಿ ಗಳಿಸೋದು ಹೇಗೆ ಅಂತ ನೋಡೋಣ ಬನ್ನಿ.
ಎಲ್ಲಿ ಹೂಡಿಕೆ ಮಾಡಬೇಕು?
SIP (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಪ್ರತಿದಿನ ಕೇವಲ 167 ರೂಪಾಯಿ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯಲ್ಲಿ 5 ಕೋಟಿ ರೂಪಾಯಿ ನಿಮ್ಮದಾಗಿಸಿಕೊಳ್ಳಬಹುದು. ದಿನಕ್ಕೆ 167 ರೂ. ಹೂಡಿಕೆ ಮಾಡಿದ್ರೆ, ತಿಂಗಳಿಗೆ 5,000 ರೂ. ಆಗುತ್ತದೆ. ಮಾಸಿಕ 5,000 ರೂ. ಹೂಡಿಕೆ ಮಾಡಿದ್ರೆ 25 ವರ್ಷಕ್ಕೆ ದೊಡ್ಡ ಮೊತ್ತ ನಿಮ್ಮದಾಗುತ್ತದೆ. ಭವಿಷ್ಯದಲ್ಲಿ ಕೋಟಿ ಹಣ ನಿಮ್ಮದಾಗಬೇಕಾದ್ರೆ ಇಂದಿನಿಂದಲೇ ಸಣ್ಣ ಉಳಿತಾಯ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.
167 ರೂ.ಯಿಂದ 5 ಕೋಟಿವರೆಗಿನ ವ್ಯವಹಾರ!
SIPಯಲ್ಲಿ 5,000 ರೂ.ಯಂತೆ 25 ವರ್ಷ ಅವಧಿಯವರೆಗೆ ಹೂಡಿಕೆ ಮಾಡಬೇಕು. ಇದರ ಜೊತೆ ಪ್ರತಿವರ್ಷ ನಿಮ್ಮ ಹೂಡಿಕೆಯನ್ನು ಶೇ.15ರಷ್ಟು ಹೆಚ್ಚಳ ಮಾಡಿಕೊಳ್ಳುತ್ತಾ ಹೋಗಬೇಕು. ಈ ಲೆಕ್ಕಾಚಾರದ ಪ್ರಕಾರ 25 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ ₹1,27,67,581 ಆಗುತ್ತದೆ. ಈ ಹಣದ ಮೇಲೆ ಶೇ.15ರಷ್ಟು ಲಾಭ ಸಿಕ್ಕರೆ ₹3,94,47,362 ಆಗುತ್ತದೆ. ಒಟ್ಟು ಹೂಡಿಕೆ ಮತ್ತು ಒಟ್ಟು ಲಾಭ ಸೇರಿಸಿದ್ರೆ ನಿಮ್ಮ ಹಣ ₹5.22 ಕೋಟಿ ಆಗುತ್ತದೆ.
SIP ಎಂದರೇನು?
SIP ಎಂದರೆ ವ್ಯವಸ್ಥಿತ ಹೂಡಿಕೆ ಯೋಜನೆ. ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಇದು ಒಂದು ಘನ ಮಾರ್ಗ. ಇದರ ಮೂಲಕ ನೀವು ದೈನಂದಿನ, ಸಾಪ್ತಾಹಿಕ, ಮಾಸಿಕ ಮತ್ತು ಒಟ್ಟಿಗೆ ಹೂಡಿಕೆ ಮಾಡಬಹುದು. SIP ಸಂಯುಕ್ತ ಬಡ್ಡಿಯಿಂದ ಲಾಭವನ್ನು ಹಲವು ಪಟ್ಟು ಹೆಚ್ಚಿಸುತ್ತದೆ. ಮ್ಯೂಚುಯಲ್ ಫಂಡ್‌ನಲ್ಲಿ ಇಕ್ವಿಟಿ, ಡೆಟ್ ಮತ್ತು ಹೈಬ್ರಿಡ್ ಫಂಡ್‌ಗಳಂತಹ ಯೋಜನೆಗಳಿವೆ. ಇಕ್ವಿಟಿ ಫಂಡ್‌ನಲ್ಲಿ ದೀರ್ಘಾವಧಿಯ ಹೂಡಿಕೆ ಹೆಚ್ಚು ಲಾಭದಾಯಕವೆಂದು ಪರಿಗಣಿಸಲಾಗಿದೆ, ಏಕೆಂದರೆ ಇದು ಷೇರು ಮಾರುಕಟ್ಟೆಯ ಏರಿಳಿತಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹೂಡಿಕೆದಾರರು ತಮ್ಮ ಆಯ್ಕೆಯ ಪ್ರಕಾರ ಅಲ್ಪಾವಧಿ, ದೀರ್ಘಾವಧಿ, ಡೆಟ್ ಅಥವಾ ಹೈಬ್ರಿಡ್ ಫಂಡ್‌ನಲ್ಲಿ SIP ಮಾಡಬಹುದು.
ಇದನ್ನೂ ಓದಿ: ಕೇವಲ ಒಂದು ಟೆಕ್ನಿಕ್ ಬಳಸಿ ಷೇರು ಮಾರುಕಟ್ಟೆಯಿಂದ 2 ಕೋಟಿ ಗಳಿಸಿದ ಹಳ್ಳಿ ಹುಡುಗಿ
SIP ನಲ್ಲಿ ಹೂಡಿಕೆ ಮಾಡಿ ಕೋಟ್ಯಾಧಿಪತಿಯಾಗುವ ಮಾರ್ಗ
ಇದನ್ನೂ ಓದಿ: ಅಪ್ಪನ ಟೆಕ್ನಿಕ್ ಬಳಸಿ ಷೇರು ಮಾರುಕಟ್ಟೆಯಿಂದ ಲಕ್ಷಾಂತರ ಆದಾಯ; ಹೂಡಿಕೆ ಮಾಡಿದ ಷೇರು ಯಾವುದು?
ಗಮನಿಸಿ - ಷೇರು/ಮ್ಯೂಚುವಲ್ ಫಂಡ್ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ, ದಯವಿಟ್ಟು ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಏಷ್ಯಾನೆಟ್ ಸುವರ್ಣನ್ಯೂಸ್ ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.