ಸಾಧನೆಗೆ ವಯಸ್ಸಿನ ಹಂಗಿಲ್ಲ; ನಿವೃತ್ತಿ ವಯಸ್ಸಿನಲ್ಲಿ ಉದ್ಯಮ ಪ್ರಾರಂಭಿಸಿ 16 ಸಾವಿರ ಕೋಟಿ ಒಡೆಯನಾದ ಉದ್ಯಮಿ!

By Suvarna NewsFirst Published Feb 4, 2023, 4:40 PM IST
Highlights

ಬದುಕು ಯಾವಾಗ ಬೇಕಾದ್ರೂ ತಿರುವು ಪಡೆದುಕೊಳ್ಳಬಹುದು. ಹಾಗೆಯೇ ಯಶಸ್ಸಿಗೆ ಕೂಡ ವಯಸ್ಸಿನ ಮಿತಿಯಿಲ್ಲ. ಇದಕ್ಕೆ ಭಾರತದ ಉದ್ಯಮಿ ಅಶೋಕ್ ಬೂಬ್ ಅವರಿಗಿಂತ ಉತ್ತಮ ನಿದರ್ಶನ ಬೇರೆ ಬೇಕಿಲ್ಲ. 54ನೇ ವಯಸ್ಸಿನಲ್ಲಿ ಉದ್ಯಮ ಪ್ರಾರಂಭಿಸಿ  16 ಸಾವಿರ ಕೋಟಿ ರೂ. ಒಡೆಯನಾದ ಬೂಬ್ ಅವರ ಯಶೋಗಾಥೆ ಇಲ್ಲಿದೆ. 

Business Desk:ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಲ್ಲ. ದೃಢಸಂಕಲ್ಪ, ಇಚ್ಛಾಶಕ್ತಿ ಹಾಗೂ ಕಠಿಣ ಪರಿಶ್ರಮ ಸಾಧನೆಯ ಹಾದಿಯಲ್ಲಿ ಮುನ್ನಡೆಸಬಲ್ಲದು. ಇದಕ್ಕೆ ಅತ್ಯುತ್ತಮ ಉದಾಹರಣೆ ಅಶೋಕ್ ಬೂಬ್. ಫೋರ್ಬ್ ಪಟ್ಟಿಯಲ್ಲಿ ಅಶೋಕ್ ಬೂಬ್ ಅವರನ್ನು ಭಾರತದ 100 ಶ್ರೀಮಂತ ಭಾರತೀಯರಲ್ಲಿ ಒಬ್ಬರೆಂದು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಬೂಬ್ ಅವರು 94ನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಸಂಪತ್ತು ಅಂದಾಜು 16,800  ಕೋಟಿ ರೂ. (2.09 ಬಿಲಿಯನ್ ಡಾಲರ್). 70 ವರ್ಷ ವಯಸ್ಸಿನ ಅಶೋಕ್ ಬೂಬ್ ತಮ್ಮ 54ನೇ ವಯಸ್ಸಿನಲ್ಲಿ ಉದ್ಯಮ ಸ್ಥಾಪಿಸಿ ಅದರಲ್ಲಿ ಯಶಸ್ಸು ಕಂಡವರು. 2006ರಲ್ಲಿ 54ನೇ ವಯಸ್ಸಿನಲ್ಲಿ ಅಶೋಕ್ ಬೂಬ್ ಸ್ವಂತ ಉದ್ಯಮ ಸ್ಥಾಪಿಸಿ ಆ ಮೂಲಕ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ. ಮಂಗಳಂ ಡ್ರಗ್ಸ್ ಹಾಗೂ ಆರ್ಗೆನಿಕ್ ನಲ್ಲಿ ನಿರ್ದೇಶಕರಾಗಿ 30 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಅವರು, ಆ ಬಳಿಕ ಮಾಲೀಕರ ಜೊತೆಗಿನ ವೈಮನಸ್ಸಿನಿಂದ ಉದ್ಯೋಗ ತೊರೆಯುತ್ತಾರೆ. ಡ್ರಗ್ಸ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದ ಬೂನ್ ಗೆ ಅದರಲ್ಲೇ ಮುಂದುವರಿಯು ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ, ಆ ಕ್ಷೇತ್ರದಲ್ಲಿ ಮುಂದುವರಿಯಲು ಅವರಿಗೆ ಎರಡನೇ ಅವಕಾಶವೊಂದು ಸೃಷ್ಟಿಯಾಯಿತು. 

ಬೂಬ್ ಅವರ ಅಳಿಯ ಸಿದ್ಧಾರ್ಥ್ ಸಿಕ್ಚಿ ಕೂಡ ಇದೇ ಸಮಯದಲ್ಲಿ ಅಂದ್ರೆ 2006 ಮೇನಲ್ಲಿ ಆರ್ಗನಿಕ್ಸ್ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸುತ್ತಾರೆ. ಬೂಬ್ ಹಾಗೂ ಸಿಕ್ಚಿ ಇಬ್ಬರೂ ಮುಂಬೈ ಇನ್ಸ್ ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದರು. ಇಬ್ಬರಿಗೂ ಕೆಮಿಕಲ್ ಕ್ಷೇತ್ರದ ಹಿನ್ನೆಲೆಯಿದ್ದ ಕಾರಣ ಅವರಿಬ್ಬರೂ ಜೊತೆಯಾಗಿ ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಯೋಚಿಸಿದರು. ಹೊಸ ಕಂಪನಿ ರಚನೆ ಇನ್ನೂ ಪ್ಲ್ಯಾನಿಂಗ್ ಹಂತದಲ್ಲೇ ಇದ್ದ ಕಾರಣ ಹಾಗೂ ಹಣದ ಕೊರತೆ ಇದ್ದರೂ ಇಬ್ಬರೂ ಗುಜರಾತ್ ವಾಪಿಯಲ್ಲಿ ಪುಟ್ಟ  300 ಚದರ ಅಡಿ ಪ್ರಯೋಗಾಲಯದಲ್ಲಿ ಅನೇಕ ಕೆಮಿಸ್ಟ್ರೀಸ್ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. 

ಅಟಲ್ ಪಿಂಚಣಿ ಯೋಜನೆಗೆ 5 ಕೋಟಿ ಜನರು ಸೇರ್ಪಡೆ; ಮಹಿಳೆಯರ ಪ್ರಮಾಣದಲ್ಲಿಏರಿಕೆ

ಇದೇ ಸಮಯದಲ್ಲಿ ಚೀನಾದಲ್ಲಿನ ನದಿಗಳು ಕೂಡ ತ್ಯಾಜ್ಯ ನೀರು ಹಾಗೂ ಆಸಿಡ್ ಮಳೆಯ ಕಾರಣದಿಂದ ಕಲುಷಿತಗೊಂಡಿರುವ ವರದಿಗಳನ್ನು ಬೂಬ್ ಗಮನಿಸುತ್ತಾರೆ. ಇದು ಅವರನ್ನು ಸುಸ್ಥಿರ ಇಂಧನಗಳ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಲು ನಿರ್ಧರಿಸುತ್ತಾರೆ. ಅವರಿಗೆ ಈ ಕ್ಷೇತ್ರದ ಬಗ್ಗೆ ಅರಿವು ಕೂಡ ಇತ್ತು. ಹಾಗೆಯೇ ತನ್ನ ಹಿಂದಿನ ಸಂಸ್ಥೆಯ ಉತ್ಪನ್ನಗಳ ಜೊತೆಗೆ ಸ್ಪರ್ಧೆ ಮಾಡಲು ಅಥವಾ ಅಲ್ಲಿನ ಸಿಬ್ಬಂದಿಗಳನ್ನು ನೇಮಿಸಿಕೊಳ್ಳದಿರಲು ತೀರ್ಮಾನಿಸಿದರು ಕೂಡ. ಬೂಬ್ ಹಾಗೂ ಸಿಕ್ಚಿ ಇಬ್ಬರೂ ಹೊಸ ಜನಾಂಗದ ಉದ್ಯಮ ನಾಯಕರನ್ನು ಪ್ರತಿನಿಧಿಸುತ್ತಾರೆ. ಅಲ್ಲದೆ, ವಿಶೇಷ ಕೆಮಿಕಲ್ಸ್ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಈ ಕಂಪನಿಗಳು ಕಳೆದ ಐದು ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಬಲಿಷ್ಠ ಹಣಕಾಸನ ಸ್ಥಿತಿಗತಿಗಳನ್ನು ಹೊಂದಿವೆ.  ಚೀನಾ ಈ ಕ್ಷೇತ್ರದಲ್ಲಿ ಇತ್ತೀಚೆಗೆ ಇತರ ದೇಶಗಳ ಕಂಪನಿಗಳಿಗೂ ಅವಕಾಶ ಒದಗಿಸುತ್ತಿರುವ ಕಾರಣ ದೀರ್ಘಕಾಲದಲ್ಲಿ ಪ್ರಯೋಜನವಾಗಲಿದೆ ಎಂದು ಈ ಕ್ಷೇತ್ರದ ಹೂಡಿಕೆದಾರರು ಆಲೋಚಿಸಿದರು. 

Union Budget:ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಹೆಚ್ಚಳ; ಠೇವಣಿ, ಬಡ್ಡಿದರ ಮಾಹಿತಿ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಕೆಮಿಕಲ್ಸ್ ಉತ್ಪಾದನೆಯಲ್ಲಿ ಭಾರತದ ಕಂಪನಿಗಳು ಜಗತ್ತಿನಾದ್ಯಂತ ಉತ್ತಮ ಹೆಸರು ಗಳಿಸಿವೆ. ಈ ಕಂಪನಿಗಳು ಶತಕೋಟಿ ಡಾಲರ್ ನಲ್ಲಿ ಮಾರುಕಟ್ಟೆ ಬಂಡವಾಳ ಹೊಂದಿವೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸಂಸ್ಥೆಗಳು ಭಾರತದ ರಫ್ತು ವಲಯದ ಪ್ರಮುಖ ಕಂಪನಿಗಳಾಗಿ ಬೆಳೆದು ನಿಲ್ಲುವ ಸಾಧ್ಯತೆಯಿದೆ. ಆ ಮೂಲಕ ಐಟಿ ಹಾಗೂ ಔಷಧ ಕಂಪನಿಗಳಿಗೆ ಸ್ಪರ್ಧೆ ನೀಡುವ ಸಾಧ್ಯತೆಯಿದೆ. 


 

click me!