ಮಕ್ಕಳನ್ನು ದಾರಿ ತಪ್ಪಿಸುತ್ತಿರುವ ಜಾಹೀರಾತುಗಳು.. ಎಂತೆಂಥಾ ಸುಳ್ಳು!

By Suvarna NewsFirst Published Oct 2, 2020, 7:29 PM IST
Highlights

ಆನ್ ಲೈನ್ ಜಾಹೀರಾತುಗಳ ಲೋಕ/ ದಿಕ್ಕು ತಪ್ಪಿಸುವ ಮಾಯಾಲೋಕ/   ಜಾಹೀರಾತುಗಳು ಹೇಳುವುದು ಒಂದು ಮಾಡುವುದು ಒಂದು/  ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ

ನವದೆಹಲಿ(ಅ. 02) ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ  ಜಾಹೀರಾತುಗಳು ಜನರನ್ನು ತಪ್ಪು ದಾರಿಗೆ ಳೆಯುತ್ತಿವೆ. ಹಾಸಿಗೆಗಳು, ಸ್ಯಾನಿಟೈಜರ್‌ಗಳು, ಬಟ್ಟೆಗಳು, ರೆಡಿಮೇಡ್ ಉಡುಪುಗಳು,  ಜ್ಯೂಸ್, ಬ್ರೆಡ್ ಮತ್ತು ಐಸ್ ಕ್ರೀಮ್‌ಗಳಂತಹ ಉತ್ಪನ್ನಗಳ ಜಾಹೀರಾತು ನೀಡುತ್ತ ಇವು ರೋಗ ನಿರೋಧ ಶಕ್ತಿ ಹೆಚ್ಚಿಸುತ್ತಿವೆ ಎಂದು ಹೇಳುತ್ತಿವೆ. ಇದು ಕೊರೋನಾ ವಿರುದ್ಧ ಹೋರಾಟ ಮಾಡಲು ನೆರವಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ವರ್ಷದ  ಆಗಸ್ಟ್  ನಲ್ಲಿ ಲೋಕಲ್ ಸರ್ಕಲ್ಸ್ ವರದಿಯೊಂದನ್ನು ಬಿಡುಗಡೆ ಮಾಡಿತ್ತು.  ತಪ್ಪು ದಾರಿಗೆ ಎಳೆಯುತ್ತಿರುವ ಜಾಹೀರಾತುಗಳ ಬಗ್ಗೆ ಅಧ್ಯಯನ ವರದಿ ನೀಡಲಾಗಿತ್ತು.  67,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದ ವರದಿಯನ್ನು ಗ್ರಾಹಕ ವ್ಯವಹಾರಗಳ ಇಲಾಖೆಗೆ ಸಲ್ಲಿಸಲಾಗಿತ್ತು.

ಈ ಸಮೀಕ್ಷೆ ವೇಳೆ ಜನರು ಜಾಹೀರಾತುಗಳು ಹೇಗೆ ದಾರಿ ತಪ್ಪಿಸುತ್ತ ಜನರನ್ನು ಮಿಸ್ ಲೀಡ್ ಮಾಡುತ್ತಿವೆ ಎಂದು ತಿಳಿಸಿದ್ದರು.   ಶೇ .75 ರಷ್ಟು ಜನ ಸೆಲೆಬ್ರಿಟಿಗಳನ್ನು ಬಳಸಿಕೊಂಡ ಜಾಹೀರಾತುಗಳು ಹಾದಿ ತಪ್ಪಿಸುತ್ತಿವೆ ಎಂದು ಹೇಳಿದ್ದರು.  ಇಂಥ ಜಾಹೀರಾತು ಪ್ರಸಾರಕ್ಕೂ ಮುನ್ನ ಸರ್ಕಾರದ ರೆಗ್ಯೂಲೆಟರಿ ಅಥಾರಟಿ ಒಂದು ಸೂಕ್ತ ಪರಿಶೀಲನೆ ನಡೆಸಬೇಕು ಎಂದು  ಎಂದು ಶೇ.  80  ರಷ್ಟು ಜನ ಹೇಳಿದ್ದಾರೆ. ಈಗ ಪರಿಶೀಲನೆ ನಡೆಸುತ್ತಿರುವ ಕೈಗಾರಿಕಾ ವಿಭಾಗಕ್ಕೆ ದಂಡ ಹಾಕುವ ಅಧಿಕಾರ ಇಲ್ಲ. ಇಂಥ ಮಿಸ್ ಲೀಡಿಂಗ್ ಜಾಹೀರಾತುಗಳ ವಿರುದ್ಧ ಆಗಿಂದಾಗ್ಗೆ ಕ್ರಮ ಆಗಬೇಕು ಎಂಬ ಒತ್ತಾಯ ಬಂದಿದೆ.

ಬೆಚ್ಚಿ ಬೀಳಿಸಿದ ಸರ್ವೇ, ದೇಶದ 15 ಜನರಲ್ಲಿ ಒಬ್ಬರಿಗೆನ ಕೊರೋನಾ

ಲೋಕಲ್ ಸರ್ಕಲ್ ತನ್ನ ವರದಿ ಸಲ್ಲಿಕೆ ಮಾಡಿದ ನಂತರ  ಗ್ರಾಹಕ ವ್ಯವಹಾರಗಳ ಸಚಿವಾಲಯವು 'ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ  ಈ ರೀತಿಯ ಮಿಸ್ ಲೀಡಿಂಗ್ ಜಾಹೀರಾತು ತಡೆಯುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.  ಅಕ್ಟೋಬರ್ 1 ರೊಳಗೆ ಸಾರ್ವಜನಿಕರು ಅಭಿಪ್ರಾಯ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.

 ಸಾಮಾನ್ಯ ಗ್ರಾಹಕರ ಪ್ರತಿಕ್ರಿಯೆಯನ್ನು ಪಡೆಯಲು ಸ್ಥಳೀಯ ವಲಯಗಳು ಈ ಕರಡನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶ್ನೆಗಳನ್ನು ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಸಮೀಕ್ಷೆಯು ದೇಶದ 320 ಅಧಿಕ  ಜಿಲ್ಲೆಗಳಲ್ಲಿ ವ್ಯಾಪಿಸಿರುವ ಗ 115,000 ಗ್ರಾಹಕರ ಪ್ರತಿಕ್ರಿಯೆಗ ಪಡೆದುಕೊಂಡಿತು.

ಮೊದಲ ಪ್ರಶ್ನೆಯಲ್ಲಿ ಮುದ್ರಣ, ದೂರದರ್ಶನ, ರೇಡಿಯೋ ಮತ್ತು ಡಿಜಿಟಲ್ ಜಾಹೀರಾತುಗಳಲ್ಲಿ ದೃಡೀಕರಣ ಟಿಪ್ಪಣಿ(ಡಿಸ್‌ಕ್ಲೈಮರ್)  ಹೇಗೆ ಇರುತ್ತವೆ ಎಂದು ಗ್ರಾಹಕರನ್ನು ಕೇಳಲಾಯಿತು.  ಶೇ. 65  ಡಿಸ್ ಕ್ಲೈಮರ್ ಅರ್ಥ ಮಾಡಿಕೊಳ್ಳಲು ಭಾರೀ ಕಷ್ಟ ಎಂದು ಹೇಳಿದರೆ,  ಶೇ. 22 ಜನರು ಕೇಳಲು, ವೀಕ್ಷಿಸಲು ಮತ್ತು ಓದಲು ಸ್ವಲ್ಪ ಕಷ್ಟ ಎಂದು ಹೇಳಿದರು.  ಕೇವಲ ಶೇ. 7 ಜನ ಮಾತ್ರ  ಕೇಳಲು ಮತ್ತು ನೋಡಲು ಸಾಧ್ಯವಿದೆ ಎಂದು ಹೇಳಿದರು.   ಡಿಸ್ ಕ್ಲೈಮರ್ ಗಳು ಜಾಹೀರಾತುಗಿಂತ ವೇಗವಾಗಿ ತೆರೆ ಮೇಲೆ ಬಂದು ಸರಿದು ಹೋಗುತ್ತವೆ.

ಭಾರತದಲ್ಲಿ ಹೆಚ್ಚು ಸಂತಸದಿಂದ ಇರುವ ರಾಜ್ಯ ಯಾವುದು?


ಇದಾದ ಮೇಲೆ ಕಳೆದ ಒಂದು ವರ್ಷದಲ್ಲಿ  ಮಕ್ಕಳಿಗೆ ಮಾರಕಾವಾದ  ಜಾಹೀರಾತನ್ನು ಎಲ್ಲಿ ಕಾಣುತ್ತೀರಿ? ಎಂಬ  ಪ್ರಶ್ನೆ ಕೇಳಲಾಗಿತ್ತು. ಶೇ. 19  ಜನ ಟಿವಿ ಎಂದರೆ ಶೇ. 4 ರಷ್ಟು ಜನ ಯುಟ್ಯೂಬ್ ನಂತಹ ಸೈಟ್ ಗಳು ಎಂದರು. ಶೇ. 27 ಜನ ಟಿವಿ ಮತ್ತು ವಿಡಿಯೋ ಸೈಟ್ ಎಂದರೆ ಶೆ. 2 ರಷ್ಟು ಜನ ಮುದ್ರಣ ಮಾಧ್ಯಮ ಎಂದರು. ಶೇ 34 ರಷ್ಟು ಜನ ಎಲ್ಲ ಮಾಧ್ಯಮಗಳು ಎಂದು ಹೇಳಿದದೆ ಶೇ. 4 ಜನ ಇದಾವುದು ಅಲ್ಲ ಎಂದರೆ ಶೇ.  10  ಷ್ಟು ಜನ ಗೊತ್ತಿಲ್ಲ ಎಂದು  ಹೇಳಿದರು. 

ಶೇ.  86 ಜನ ಹೇಳುವಂತೆ ಮಕ್ಕಳಿಗೆ ಸಂಬಂಧಿಸಿಯೇ ಇಲ್ಲದ ಮಕ್ಕಳ ಮೇಲೆ ಪರಿಣಾಮ ಬೀರುವ ಜಾಹೀರಾತುಗಳು ಟಿವಿಯಲ್ಲಿ ಪ್ರಸಾರ ಆಗುತ್ತದೆ.   ಕಳೆದ ಒಂದು ವರ್ಷದ ಅವಧಿಯಲ್ಲಿ  ಜಾಹೀರಾತುಗಳಲ್ಲಿ ತೋರಿಸುವ ದರದಲ್ಲಿಯೇ ವಸ್ತುಗಳು ಸಿಗುತ್ತವೆಯೇ ಎಂಧು ಪ್ರಶ್ನೆ ಮಾಡಲಾಗಿತ್ತು. . ಶೇ.  47 ರಷ್ಟು ಜನ ಸಾಧ್ಯವೇ ಇಲ್ಲ. ಜಾಹೀರಾತಿನಲ್ಲಿ ತೋರಿಸುವುದು ಒಂದು  ಮಾರುಕಟ್ಟೆ, ಆಪ್, ವೆಬ್ ಸೈಟ್ ನಲ್ಲಿ ಇರುವುದೇ ಮತ್ತೊಂದು ದರ ಎಂದರು.  ಶೇ. 27 ರಷ್ಟು ಜನ ಮಾತ್ರ ಯಾವ ಕಡಿಮೆ ದರ ತೋರಿಸಿದ್ದಾರೆಯೋ ಅಷ್ಟೆ ಮಾರುಕಟ್ಟೆಯಲ್ಲಿಯೂ ಇದೆ ಎಂದಿದ್ದಾರೆ.  ಆದರೆ ಶೇ. 26 ಜನ ಜಾಹೀರಾತಿನಲ್ಲಿ ತೋರಿಸಿದಂತೆ ಪ್ರಾಡಕ್ಟ್ ಲಭ್ಯವಿದ್ದರೂ ಹೆಚ್ಚುವರಿ ಕಂಡಿಶನ್ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.  

 ಇನ್ನು ಆಲ್ , ಗೇಮ್ ಮತ್ತು ಉಳಿದ ಜಾಹೀರಾತುಗಳ ವಿಚಾರಕ್ಕೆ ಬಂದರೆ ಮಕ್ಕಳನ್ನು ಶೇ.  51 ಜನ  ಜಾಹೀರಾತುಗಳು ದಾರಿ ತಪ್ಪಿಸುತ್ತಿವೆ ಎಂದಿದ್ದರೆ ಶೇ. 24 ರಷ್ಟು ಜನ ಕೆಲ ಜಾಹೀರಾತುಗಳು ಎಂದು ಹೇಳಿದ್ದಾರೆ.  ಆದರೆ ಶೇ.  2  ರಷ್ಟು ಜನ ಅಂಥ ಜಾಹೀರಾತು ಕಣ್ಣಿಗೆ ಬಿದ್ದಿಲ್ಲ ಎಂದು ಹೇಳಿದ್ದಾರೆ. ಶೇ. 23 ನಮಗೆ ಏನು  ಗೊತ್ತಿಲ್ಲ ಎಂದಿದ್ದಾರೆ. ಶೇ. 75ರಷ್ಟು ಜನ ಈ ಆನ್ ಲೈನ್ ಗೇಮಿಂಗ್ ಜಾಹೀರಾತುಗಳು ಮಕ್ಕಳನ್ನು ಮಿಸ್ ಲೀಡ್ ಮಾಡಿದ್ದು ಅಲ್ಲದೇ ಅವರ ಸಮಯ ವ್ಯರ್ಥ ಮಾಡಲು ಕಾರಣವಾಗಿದೆ ಎಂದಿದ್ದಾರೆ.

ಕಳೆದ 1 ವರ್ಷದಲ್ಲಿ ಉಚಿತ ಉತ್ಪನ್ನದ ಪ್ಯಾಕೇಜಿಂಗ್, ನಿರ್ವಹಣೆ ಜಾಹೀರಾತುಗಳ ವಿಚಾರವನ್ನು ಪ್ರಶ್ನೆ ಮಾಡಲಾಯಿತು. ಶೇ. 20 ಜನರು ಅಂತಹ ಅನೇಕ ಜಾಹೀರಾತುಗಳನ್ನು ನೋಡಿದ್ದೇವೆ ಎಂದು ಹೇಳಿದರು.  ಶೇ. 29 ಜನರು ಅಂತಹ ಕೆಲವು ಜಾಹೀರಾತುಗಳನ್ನು ನೋಡಿದ್ದದೇವೆ ಎಂದರು. ಶೇ. 46 ಜನರು ಅಂತಹ ಯಾವುದೇ ಜಾಹೀರಾತುಗಳನ್ನು ನೋಡಿಲ್ಲ ಎಂದಿದ್ದಾರೆ.

ಜಾಹೀರಾತುಗಳಲ್ಲಿಯೂ ಮಹತ್ವದ ಬದಲಾವಣೆ ಕಳೆದ ಕೆಲ ವರ್ಷಗಳಲ್ಲಿ ಆಗಿದೆ. ಫೇಸ್ ಬುಕ್ , ಟ್ವಿಟರ್, ಇಸ್ಟಾಗ್ರ್ಯಾಮ್, ಯುಟ್ಯೂಬ್  ಕಡೆಗೆ ಜಾಹೀರಾತು ದಾರರು ಮಹತ್ವ ನೀಡಿದ್ದಾರೆ. ಕಳೆದ ಮೂರು ವರ್ಷದಲ್ಲಿ ಲೋಕಲ್ ಸರ್ಕ್ ಸ್ ಗೆ ಸಾವಿರಾರು ದೂರುಗಳೂ ಡಿಜಿಟಲ್ ಜಾಹೀರಾತಿಗೆ ಸಂಬಂಧಿಸಿ ಬಂದಿದೆ.  ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಹ ಹಣ ಸಂದಾಯ ಮಾಡಿದರೆ ಉಚಿತ ಎಂದು  ಹೇಳುವ ಕಂಪನಿ ನಂತರ ಶಿಪ್ಪಿಂಗ್ ಜಾರ್ಜ್ ವಸೂಲಿ ಮಾಡಿದ ಸಾವಿರಾರು ಉದಾಹರಣೆಗಳು ಇವೆ.

ಆದರೆ ಕಳೆದ 1 ವರ್ಷದಲ್ಲಿ ಶೇ.  49 ಗ್ರಾಹಕರು ಇಂಥ ಜಾಹೀರಾತುಗಳನ್ನು ನೋಡಿದ್ದಾರೆ ಎಂದು ಡೇಟಾ ತೋರಿಸುತ್ತದೆ, ಅಲ್ಲಿ ಪ್ಯಾಕಿಂಗ್,ಗೇಮಿಂಗ್  ಮತ್ತು ಜೂಜಾಟದ  ಪ್ಲಾಟ್‌ಫಾರ್ಮ್‌ಗಳ ಜಾಹೀರಾತುಗಳನ್ನು ಸರ್ಕಾರವು ನಿಷೇಧಿಸಬೇಕೇ ಎಂದು ಕೇಳಿದಾಗ,  ಶೇ. 77 ಜನ  ಮಾಡಬೇಕು ಎಂದು ಹೇಳಿದರೆ ಶೇ. 18 ಜನ ಬೇಡ ಎಂದಿದ್ದಾರೆ. ಶೇ.  5 ಷ್ಟು ಜನ ಏನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಸೆ. 18  ರಂದು ಗೂಗಲ್ ಕೆಲ ಪ್ಯಾಂಟಸಿ ಗೇಮಿಂಗ್ ಅಪ್ಲಿಕೇಶನ್ ಗಳನ್ನು ಬಂದ್ ಮಾಡಿತ್ತು.  ಒಂದು ಅರ್ಥದಲ್ಲಿ ಇವು ಬೆಟ್ಟಿಂಗ್ ಆಪ್ ಗಳಾಗಿದ್ದವು.  ಹಣ ಕೊಟ್ಟು ಟೂರ್ನಮೆಂಟ್ ಆಡಿ ರಿಯಲ್ ಮನಿ  ಗೆಲ್ಲಿ ಎಂದು ಸಾರಿಕೊಂಡು ಬರಲಾಗಿತ್ತು. ಡ್ರೀಮ್ ಇಲೆವನ್, ಮೈಟೀಮ್ ಇಲೆವೆನ್, ಮೈಸರ್ಕಲ್ ಇಲೆವೆನ್, ಈ ಪಟ್ಟಿಯಲ್ಲಿ ಸೇರಿದ್ದವು.
 
ಭಾರತದ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ನಲ್ಲಿ ದೊಡ್ಡ ಹೆಸರು ಮಾಡಿರುವ ಲೋಕಲ್ ಸರ್ಕಲ್ ನಾಗರಿಕರು ಮತ್ತು ಸಣ್ಣ ಉದ್ದಿಮೆದಾರರ ಹಿತ ಕಾಪಾಡುತ್ತ ಮುಂದೆ ಸಾಗುತ್ತಿದೆ.  ಸರ್ಕಾರಗಳು ಪಾಲಿಸಿ ಸಿದ್ಧ ಮಾಡುವಾಗ ಸಲಹೆ ನೀಡುವ ಕೆಲಸ ಮಾಡುತ್ತ ಬಂದಿದ್ದು ಗ್ರಾಹಕರ ಹಿತ ಕಾಪಾಡುವಲ್ಲಿ ಬದ್ಧವಾಗಿದೆ.

click me!