ಜ.19ರಿಂದ ಅರಮನೆ ಮೈದಾನದಲ್ಲಿ ಫರ್ನಿಚರ್, ಗೃಹಾಲಂಕಾರ ಎಕ್ಸ್‌ಪೋ

By Web DeskFirst Published Jan 18, 2019, 12:17 PM IST
Highlights

ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಹಯೋಗದಲ್ಲಿ ಪೀಠೋಪಕರಣಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ‘ಇಂಡಿಯನ್ ಫರ್ನಿಚರ್ ಆ್ಯಂಡ್ ಹೋಮ್ ಡೆಕೊರ್ ಎಕ್ಸ್ ಪೋ ಜ. 19ರಿಂದ 21ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದೆ.

ಬೆಂಗಳೂರು :  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಹಯೋಗದಲ್ಲಿ ವೈವಿಧ್ಯಮಯ ಪೀಠೋಪಕರಣಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ‘ಇಂಡಿಯನ್ ಫರ್ನಿಚರ್ ಆ್ಯಂಡ್ ಹೋಮ್ ಡೆಕೊರ್ ಎಕ್ಸ್ ಪೋ 3 ನೇ ಆವೃತಿ’ ಜ. 19ರಿಂದ 21ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದೆ.

ಗ್ರಾಹಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ಎಕ್ಸ್‌ಪೋ ಆಯೋಜಿಸಲಾಗಿದೆ. ಬೆಳಗ್ಗೆ 10.30ರಿಂದ ಸಂಜೆ 8.30ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಎಕ್ಸ್‌ಪೋಗೆ ಭೇಟಿ ನೀಡುವವರು ಲಕ್ಕಿ ಡ್ರಾ ಮೂಲಕ ಪ್ರತಿ ಗಂಟೆಗೆ ಒಂದು ಚಿನ್ನದ ನಾಣ್ಯ ಗೆಲ್ಲಬಹುದು. ಪ್ರದರ್ಶನದಲ್ಲಿ ಅತ್ಯುತ್ತಮ ಪೀಠೋಪಕರಣ ಮತ್ತು ಗೃಹ ಅಲಂಕಾರಿಕ ಉತ್ಪನ್ನಗಳು ಲಭ್ಯ. 

ದೇಶ ವಿದೇಶಗಳ ಪೀಠೋಪಕರಣ ಮತ್ತು ಗೃಹ ಅಲಂಕಾರಿಕ ಉತ್ಪನ್ನಗಳ ಉತ್ಪಾದಕರು, ಡೀಲರ್ಸ್, ಸಗಟು ಮಾರಾಟಗಾರರು, ವಿನ್ಯಾಸಗಾರರು ಎಕ್ಸ್‌ಪೋದಲ್ಲಿ ಭಾಗವಹಿಸಲಿದ್ದಾರೆ. ಗ್ರಾಹಕರಿಗೆ ಮೆಚ್ಚುಗೆ ಯಾಗುವ ವಿದೇಶಿ ಪೀಠೋಪಕರಣಗಳು, ಲೆದರ್ ಪೀಠೋಪಕರಣಗಳು, ಆಕರ್ಷಕ ಹಾಸಿಗೆ ಮತ್ತು ಸೋಫಾಗಳು, ಡೈನಿಂಗ್ ಟೇಬಲ್ಸ್, ಪಿಲ್ಲೋಗಳು, ಕರಕುಶಲ ವಸ್ತುಗಳು, ಕಾರ್ಪೆಟ್ಸ್, ದೇಹದಾರ್ಢ್ಯ ವಸ್ತುಗಳು, ಆಧುನಿಕ ಕಿಚನ್ ವಸ್ತುಗಳು, ಗೋಡೆ ಗಡಿಯಾರಗಳು, ಹಸ್ತಕೃತಿಗಳು ಒಂದೇ ವೇದಿಕೆಯಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ. ಅಲ್ಲದೇ ಪ್ರತಿ ದಿನ ಒಬ್ಬರು ಸೆಲಿಬ್ರೆಟಿ ಭೇಟಿ ನೀಡುವುದು ಈ ಎಕ್ಸ್ಪೋದ ಮತ್ತೊಂದು ವಿಶೇಷವಾಗಿದೆ.

click me!