ಬ್ಯಾಡ್ಮಿಂಟನ್ ಆಡಿ ರಿಲ್ಯಾಕ್ಸ್ ಆಗ್ತೀನೆಂದ ಸಂಸದ ತೇಜಸ್ವಿ ಸೂರ್ಯ

Published : Nov 17, 2019, 07:56 PM IST
ಬ್ಯಾಡ್ಮಿಂಟನ್ ಆಡಿ ರಿಲ್ಯಾಕ್ಸ್ ಆಗ್ತೀನೆಂದ ಸಂಸದ ತೇಜಸ್ವಿ ಸೂರ್ಯ

ಸಾರಾಂಶ

ದೇಶದ ಅತಿ ಕಿರಿಯ ಸಂಸದರಲ್ಲಿ ಒಬ್ಬರೆನಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬ್ಯಾಡ್ಮಿಂಟನ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಒತ್ತಡದ ಪರಿಸ್ಥಿತಿ ನಿಭಾಯಿಸಲು ಬ್ಯಾಡ್ಮಿಂಟನ್ ಆಡುತ್ತೇನೆ ಎಂದು ಸೂರ್ಯ ತಿಳಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಬೆಂಗಳೂರು[ನ.17]: ಬೆಂಗಳೂರು ಯುವ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಂಸದರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ನಗರದಲ್ಲಿ ಕ್ರಿಕೆಟ್ ಪಂದ್ಯವೊಂದನ್ನು ಉದ್ಘಾಟಿಸಿ ಬ್ಯಾಟ್ ಬೀಸಿ ಮಿಂಚಿದ್ದ ತೇಜಸ್ವಿ, ಇದೀಗ ಬ್ಯಾಡ್ಮಿಂಟನ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ, ಸಾಮಾಜಿಕ ಜಾಲತಾಣದಲ್ಲಿ ಟ್ವಿಟರಿಗನೊಬ್ಬ, ಸಂಸದರಾದ ಬಳಿಕ ಕೆಲಸದ ಒತ್ತಡ ಖಂಡಿತವಾಗಿಯೂ ಹೆಚ್ಚಾಗಿರುತ್ತದೆ. ನೀವು ಫಿಟ್ ಆಗಿರಲು ಜಿಮ್ ಅಥವಾ ಯೋಗದ ಮೊರೆ ಹೋಗುತ್ತೀರಾ ಎಂದು ಪ್ರಶ್ನಿಸಿದ್ದಾನೆ.

ತೇಜಸ್ವಿ ಸೂರ್ಯ ನೆಚ್ಚಿಕೊಂಡು 3.2 ಲಕ್ಷ ರೂ. ಕಳಕೊಂಡ ಸ್ಪರ್ಧಿ !

ಈ ಪ್ರಶ್ನೆಗೆ ಉತ್ತರಿಸಿರುವ ತೇಜಸ್ವಿ ಸೂರ್ಯ ಸ್ಮಾಷ್ ಮಾಡುತ್ತಿರುವ ವಿಡಿಯೋದೊಂದಿಗೆ, ನಾನು ಕೆಲವೊಮ್ಮೆ ಬ್ಯಾಡ್ಮಿಂಟನ್ ಆಡುವ ಮೂಲಕ ರಿಲ್ಯಾಕ್ಸ್ ಆಗುತ್ತೇನೆ. ಆದರೆ ನನ್ನ ಹಿರಿಯರಾದ ಕಿರಣ್ ರಿಜಿಜು, ರಾಜ್ಯವರ್ಧನ್ ಸಿಂಗ್ ಅವರು ಸೆಟ್ ಮಾಡಿರುವ ಸ್ಟ್ಯಾಂಡರ್ಡ್ ತಲುಪಬೇಕಿದೆ ಎಂದು ಉತ್ತರಿಸಿದ್ದಾರೆ.

ಫಿಟ್ ಇಂಡಿಯಾ ಕ್ಯಾಂಪೇನ್ ಸಹ ಜನಪ್ರಿಯವಾಗಿದ್ದು  ವಿವಿಧ ನಾಯಕರು, ಸೆಲೆಬ್ರಿಟಿಗಳು ವಿಡಿಯೋ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡಿದ್ದರು. ದೇಶದ ಅತಿ ಕಿರಿಯ ಸಂಸದರಲ್ಲಿ ಸ್ಥಾನ ಪಡೆದುಕೊಂಡಿರುವ ಸೂರ್ಯ ಬೆಂಗಳೂರು ಬನ್ನೇರುಘಟ್ಟ ರಸ್ತೆಯನ್ನು ಹೇಗೆ ದುರಸ್ತಿ ಮಾಡಿದ್ದೇವೆ ಎಂಬುದನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಸರ್ಕಾರ ಮತ್ತು ಅಧಿಕಾರಿಗಳು ಮಾತ್ರವಲ್ಲ ಅವರ ಜತೆ ಜನರು ಕೈಜೋಡಿಸಿದರೆ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಬನ್ನೇರುಘಟ್ಟ ರಸ್ತೆಯ ಉದಾಹರಣೆ ನೀಡಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!