ಫ್ಲೆಕ್ಸ್‌-ಇಂಧನದ ಕಾರು ಉತ್ಪಾದನೆ ಶೀಘ್ರ ಕಡ್ಡಾಯ

By Kannadaprabha NewsFirst Published Sep 25, 2021, 9:34 AM IST
Highlights
  • ದೇಶವನ್ನು ಪೆಟ್ರೋಲ್‌ ಹಾಗೂ ಡೀಸೆಲ್‌ ಬಳಕೆಯಿಂದ ಮುಕ್ತ ಮಾಡಲು ಪ್ಲಾನ್
  • ಮೂರ್ನಾಲ್ಕು ತಿಂಗಳಲ್ಲಿ ಕಾರು ಉತ್ಪಾದನಾ ಕಂಪನಿಗಳು ಫೆಕ್ಸ್‌-ಇಂಧನದ ಎಂಜಿನ್‌ ಉಳ್ಳ ವಾಹನ ಉತ್ಪಾದನೆ 

 ಪುಣೆ (ಸೆ.25):  ದೇಶವನ್ನು ಪೆಟ್ರೋಲ್‌ (petrol) ಹಾಗೂ ಡೀಸೆಲ್‌ (Diesel) ಬಳಕೆಯಿಂದ ಮುಕ್ತ ಮಾಡಲು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕಾರು ಉತ್ಪಾದನಾ ಕಂಪನಿಗಳು ಫೆಕ್ಸ್‌-ಇಂಧನದ (Flex fuel engine) ಎಂಜಿನ್‌ ಉಳ್ಳ ವಾಹನ ಉತ್ಪಾದನೆ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡತೆ ಆದರೆ ಇದು ದೇಶದಲ್ಲಿ ವಾಯುಮಾಲಿನ್ಯ ತಡೆಗಟ್ಟುವಲ್ಲಿ ಬಹುದೊಡ್ಡ ಉಪಕ್ರಮವಾಗಲಿದೆ.

ಮಿಡ್‌ಸೈಜ್ SUV ಆಸ್ಟರ್ ಪರಿಚಯಿಸಿದ ಎಂಜಿ ಹೆಕ್ಟರ್!

ಫ್ಲೆಕ್ಸ್‌ ಇಂಧನ ಅಥವಾ ಫ್ಲೆಕ್ಸಿಬಲ್‌ ಇಂಧನವೆಂದರೆ ಪೆಟ್ರೋಲ್‌ ಮತ್ತು ಎಥೆನಾಲ್‌ ಅಥವಾ ಮೆಥೆನಾಲ್‌  ಸೇರಿಸಿ ತಯಾರಿಸಿದ ಇಂಧನ.

ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!

‘ಇನ್ನು ಮೂರರಿಂದ ನಾಲ್ಕು ತಿಂಗಳಲ್ಲಿ ನಾನೊಂದು ಆದೇಶ ಹೊರಡಿಸುವವನಿದ್ದೇನೆ. ಈ ಬಗ್ಗೆ ಈಗಾಗಲೇ ನಿರ್ಧಾರವಾಗಿದೆ. ಆದೇಶದಲ್ಲಿ, ಬಿಎಂಡಬ್ಲ್ಯು (BMW), ಮರ್ಸಿಡಿಸ್‌ನಿಂದ ಹಿಡಿದು ಟಾಟಾ (TATA), ಮಹಿಂದ್ರಾವರೆಗೆ ದೇಶದಲ್ಲಿರುವ ಪ್ರತಿಯೊಂದು ಕಾರು ಉತ್ಪಾದಕ ಕಂಪನಿಯೂ ಫ್ಲೆಕ್ಸ್‌ ಎಂಜಿನ್‌ ಕಾರುಗಳನ್ನು ಉತ್ಪಾದನೆ ಮಾಡುವುದು ಕಡ್ಡಾಯವಾಗಲಿದೆ. ಬಜಾಜ್‌ ಹಾಗೂ ಟಿವಿಎಸ್‌ ಕಂಪನಿಗಳಿಗೆ ಈಗಾಗಲೇ ಅವರ ವಾಹನಗಳಲ್ಲಿ ಫ್ಲೆಕ್ಸ್‌ ಎಂಜಿನ್‌ ಅಳವಡಿಸಲು ಹೇಳಿದ್ದೇನೆ. ಅದನ್ನು ಮಾಡುವವರೆಗೂ ನನ್ನಲ್ಲಿಗೆ ಬರಬೇಡಿ ಎಂದೂ ಹೇಳಿದ್ದೇನೆ’ ಎಂದು ಗಡ್ಕರಿ ಹೇಳಿದರು.

‘ನನಗೊಂದು ಆಸೆಯಿದೆ. ನನ್ನ ಜೀವಮಾನದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬಳಕೆ ನಿಲ್ಲಬೇಕು. ಅದಕ್ಕೆ ಬದಲಿಯಾಗಿ ರೈತರು (Farmers) ತಮ್ಮ ಉತ್ಪನ್ನವಾದ ಎಥೆನಾಲ್‌ ನೀಡಬೇಕು. ಅದನ್ನು ಬಳಸಿ ವಾಹನಗಳು ಓಡಬೇಕು’ ಎಂದೂ ಅವರು ಶುಕ್ರವಾರ ಪುಣೆಯಲ್ಲಿ ಮೇಲ್ಸೇತುವೆಯೊಂದಕ್ಕೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.

ಏನಿದು ಫ್ಲೆಕ್ಸ್‌ ಎಂಜಿನ್‌?

ಪರ್ಯಾಯ ಇಂಧನ ಬಳಸಿ ಓಡುವ ಫ್ಲೆಕ್ಸ್‌- ಫ್ಯೂಯೆಲ್‌ ವೆಹಿಕಲ್‌ (FFV)ಗಳಲ್ಲಿರುವ ಎಂಜಿನ್‌ಗಳನ್ನು ಫ್ಲೆಕ್ಸ್‌-ಎಂಜಿನ್‌ ಎನ್ನುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಈ ಎಂಜಿನ್‌ಗಳು ಬಳಕೆಯಲ್ಲಿವೆ. ಒಂದಕ್ಕಿಂತ ಹೆಚ್ಚು ಇಂಧನ ಮಿಶ್ರಣ ಮಾಡಿ ಈ ಎಂಜಿನ್‌ಗೆ ಬಳಸಲಾಗುತ್ತದೆ. ಸಾಮಾನ್ಯವಾಗಿ ಪೆಟ್ರೋಲ್‌ ಮತ್ತು ಎಥೆನಾಲ್‌ ಅಥವಾ ಮೆಥೆನಾಲ್‌ ಮಿಶ್ರಣ ಮಾಡಿ ಬಳಸಲಾಗುತ್ತದೆ. ವಾಹನದ ಇಂಧನ ಟ್ಯಾಂಕ್‌ನಲ್ಲಿ ಎರಡೂ ಇಂಧನವನ್ನು ಮಿಶ್ರಣ ಮಾಡಿ ತುಂಬಲಾಗುತ್ತದೆ. ಪ್ರತ್ಯೇಕ ಟ್ಯಾಂಕ್‌ ಇರುವುದಿಲ್ಲ. ಫ್ಲೆಕ್ಸ್‌-ಫä್ಯಯೆಲ್‌ ವಾಹನಗಳು ಬೈ-ಫ್ಯುಯೆಲ್‌ ವಾಹನಕ್ಕಿಂತ ಭಿನ್ನ. ಬೈ-ಫ್ಯುಯೆಲ್‌ ವಾಹನದಲ್ಲಿ ಎರಡು ಇಂಧನಗಳನ್ನು ಪ್ರತ್ಯೇಕ ಟ್ಯಾಂಕ್‌ನಲ್ಲಿ ತುಂಬಲಾಗುತ್ತದೆ.

ಪೆಟ್ರೋಲ್‌ಗಿಂತ ಸೋವಿ

ಗಡ್ಕರಿ ಹೇಳಿದ ಫ್ಲೆಕ್ಸ್‌-ಎಂಜಿನ್‌ಗಳು ಪೆಟ್ರೋಲ್‌ ಹಾಗೂ ಎಥೆನಾಲ್‌ ಬಳಸಿ ಕೆಲಸ ಮಾಡುವ ಎಂಜಿನ್‌ಗಳಾಗಿವೆ. ಪಾಶ್ಚಾತ್ಯ ದೇಶಗಳಲ್ಲಿರುವ ಫ್ಲೆಕ್ಸ್‌-ಎಂಜಿನ್‌ಗಳಿಗೆ ಶೇ.85ರಷ್ಟುಎಥೆನಾಲ್‌ ಹಾಗೂ ಶೇ.15ರಷ್ಟುಪೆಟ್ರೋಲ್‌ ಮಿಶ್ರಣ ಮಾಡಿ ಬಳಸಲಾಗುತ್ತದೆ. ಭಾರತದಲ್ಲಿ ಪೆಟ್ರೋಲ್‌ ಬೆಲೆ 105 ರು. ಹಾಗೂ ಎಥೆನಾಲ್‌ ಬೆಲೆ 65 ರು. ಇರುವುದರಿಂದ ಫ್ಲೆಕ್ಸ್‌ ಇಂಧನದ ಕಾರು ಬಂದರೆ ಜನರಿಗೆ ಬಹಳ ಉಳಿತಾಯವಾಗುತ್ತದೆ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಎಕ್ಸ್‌ಪ್ರೆಸ್‌ವೇ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಿಸುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ‘ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಿಸುವವನಿದ್ದೇನೆ. ಅದರ ಎರಡೂ ಪಕ್ಕದಲ್ಲಿ ನೀವು ಭೂಸ್ವಾಧೀನ ಮಾಡಿಕೊಂಡು ಹೊಸ ಪುಣೆ ನಗರವನ್ನು ನಿರ್ಮಿಸಿ. ಅದಕ್ಕೆ ಮೆಟ್ರೋ ರೈಲು ಮತ್ತು ಇತರ ರೈಲುಗಳ ಸಂಪರ್ಕ ಕಲ್ಪಿಸಿ. ಪುಣೆ ನಗರ ಬಹಳ ಕಿಕ್ಕಿರಿದಿದೆ. ಟ್ರಾಫಿಕ್‌ ಹಾಗೂ ಮಾಲಿನ್ಯ ಸಮಸ್ಯೆ ಮಿತಿಮೀರಿದೆ. ಹೀಗಾಗಿ ನಗರ ವಿಕೇಂದ್ರೀಕರಣ ಮಾಡಬೇಕು’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ಗಡ್ಕರಿ ಹೇಳಿದ್ದಾರೆ.

click me!