ಗೇರ್ ಕಾರುಗಳನ್ನ ಚಲಾಯಿಸುವಾಗ ಸಾಮಾನ್ಯವಾಗಿ ಈ 5 ತಪ್ಪುಗಳು ಘಟಿಸುತ್ತದೆ. ಗೊತ್ತು ಗೊತ್ತಿಲ್ಲದೇ ಮಾಡುವ ಈ ತಪ್ಪುಗಳು ಕಾರಿನ ಎಂಜಿನ್ ಮೇಲೆ ಪರಿಣಾಮ ಬೀರಲಿದೆ. ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಕಾರು ಡ್ರೈವಿಂಗ್ ವೇಳೆ ಮಾಡು 5 ತಪ್ಪುಗಳ ಮಾಹಿತಿ ಇಲ್ಲಿದೆ.
ಬೆಂಗಳೂರು(ನ.05): ಕಾರು ಡ್ರೈವಿಂಗ್‌ನಲ್ಲಿ ಕೆಲ ತಪ್ಪುಗಳು ಎಂಜಿನ್ ಮೇಲೆ ಭಾರಿ ಪರಿಣಾಮ ಬೀರಲಿದೆ. ಅದರಲ್ಲೂ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಕಾರುಗಳನ್ನ ಡ್ರೈವ್ ಮಾಡೋ ವೇಳೆ ಬಹುತೇಕರು ಈ 5 ತಪ್ಪುಗಳನ್ನ ಮಾಡುತ್ತಾರೆ. ಇದರಿಂದ ನಿಮ್ಮ ಕಾರಿನ ಬಾಳಿಕೆ ಕಡಿಮೆಯಾಗಲಿದೆ.
1 ಸರಿಯಾಗಿ ಕ್ಲಚ್ ಬಳಸದಿರುವುದು:
ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಕಾರಿನಲ್ಲಿ ಕ್ಲಚ್ ಪಾತ್ರ ಮುಖ್ಯ. ಗೇರ್ ಬದಲಾಯಿಸುವ ವೇಳೆ ಬಹುತೇಕರು ಸರಿಯಾಗಿ ಕ್ಲಬ್ ಬಳಕೆ ಮಾಡದಿರುವುದು ಎಲ್ಲಾ ಸಮಸ್ಯೆಗೆ ಕಾರಣವಾಗಲಿದೆ. ಆರಂಭಿಕ 2 ಗೇರ್ ಹಾಕಲು ಸರಿಯಾಗಿ ಕ್ಲಚ್ ಬಳಕೆ ಮಾಡುತ್ತಾರೆ. ಆದೆರೆ ಟಾಪ್ ಗೇರ್ ಹಾಕುವಾಗ ಕ್ಲಚ್ ಬಳಕೆ ಪೂರ್ಣ ಪ್ರಮಾಣ ಮಾಡುವುದಿಲ್ಲ. ಪ್ರತಿ ಬಾರಿ ಗೇರ್ ಹಾಕುವಾಗ ಪೂರ್ಣ ಪ್ರಮಾಣದಲ್ಲಿ ಕ್ಲಚ್ ಬಳಕೆ ಮಾಡಬೇಕು.
undefined
2 ಡೆಡ್ ಪೆಡಲ್ ಆಗಿ ಕ್ಲಚ್ ಬಳಕೆ:
ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಕಾರಿನಲ್ಲಿ ಡೆಡ್ ಪೆಡಲ್ ಇರವುದಿಲ್ಲ. ಹೀಗಾಗಿ ಹೆಚ್ಚಿನವರು ಕ್ಲಚ್ ಮೇಲೆ ಕಾಲಿಟ್ಟು(ಡೆಡ್ ಪೆಡಲ್ ಆಗಿ ಬಳಕೆ) ಡ್ರೈವ್ ಮಾಡುತ್ತಾರೆ. ಇದು ಕೂಡ ಅಪಾಯಕಾರಿ. ಕೆಲ ಡೀಸೆಲ್ ಎಂಜಿನ್ ಕಾರಿನ ಕ್ಲಚ್ ಹಾರ್ಡ್ ಇರುತ್ತೆ. ಇಂತಹ ಕಾರಿನಲ್ಲಿ ಕ್ಲಚ್ ಮೇಲೆ ಕಾಲಿಟ್ಟರೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಕಾರಿನಲ್ಲಿ ಗೇರ್ ಹಾಕುವಾಗ ಮಾತ್ರ ಸಂಪೂರ್ಣ ಕ್ಲಚ್ ಬಳಕೆ ಮಾಡಿ, ಬಳಿಕ ಕಾಲನ್ನ ತೆಗೆಯಬೇಕು. ಕ್ಲಚ್ ಮೇಲೆ ಕಾಲಿನ ವಿಶ್ರಾಂತಿ ತಪ್ಪು.
3 ಗೇರ್ ಲಿವರ್ ಮೇಲೆ ಕೈ ಇಡುವುದು:
ಗೇರ್ ಹಾಕಿದ ಬಳಿಕವೂ ಗೇರ್ ಲಿವರ್ ಮೇಲೆ ಕೈಗಳನ್ನಿಡುವುದು ಕೂಡ ತಪ್ಪು. ಯಾಕೆಂದರೆ ಗೇರ್ ಲಿವರ್ ಕೆಳಗೆ ಸ್ಪ್ರಿಂಗ್ ಹಾಗೂ ಬೇರಿಂಗ್ಸ್ ಮೂಲಕ ಗೇರ್‌ಬಾಕ್ಸ್‌ಗೆ ಜೋಡಣೆ ಮಾಡಲಾಗಿದೆ. ಗೇರ್ ಲಿವರ್ ಮೇಲೆ ಕೈಗಳನ್ನಿಡುವುದರಿಂದ ಸ್ಪ್ರಿಂಗ್ ಆಕ್ಷನ್ ಹಾಗೂ ಬೇರಿಂಗ್ ಸಮಸ್ಯೆ ಎದುರಾಗಲಿದೆ. ಇಷ್ಟೇ ಅಲ್ಲ, ಕ್ರಮೇಣ ಗೇರ್ ಹಾಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ.
4 ಚಲಿಸುವತ್ತಿರುವಾಗ ರಿವರ್ಸ್ ಗೇರ್ ಹಾಕುವುದು:
ಗೇರ್ ಬದಲಾಯಿಸುವು ವೇಳೆ, ಅಥವಾ ಚಲಿಸುತ್ತಿರುವಾಗ ತಪ್ಪಿ ರಿವರ್ಸ್ ಗೇರ್ ಅಪ್ಲೈ ಮಾಡುವುದು ತುಂಬಾ ಅಪಾಯಕಾರಿ. ಇದರಿಂದ ಗೇರ್ ಬಾಕ್ಸ್ ಹಾಳಾಗಲಿದೆ. ಜೊತೆಗೆ ಎಂಜಿನ್ ಮೇಲೆ ಹೊಡೆತ ಬೀಳಲಿದೆ.
5 ಲೋ RPMನಲ್ಲಿ ಹೈಯರ್ ಗೇರ್ ಬಳಕೆ:
ಟಾಪ್ ಗೇರ್‌ನಲ್ಲಿ ಪ್ರಯಾಣ ಮಾಡುತ್ತಿದ್ದಂತೆ ಮೈಲೇಜ್ ಹೆಚ್ಚು ಸಿಗಲಿದೆ. ಹಲವು ಬಾರಿ ಕಾರು ಕಡಿಮೆ ವೇಗ(ಲೋವರ್ ಆರ್‌ಪಿಎಂ)ನಲ್ಲಿದ್ದರೂ ಗೇರ್ ಬದಲಾಯಿಸುವುದಿಲ್ಲ. ಟಾಪ್ ಗೇರ್‌ನಲ್ಲೇ ಪ್ರಯಾಣ ಮಾಡುತ್ತಾರೆ. ಗೇರ್ ಬದಲಾಯಿಸದೇ ಕಾರು ಚಲಾಯಿಸುತ್ತಾರೆ. ಇದು ಕೂಡ ಎಂಜಿನ್ ಹಾಗೂ ಟ್ರಾನ್ಸ್‌ಮಿಶನ್‌ನಲ್ಲಿ ಸಮಸ್ಯೆಗೆ ಕಾರಣವಾಗಲಿದೆ.