Khelo India Theme ನಲ್ಲಿ ಸಾಯಿ ಬಾಬಾಗೆ ವಿಶೇಷ ಅಲಂಕಾರ, ಮಕ್ಕಳಿಗೆ ಆಟಿಕೆ ಹಂಚಿಕೆ

By Ravi JanekalFirst Published Sep 19, 2022, 9:34 AM IST
Highlights

ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನ ಟ್ರಸ್ಟ್ ಖೇಲೋ ಇಂಡಿಯಾ ಥೀಮ್‌ನ ಆಲಂಕಾರವನ್ನು ಮಾಡಿದ್ದು, ಸಾಯಿ ಬಾಬಾ ದೇವರಿಗೆ ಲಕ್ಷ ಆಟಿಕೆಗಳಿಂದ ವಿಶೇಷ ಆಲಂಕೃತ ಮಾಡಿ, ಎಲ್ಲ ಆಟಿಕೆಗಳನ್ನು ಪ್ರಸಾದದ ರೂಪದಲ್ಲಿ ಮಕ್ಕಳಿಗೆ ಹಂಚಲಾಯಿತು.

ಬೆಂಗಳೂರು (ಸೆ.19) : ಜೆಪಿನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಗುರುಪೂರ್ಣಿಮೆಯಂದು ಶಿರಡಿ ಸಾಯಿಬಾಬಾ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿದ ಲಕ್ಷ ಆಟಿಕೆಗಳನ್ನು ಪ್ರಧಾನಿ ಮೋದಿ 72ನೇ ಜನ್ಮದಿನದ ಪ್ರಯುಕ್ತ 50 ಸರಕಾರಿ ಶಾಲೆಗಳು, ಖಾಸಗಿ ಶಾಲೆ, ಎನ್ ಜಿಒಂ,ಆರ್ ಡಬ್ಲ್ಯು ಎಸ್, ಅಸೋಸಿಯೇಷನ್ಸ್ ಗಳಿಗೆ ಉಚಿತವಾಗಿ ವಿತರಿಸಲಾಗಿದ.

Khelo India: ಇಂದಿನಿಂದ ಖೇಲೋ ಇಂಡಿಯಾ ಗೇಮ್ಸ್‌ ಶುರು

Latest Videos

ಗುರುಪೂರ್ಣಿಮೆ(Guru purnime)ಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನ(Shri satyaganapati shiradi Saibaba Temple) ಟ್ರಸ್ಟ್ ಖೇಲೋ ಇಂಡಿಯಾ ಥೀಮ್‌ನ(Khelo India Theme) ಆಲಂಕಾರವನ್ನು ಮಾಡಿದ್ದು, ಸಾಯಿ ಬಾಬಾ ದೇವರಿಗೆ ಲಕ್ಷ ಆಟಿಕೆಗಳಿಂದ ವಿಶೇಷ ಆಲಂಕೃತ ಮಾಡಿದ್ದರು. ಮಕ್ಕಳು ಆಟ ಆಡುವಂತಹ ಸಾಮಗ್ರಿಗಳಾದ 50 ವಿವಿಧ ಸಾಮಗ್ರಿಗಳನ್ನು ಬಳಸಿ ವಿಶೇಷ ಆಲಂಕಾರವನ್ನು ಮಾಡಲಾಗಿದ್ದು . ಗೋಲಿ, ಬುಗರಿ, ಗಿಲ್ಲಿದಾಂಡು, ಕ್ಯಾಟರ್ ಪಿಲ್ಲರ್ ನಂತಹ ಸಾಂಪ್ರದಾಯಿಕ ಆಟದ ಸಾಮಗ್ರಿಗಳು, ಅಲ್ಲದೇ, ಕ್ರಿಕೆಟ್, ಟೆನ್ನೀಸ್, ಹಾಕಿ ಬ್ಯಾಟುಗಳು ಸೇರಿದಂತೆ ಹಲವಾರು ವಿಧಧ ಕ್ರೀಡಾ ಸಾಮಗ್ರಿಗಳನ್ನು ಇಲ್ಲಿ ಬಳಸಲಾಗಿದೆ. 

ಪ್ರಧಾನಿ  ಮೋದಿ(Narendra Modi) 72ನೇ ಜನ್ಮದಿನ(Birthday)ವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ದೇವರಿಗೆ ಅಲಂಕಾರ ಮಾಡಿದ ಈ ಆಟಿಕೆ ಸಾಮಗ್ರಿಗಳನ್ನು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ  ಟ್ರಸ್ಟಿಗಳಾದ ರಾಮ್ ಮೋಹನ ರಾಜ್(Ram Mohan Raj), ಶಾಸಕ ಸತೀಶ್ ರೆಡ್ಡಿ(MLA Satish Reddy), ರಮೇಶ್, ಮುನಿರಾಮು ಅವರು ಮಕ್ಕಳಿಗೆ ಉಚಿತವಾಗಿ ವಿತರಣೆ ಮಾಡಲಿದ್ದಾರೆ.

ಸೆಪ್ಟೆಂಬರ್ 17,2022: 'ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ದೇವರಿಗೆ ಯಾವುದೇ ಅಲಂಕಾರಗಳನ್ನು ಮಾಡಿದರೂ ಅದನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಸಾಯಿಬಾಬಾ ದೇವರಿಗೆ ಅಲಂಕಾರ ಮಾಡಿದ ಲಕ್ಷ ಆಟಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಶಾಲೆಗಳಿಗೆ ಹಂಚಿದ್ದೇವೆ. ಮಕ್ಕಳು ಮೊಬೈಲ್ ನೋಡುತ್ತಾ ಸಮಯ ಹಾಳು ಮಾಡುವ ಬದಲು ಹೊರಬಂದು ಹೆಚ್ಚು ಆಟವಾಡುವಂತಾಗಬೇಕು ಎಂಬ ಒಳ್ಳೆಯ ಉದ್ದೇಶವೂ ಇದರ ಹಿಂದಿದೆ,' 
- ಶಾಸಕ ಸತೀಶ್ ರೆಡ್ಡಿ 
 

ಜೆಪಿನಗರ(J.P.Nagar)ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ ಗುರುಪೂರ್ಣಿಮೆಯಂದು ಶಿರಡಿ ಸಾಯಿಬಾಬಾ ದೇವರಿಗೆ  ಖೇಲೋ ಇಂಡಿಯಾ ಥೀಮ್ ನಲ್ಲಿ ಅಲಂಕಾರ ಮಾಡಿದ್ದರು. ಮಕ್ಕಳು ಆಟ ಆಡುವಂತಹ 50 ಕ್ಕೂ ಹೆಚ್ಚಿನ ವಿವಿಧ ಸಾಮಗ್ರಿಗಳನ್ನು ಬಳಸಿ  ಆಲಂಕಾರವನ್ನು ಮಾಡಿದ್ದು ತುಂಬಾನೇ ವಿಶೇಷವಾಗಿತ್ತು. ಎಲ್ಲರ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಿದ ಲಕ್ಷ ಆಟಿಕೆಗಳನ್ನು ಪ್ರಧಾನಿ ಮೋದಿ 72ನೇ ಜನ್ಮದಿನದ ಪ್ರಯುಕ್ತ 50 ಸರಕಾರಿ ಶಾಲೆಗಳು, ಖಾಸಗಿ ಶಾಲೆ, ಎನ್ ಜಿಒಂ,ಆರ್ ಡಬ್ಲ್ಯು ಎಸ್, ಅಸೋಸಿಯೇಷನ್ಸ್ ಗಳಿಗೆ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ನ  ಟ್ರಸ್ಟಿಗಳಾದ ರಾಮ್ ಮೋಹನ ರಾಜ್, ಶಾಸಕ ಸತೀಶ್ ರೆಡ್ಡಿ, ರಮೇಶ್, ಮುನಿರಾಮು ಅವರು ಮಕ್ಕಳಿಗೆ ಉಚಿತವಾಗಿ ವಿತರಿಸಿದರು.

ಇನ್ನು ಈ ಸಂದರ್ಭದ ಕುರಿತು ಮಾತನಾಡಿದ ಸತೀಶ್ ರೆಡ್ಡಿ 'ಒಂದು ಲಕ್ಷ ಆಟದ ಸಾಮಾನುಗಳನ್ನು ಅಲಂಕಾರಕ್ಕಾಗಿ ಬಳಸಲಾಗಿದೆ. ಖೇಲೋ ಇಂಡಿಯಾಗೆ ಬೆಂಬಲ ನೀಡುವ ಪ್ರಯತ್ನವಿದು. ಇದನ್ನು ಮಕ್ಕಳಿಗೆ ವಿತರಿಸುವುದರಿಂದ ಅವರಲ್ಲಿ ಕ್ರೀಡಾ ಸ್ಪೂರ್ತಿ(Sports spirit) ತುಂಬಿದಂತಾಗುತ್ತದೆ ಎಂಬ ನಂಬಿಕೆ ನಮ್ಮದು. ನಮ್ಮಲ್ಲಿ ದೇವರಿಗೆ ಯಾವುದೇ ಅಲಂಕಾರಗಳನ್ನು ಮಾಡಿದರೂ ಅದನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಸಾಯಿಬಾಬಾ ದೇವರಿಗೆ ಅಲಂಕಾರ ಮಾಡಿದ ಲಕ್ಷ ಆಟಿಕೆಗಳನ್ನು ನರೇಂದ್ರ ಮೋದಿ(Narendra Modi) ಹುಟ್ಟುಹಬ್ಬದ ಪ್ರಯುಕ್ತ ಶಾಲೆಗಳಿಗೆ ಹಂಚಿದ್ದೇವೆ. ಮಕ್ಕಳು ಮೊಬೈಲ್(Mobile) ನೋಡುತ್ತಾ ಸಮಯ ಹಾಳು ಮಾಡುವ ಬದಲು ಹೊರಬಂದು ಹೆಚ್ಚು ಆಟವಾಡುವಂತಾಗಬೇಕು ಎಂಬ ಒಳ್ಳೆಯ ಉದ್ದೇಶವೂ ಇದರ ಹಿಂದಿದೆ ಶಾಲೆಯ ಶಿಕ್ಷಕರೂ ಮಕ್ಕಳನ್ನು ಹೆಚ್ಚು ಪ್ರೋತ್ಸಾಹಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

khelo india ಖೇಲೋ ಇಂಡಿಯಾಗೆ ಕರ್ನಾಟಕ ಭರ್ಜರಿ ತಯಾರಿ, ಅಗ್ರಸ್ಥಾನದ ಗುರಿ
 
ಆ ಬಳಿಕ ಮಾತನಾಡಿದ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ನ  ಟ್ರಸ್ಟಿಗಳಾದ ರಾಮ್ ಮೋಹನ ರಾಜ್, 'ಈ ದೇವಸ್ಥಾನದಲ್ಲಿ ಪ್ರತಿ ಬಾರಿ ಯಾವುದಾದರೊಂದು ಮುಖ್ಯವಾದ ಥೀಮ್(Theme) ಇಟ್ಟುಕೊಂಡು ಅಲಂಕಾರ ಮಾಡಲಾಗುತ್ತದೆ. ಇದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಒಂದು ಸಲ ಮಾಡಿದ ಹಾಗೇ ಇನ್ನೊಂದು ಬಾರಿ ಮಾಡುವುದಿಲ್ಲ. ಈ ಬಾರಿ ಅಲಂಕಾರಕ್ಕೆ ಆಟೋಟಕ್ಕೆ ಸಂಬಂಧಪಟ್ಟ ಸಾಮಗ್ರಿಗಳನ್ನು ಬಳಸಲಾಗಿದೆ. ಈ ಕ್ರೀಡಾ ಸಾಮಗ್ರಿಗಳನ್ನು 50ಕ್ಕೂ ಹೆಚ್ಚಿನ ಶಾಲೆಗಳಿಗೆ ಹಂಚಿದ್ದೇವೆ. ಇದರ ಹಿಂದಿರುವ ಶ್ರಮ ಜೀವಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಮಕ್ಕಳಿಗೆ ಸ್ಪೂರ್ತಿಯಾಗಲಿ. ಖೇಲೋ ಇಂಡಿಯಾದಂಥ ಅಭಿಯಾನಗಳಿಗೆ ದೇಶದ ಮತ್ತಷ್ಟು ಪ್ರತಿಭೆಗಳು ಜೊತೆಗೂಡುವಂತಾಗಲಿ,' ಎಂದು ಆಶಿಸಿದರು.

click me!