ರಾಜ್ಯ ಸರ್ಕಾರದ ಪರಿಸ್ಥಿತಿ ಎಟಿಎಂ ಥರ ಆಗಿದೆ. ಪ್ರಚಾರಕ್ಕಾಗಿ ಎಟಿಎಂ ಮಶೀನ ಯೂಸ್ ಮಾಡಿದ್ದಾರೆ. ಈಗ ಎಟಿಎಂನಲ್ಲಿನ ಹಣ ಖಾಲಿಯಾಗಿದೆ. ಇವರ ಬೊಕ್ಕಸದಲ್ಲಿ ಹಣವೇ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು.
ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಭೇಟಿಗೂ ಮುನ್ನ ಸಂಭವಿಸಿದ್ದ, 58 ಮಂದಿ ಸಾವಿಗೆ ಕಾರಣವಾಗಿದ್ದ 1998ರ ಕೊಯಮತ್ತೂರು ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಉಗ್ರ ಸಾದಿಕ್ ಅಲಿಯಾಸ್ ಟೈಲರ್ ರಾಜಾನನ್ನು ಕರ್ನಾಟಕದ ವಿಜಯಪುರದಲ್ಲಿ ತಮಿಳುನಾಡು ಉಗ್ರ ನಿಗ್ರಹ ಪಡೆ (ಎಟಿಎಸ್) ಬಂಧಿಸುವಲ್ಲಿ ಯಶಸ್ವಿಯಾಗಿದೆ.
12ನೇ ಶತಮಾನದಲ್ಲಿ ಬಸವಣ್ಣ ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳನ್ನ ರಚಿಸಿದ್ದರು. ಅಂತಹ ವಚನಗಳನ್ನ ವಿಜಯಪುರ ವಿಭಾಗದ ಡಿವೈಎಸ್ಪಿ ಬಸವರಾಜ್ ಯಲಿಗಾರ್ ಇಂಗ್ಲಿಷ್ಗೆ ಭಾಷಾಂತರ ಮಾಡಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ ದೆಹಲಿಗೆ ಹೋಗಿ ಕುಳಿತುಕೊಂಡಿದ್ದರು. ದಸರಾ ಒಳಗೆ ತಮ್ಮ ಕುರ್ಚಿ ಬದಲಾಗುತ್ತದೆ ಎಂದು ತಮ್ಮ ಬಗ್ಗೆ ಹೇಳಿರಬೇಕು. ತಮ್ಮ ಕುರ್ಚಿ ಬಿಟ್ಟಿದ್ದಾರೆ, ಅವರದ್ದೇ ನೆಲೆ ಇಲ್ಲ. ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಟಾಂಗ್ ಕೊಟ್ಟರು.
ನಮ್ಮಲ್ಲಿ ಕ್ರಾಂತಿಗಳು ಎಲ್ಲಾ ನಡೆಯಲ್ಲ, ಕಾಂಗ್ರೆಸ್ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗವಹಿಸಿದೆ. ಪಕ್ಷದಲ್ಲಿ ಏನೇ ಇದ್ರೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಮಕ್ಕಳ ನೆಚ್ಚಿನ ಶಿಕ್ಷಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬೆಳಗ್ಗೆ ಶಾಲೆಗೆ ತರಳುತ್ತಿದ್ದ ವೇಳೆ ಅಫಘಾತ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮಕ್ಕಳು ಕಣ್ಣೀರಿಟ್ಟಿದ್ದಾರೆ.
ಆಲಮಟ್ಟಿ ಜಲಾಶಯ ನಿರ್ಮಾಣದ ಆಯುಷ್ಯ ಎಷ್ಟು ? ಗೊತ್ತಿದೆಯಾ ಅದೊಂದು ಕಾಂಕ್ರಿಟ್ ಡ್ಯಾಮ್. ಅದರಲ್ಲೂ ತಗ್ಗು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ರೈತರು ಅದರ ಲಾಭ ಪಡೆಯುವುದು ಯಾವಾಗ ? ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪ್ರಶ್ನಿಸಿದರು.
ಎನ್ಟಿಪಿಸಿ ವಿದ್ಯುತ್ ಘಟಕ ಸ್ಥಾಪನೆಗೆ ಸಾವಿರಾರು ಎಕರೆ ಜಮೀನು ಕಳೆದುಕೊಂಡಿರುವ ಸಂತ್ರಸ್ತರ ಮಕ್ಕಳಿಗೆ ಇಲ್ಲಿ ಡಿ ದರ್ಜೆಯ ಶೇ.50 ರಷ್ಟು ಹುದ್ದೆ ಮೀಸಲಿಡಿ ಎಂದು ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.