ವಿಜಯಪುರ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಹತ್ಯೆ: ವಕೀಲ ರವಿ ಸಹೋದರನ ಕೈವಾಡ?

ವಿಜಯಪುರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಕೀಲ ರವಿ ಅಗರ್‌ಖೇಡ್‌ನನ್ನು ಬಾಗಪ್ಪ ಗ್ಯಾಂಗ್ ಕೊಲೆ ಮಾಡಿದ್ದಕ್ಕೆ ಪ್ರತೀಕಾರವಾಗಿ ರವಿಯ ಸಹೋದರ ಪಿಂಟ್ಯಾ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Sathish Kumar KH  | Updated: Feb 12, 2025, 8:32 PM IST

ವಿಜಯಪುರ (ಫೆ.12): ಬಾಗಪ್ಪ ಹರಿಜನ ಹತ್ಯೆಯ ಹಿಂದೆ ವಕೀಲ ರವಿ ಅವರ ಸಹೋದರ ಪಿಂಟ್ಯಾ ಕೈವಾಡವಿದೆಯೇ ಎಂಬುದು ಭಾರೀ ಅನುಮಾನ ವ್ಯಕ್ತವಾಗಿದೆ. ಬಾಗಪ್ಪ ಹರಿಜನ ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ವಕೀಲ ರವಿ ಅಗರ್‌ಖೇಡ್‌ನನ್ನು ಬಾಗಪ್ಪ ಗ್ಯಾಂಗ್ ಕೊಲೆ ಮಾಡಿತ್ತು ಎಂದು ಹೇಳಲಾಗುತ್ತಿದೆ. ಇದೇ ಸೇಡನ್ನು ತೀರಿಸಿಕೊಳ್ಳಲು ವಕೀಲ ರವಿಯ ಸಹೋದರ ಪಿಂಟ್ಯಾ ಅಗರ್ಖೇಡ್ ಕೊಲೆ ಮಾಡಿರಬಹುದು ಎಂದು ಬಾಗಪ್ಪ ಹರಿಜನ್ ಅವರ ಕುಟುಂಬಸ್ಥರು ದೂರು ಕೊಟ್ಟಿದ್ದಾರೆ. ಇದೀಗ ಪಿಂಟ್ಯಾನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. 

ವಿಜಯಪುರ ನಗರದ ರೇಡಿಯೋ ಕೇಂದ್ರ ಬಳಿ ನಿನ್ನೆ ರಾತ್ರಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ. ಚಂದಪ್ಪ ಹರಿಜನ್ ಶಿಷ್ಯ ಬಾಗಪ್ಪ ಹರಿಜನ್ ಆಗಿದ್ದನು. ಕಲಬುರ್ಗಿ, ವಿಜಯಪುರದ ಭೀಮಾತೀರದಲ್ಲಿ ಹಾವಳಿ ಇಟ್ಟಿದ್ದ ಬಾಗಪ್ಪ. ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪನ ಮೇಲೆ ಪೈರಿಂಗ್ ನಡೆದಿತ್ತು. 2018ರ ಆ.8ರಂದು ಬಾಗಪ್ಪ ಹರಿಜನ್ ಮೇಲೆ ಪೈರಿಂಗ್ ನಡೆದಿತ್ತು. ಪೀರಪ್ಪ ಹಡಪದ್ ನಿಂದ ಪೈರಿಂಗ್ ನಡೆದಿತ್ತು. ಚಂದಪ್ಪ ಹರಿಜನ್ ಅಣ್ಣ ಯಲ್ಲಪ್ಪನ ಮಕ್ಕಳು ಸುಪಾರಿ ನೀಡಿದ್ದರು. ಯಲ್ಲಪ್ಪನ ಮಗ ಭೀಮು ಹರಿಜನ್ ಪ್ರಮುಖ ಆರೋಪಿಯಾಗಿದ್ದನು. ಬಾಗಪ್ಪ ಹರಿಜನ್ ಹಾಗೂ ಚಂದಪ್ಪ ಹರಿಜನ್ ಸಹೋದರ ಯಲ್ಲಪ್ಪನ ಮಕ್ಕಳಿಗೂ ವೈರತ್ವ ಇತ್ತು. 

ಬಾಗಪ್ಪ ಹರಿಜನ್‌ನನ್ನು ನಾಲ್ಕೈದು ಜನರಿಂದ ಹತ್ಯೆ ಮಾಡಿರುವ ಶಂಕೆಯಿದೆ. ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಹತ್ಯೆಗೈಯಲಾಗಿದೆ. ಆಟೋದಲ್ಲಿ ನಾಲ್ಕೈದು ಜನರು ಬಂದಿದ್ದಾರೆ. ಮನೆ ಎದುರು ಬಾಗಪ್ಪ ವಾಕಿಂಗ್ ಮಾಡ್ತಿದ್ದ ವೇಳೆ ಹತ್ಯೆಯಾಗಿದೆ. ಊಟ ಮಾಡಿಕೊಂಡು ಮನೆ ಎದುರು ಅಡ್ಡಾಡುತ್ತಿದ್ದನು. ಮಾರಕಾಸ್ತ್ರ ಹಾಗೂ ಬಂದೂನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಎಷ್ಟು ಜನರು ಬಂದಿದ್ದರು ನಿಖರ ಮಾಹಿತಿ ಸಿಕ್ಕಿಲ್ಲ. ಕರೆಂಟ್ ಕಟ್ ಮಾಡಿ ಹತ್ಯೆ ಮಾಡಿದ್ದ ಬಗ್ಗೆ ಮಾಹಿತಿ ಇಲ್ಲ. ಸಂಬಂಧಿಕರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಬಾಗಪ್ಪ ಮೇಲೆ 10 ಕೇಸ್‌ಗಳಿವೆ. ಈ ಪೈಕಿ 6 ಮರ್ಡರ್ ಕೇಸ್ ಇವೆ. 1993ರಿಂದ ಬಾಗಪ್ಪನ ಕ್ರಿಮಿನಲ್ ಹಿಸ್ಟರಿ ಶುರುವಾಗಿದೆ. 2016-17ರಲ್ಲಿ ಬಾಗಪ್ಪನ ಮೇಲೆ ಸೆಕ್ಯೂರಿಟಿ ಕೇಸ್ ಹಾಕಲಾಗಿತ್ತು. ಎಲ್ಲ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ಸಿಬ್ಬಂದಿ ಹಲವು ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

Read More...