ಚಿತ್ರದುರ್ಗ: ಚಳ್ಳಕೆರೆಯಲ್ಲಿ ನಿಧಿ ಆಸೆಗೆ ನರಬಲಿ ಕೊಟ್ಟವನ ಸೆರೆ!
ಜೆ.ಜೆ ಹಳ್ಳಿ ಗ್ರಾಮದ ಪ್ರಭಾಕರ್ ಹತ್ಯೆಗೊಳಗಾದ ವ್ಯಕ್ತಿ. ಆಂಧ್ರ ಪ್ರದೇಶ ಕಲ್ಯಾಣ ದುರ್ಗ ತಾಲೂಕಿನ ಕುಂದಾರ್ಪಿ ಬಾರ್‌ನಲ್ಲಿ ಅಡುಗೆ ಭಟ್ಟನಾಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ ರೆಡ್ಡಿ ಕೊಲೆ ಆರೋಪಿ.

ಚಿತ್ರದುರ್ಗ(ಫೆ.12): ನಿಧಿ ಆಸೆಗಾಗಿ ಚಪ್ಪಲಿ ಹೊಲಿಯುವ ವ್ಯಕಿಯೋರ್ವನನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೆ.ಜೆ ಕಾಲೋನಿ ಬಳಿ ನಡೆದಿದ್ದು, ಆರೋಪಿ ಹಾಗೂ ಜ್ಯೋತಿಷಿಯನ್ನು ಬಂಧಿಸಲಾಗಿದೆ.
ಜೆ.ಜೆ ಹಳ್ಳಿ ಗ್ರಾಮದ ಪ್ರಭಾಕರ್ (52) ಹತ್ಯೆಗೊಳಗಾದ ವ್ಯಕ್ತಿ. ಆಂಧ್ರ ಪ್ರದೇಶ ಕಲ್ಯಾಣ ದುರ್ಗ ತಾಲೂಕಿನ ಕುಂದಾರ್ಪಿ ಬಾರ್‌ನಲ್ಲಿ ಅಡುಗೆ ಭಟ್ಟನಾಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ ರೆಡ್ಡಿ ಕೊಲೆ ಆರೋಪಿ.
ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ; ಭೀಕರ ದಾಳಿಗೆ ಬಾಗಪ್ಪ ಹರಿಜನ್ ಛಿದ್ರ ಛಿದ್ರ!
ಏನಿದು ಘಟನೆ?:
ಪಾವಗಡದ ಜ್ಯೋತಿಷಿ ರಾಮಕೃಷ್ಣ ಎಂಬುವರು ಆರೋಪಿ ಆನಂದ ರೆಡ್ಡಿಗೆ ನಿಧಿ ಆಸೆ ತೋರಿಸಿ ಪಶ್ಚಿಮ ದಿಕ್ಕಿನಲ್ಲಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂದು ಹೇಳಿದ್ದರು. ಅದರಂತೆ ಆಂಧ್ರದಿಂದ ಕರ್ನಾಟಕಕ್ಕೆ ಬಂದಿದ್ದ ಆರೋಪಿ ಆನಂದ ರೆಡ್ಡಿ ಜೆ.ಜೆ.ಕಾಲೋನಿಗೆ ತೆರಳಿ ಚಪ್ಪಲಿ ಹೊಲಿಯುವ ವ್ಯಕ್ತಿ ಪ್ರಭಾಕರ್‌ಗೆ ಲಿಫ್ಟ್ ಕೊಡುವುದಾಗಿ ಹೇಳಿ ಬೈಕ್‌ನಲ್ಲಿ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿ ಆಗಿದ್ದರು.
ಈ ಬಗ್ಗೆ ತನಿಖೆಗಿಳಿದ ಪೊಲೀಸರು ಆರೋಪಿಯ ಬೈಕ್ ಮಾಹಿತಿ ಆಧರಿಸಿ ಪತ್ತೆ ಹಚ್ಚಿ ಆರೋಪಿಯಿಂದ ಮಚ್ಚು, ಬಟ್ಟೆ ವಶಪಡಿಸಿಕೊಂಡಿದ್ದಾರೆ. ನಿಧಿ ಆಸೆ ತೋರಿಸಿದ ಜೋತಿಷಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪರಶುರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.