ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ; ಭೀಕರ ದಾಳಿಗೆ ಬಾಗಪ್ಪ ಹರಿಜನ್ ಛಿದ್ರ ಛಿದ್ರ!
ಭೀಮಾತೀರದ ಹಂತಕ ನಟೋರಿ ಬಾಗಪ್ಪ ಹರಿಜನ್‌ನನ್ನು ದುಷ್ಕರ್ಮಿಗಳ ಗುಂಪೊಂದು ಬರ್ಬರವಾಗಿ ಕೊಚ್ಚಿ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ರೇಡಿಯೋ ಕೇಂದ್ರದ ಬಳಿ ನಡೆದಿದೆ.

ವಿಜಯಪುರ (ಫೆ.12): ಭೀಮಾತೀರದ ಹಂತಕ ನಟೋರಿ ಬಾಗಪ್ಪ ಹರಿಜನ್‌ನನ್ನು ದುಷ್ಕರ್ಮಿಗಳ ಗುಂಪೊಂದು ಬರ್ಬರವಾಗಿ ಕೊಚ್ಚಿ ಹಾಕಿದ ಘಟನೆ ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ನಡೆದಿದೆ. ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದ 20ಕ್ಕೂ ಹೆಚ್ಚು ದುಷ್ಕರ್ಮಿಗಳು ಮುಖ, ತಲೆ ಮಾರ್ಮಾಂಗ ಸೇರಿದಂತೆ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ.
ಭೀಮಾತೀರದ ನಟೋರಿಯಸ್ ಹಂತಕ ಚಂದಪ್ಪನ ಶಿಷ್ಯನಾಗಿದ್ದ ಬಾಗಪ್ಪ ಹರಿಜನ್, ವಿಜಯಪುರ ಭೀಮಾತೀರ, ಕಲಬುರಗಿ ಸೇರಿದಂತೆ ಸುತ್ತಲು ಹಾವಳಿ ಇಟ್ಟಿದ್ದ ಬಾಗಪ್ಪ. ಕಳೆದ ಆಗಸ್ಟ್ 8, 2018ರಲ್ಲೇ ಕೋರ್ಟ್ ಆವರಣದಲ್ಲಿ ಪೀರಪ್ಪ ಹಡಪದ್ ಎಂಬುವವನಿಂದ ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ನಡೆದಿತ್ತು. ಆಗ ಸ್ವಲ್ಪದರಲ್ಲೇ ಬಚಾವ್ ಆಗಿದ್ದ. ಚಂದಪ್ಪ ಹರಿಜನ್ ಅಣ್ಣ ಯಲ್ಲಪ್ಪನ ಮಕ್ಕಳು ಸುಪಾರಿ ನೀಡಿದ್ದರು. ಹೀಗಾಗಿ ಈ ಹತ್ಯೆ ಪ್ರಕರಣದ ಹಿಂದೆ ಯಲ್ಲಪ್ಪ ಹರಿಜನ್ ಕೈವಾಡವಿದೆ ಎಂಬ ಮಾತುಗಳು ಕೂಡಾ ಕೇಳಿ ಬಂದಿವೆ. ಯಲ್ಲಪ್ಪ ಹರಿಜನ್ ಭೀಮಾ ತೀರದ ಅತ್ಯಂತ ನೊಟೋರಿಯಸ್ ಹಂತಕ ಚಂದಪ್ಪ ಹರಿಜನ್ ಅಣ್ಣನಾಗಿದ್ದಾನೆ.
ಸದ್ಯ ಘಟನೆ ಸ್ಥಳಕ್ಕೆ ಡಾಗ್ ಸ್ಕ್ವಾಡ್, ವಿಧಿ ವಿಜ್ಞಾನ ವಿಭಾಗದ ತಜ್ಞರ ಭೇಟಿ ನೀಡಿದ್ದಾರೆ. ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ್ ಮಾರಿಹಾಳ, ಎಎಸ್ಪಿ ರಾಮನಗೌಡ ಹಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ಹಂತಕ ಬಾಗಪ್ಪನ ಎಡಗೈ ಹಾಗೂ ಮರ್ಮಾಂಗ ಕತ್ತರಿಸುವ ದುಷ್ಕರ್ಮಿಗಳು.
ಇದನ್ನೂ ಓದಿ: ವಿಜಯಪುರ ಮುಸುಕುಧಾರಿ ರಾಬರಿ ಗ್ಯಾಂಗ್ ಬಂಧನ; ಸಂತೋಷ ಕನ್ನೂರ್ ಹತ್ಯೆ ಆರೋಪಿಯೂ ಅರೆಸ್ಟ್!
ಯಾರು ಈ ಬಾಗಪ್ಪ ಹರಿಜನ್?
ಭೀಮಾತೀರದ ಅತ್ಯಂತ ನೊಟೋರಿಯಸ್, ಉತ್ತರ ಕರ್ನಾಟಕದ ವೀರಪ್ಪನ್ ಎಂದೇ ಕರೆಯಲಾಗುವ ಹಂತಕ ಚಂದಪ್ಪ ಹರಿಜನ್ ಅಳಿಯ ಹಾಗೂ ಪಟ್ಟದ ಶಿಷ್ಯ ಈ ಬಾಗಪ್ಪ ಹರಿಜನ್. ಚಂದಪ್ಪ ಹರಿಜನ್ ಹೆಚ್ಚು ಕಡಿಮೆ 55 ಕೊಲೆ ಕೇಸ್'ಗಳ ಆರೋಪಿ. ಬಾಗಪ್ಪ ಚಿಕ್ಕ ವಯಸ್ಸಿನಲ್ಲೇ ಚಂದಪ್ಪನ ಗ್ಯಾಂಗ್ ಸೇರಿದ್ದ ಆತನೊಂದಿಗೇ ಓಡಾಡಿಕೊಂಡಿದ್ದ.
ಆದರೆ ಚಂದಪ್ಪ ಹರಿಜನ್ ಎನ್'ಕೌಂಟರ್ ಬಳಿಕ, ಚಂದಪ್ಪನ 13 ಗನ್'ಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಅಣ್ಣ ಯಲ್ಲಪ್ಪ ಹಾಗೂ ಅಳಿಯ ಬಾಗಪ್ಪರ ನಡುವೆ ದ್ವೇಷ ಬೆಳೆಯಿತು. ಅಲ್ಲದೇ ಕಲಬುರ್ಗಿಯ ಜಮೀನು ವಿಚಾರದಲ್ಲೂ ಇಬ್ಬರ ನಡುವೆ ವೈಮನಸ್ಸು ಬೆಳೆಯಿತು. ಇಲ್ಲಿಂದಲೇ ತಾನೇ ಚಂದಪ್ಪನ ಉತ್ತರಾಧಿಕಾರಿ ಎಂದು ಬಾಗಪ್ಪ ಹೇಳಿಕೊಳ್ಳಲಾರಂಭಿಸುತ್ತಾನೆ. ಇದರಿಂದಾಗಿ ಇಬ್ಬರೂ ಒಬ್ಬರನ್ನೊಬ್ಬರು ಹತ್ಯೆ ಮಾಡಲು ಯಲ್ಲಪ್ಪ ಯತ್ನಿಸುತ್ತಾರೆ.
ಈ ತಿಕ್ಕಾಟದಲ್ಲಿ ಬಾಗಪ್ಪನ ಇಬ್ಬರು ಅಳಿಯಂದಿರನ್ನು ಯಲ್ಲಪ್ಪ ಕೊಲೆ ಮಾಡುತ್ತಾನೆ ಈ ಆರೋಪದಡಿಯಲ್ಲಿ ಯಲ್ಲಪ್ಪ ಜೈಲು ಪಾಲಾಗುತ್ತಾನೆ. 2013ರಲ್ಲಿ ಚಂದಪ್ಪನ ತಮ್ಮನನ್ನು ಬಸವರಾಜ್'ನನ್ನು ಕೊಲೆಯಾಗುತ್ತೆ. ಈ ರೀತಿಯಾಗಿ ಇಬ್ಬರ ನಡುವೆಯೂ ದ್ವೇಷ ಬೆಳೆಯುತ್ತದೆ. ಹಿಂದೆ ಕೋರ್ಟ್ ಆವರಣದಲ್ಲಿ ಬಾಗಪ್ಪನ ಮೇಲೆ ಐದು ಸುತ್ತಿನ ಗುಂಡಿನ ದಾಳಿ ನಡೆಸಲಾಗುತ್ತೆ. ಆದ್ರೆ ಅಂದು ಸ್ವಲ್ಪದರಲ್ಲೇ ಬಚಾವ್ ಆಗ್ತಾನೆ ಬಾಗಪ್ಪ. ಗುಂಡಿನ ದಾಳಿಯಿಂದ ಗಾಯಗೊಂಡ ಜಬಾಗಪ್ಪನನ್ನು ಹತ್ತಿರದ ಆಸ್ಪತ್ರೆಗೆ ದಾಖಲಾಗಿದೆ. ಪ್ರಾಣಾಪಾಯದಿಂದ ಪಾರಾಗ್ತಾನೆ. ಆದರೆ ಇದೀಗ ಎರಡನೇ ಯತ್ನದಲ್ಲಿ ಬಾಗಪ್ಪನನ್ನು ಮುಗಿಸಿರುವ ಗ್ಯಾಂಗ್.

