ಮಕ್ಕಳ ಜೀವ ಪಣಕ್ಕಿಟ್ಟ ಪಾಲಕರು ! ಸ್ನೇಹಿತರನ್ನು ತುಂಬಿಕೊಂಡು ಮಹೀಂದ್ರಾ XUV700 ಓಡಿಸ್ತಿದ್ದಾನೆ ಬಾಲಕ

Synopsis
ಶಾಕಿಂಗ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಲಾ ಮಕ್ಕಳು ಕಾರ್ ಓಡಿಸುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಪಾಲಕರ ಕ್ರಮಕ್ಕೆ ಕಿಡಿಕಾರಿದ್ದಾರೆ.
ಶಾಲಾ ಮಕ್ಕಳು (school children) ಕಾರ್ ಓಡಿಸುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಗಿದೆ. ಮುಂಬೈ (Mumbai)ನ ಥಾಣೆ ರೋಡ್ ನಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಶಾಲಾ ಮಕ್ಕಳು ಜನನಿಬಿಡ ರಸ್ತೆಯಲ್ಲಿ ಮಹೀಂದ್ರಾ XUV700 ಚಾಲನೆ ಮಾಡ್ತಿದ್ದಾರೆ. ಕಾರು ಸಂಪೂರ್ಣವಾಗಿ ಮಕ್ಕಳಿಂದ ತುಂಬಿದೆ. ಕಾರಿನ ಹಿಂಬದಿ ಸೀಟು, ಚಾಲಕನ ಪಕ್ಕದ ಸೀಟು ಮಾತ್ರವಲ್ಲ, ಚಾಲಕನ ಸೀಟಿನಲ್ಲೂ ವಿದ್ಯಾರ್ಥಿಗಳೇ ಕುಳಿತಿದ್ದಾರೆ. ಆನ್‌ಲೈನ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ರಸ್ತೆ ಸುರಕ್ಷತೆ ಮತ್ತು ಪೋಷಕರ ಜವಾಬ್ದಾರಿ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಈ ವೀಡಿಯೊವನ್ನು Safecars_India Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಹೀಂದ್ರಾ XUV700 ಕಾರಿನಲ್ಲಿ 12 -13 ವರ್ಷದ ವಿದ್ಯಾರ್ಥಿಗಳಿದ್ದಾರೆ. ಕೆಲ ವಿದ್ಯಾರ್ಥಿಗಳು ಹಿಂದೆ ಕುಳಿತು ಕೇಕೆ ಹಾಕ್ತಿದ್ದರೆ, ಮುಂದೆ ಕುಳಿತ ವಿದ್ಯಾರ್ಥಿ ಟ್ರಾಫಿಕ್ ಮಧ್ಯೆ ಕಾರು ಚಲಾಯಿಸುತ್ತಿದ್ದಾನೆ. ಅನುಪ್ ಕೇಮ್ಕರ್ ಈ ವಿಡಿಯೋವನ್ನು ಹಂಚಿಕೊಂಡು, ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದಾರೆ. ಅನುಪ್ ಕೇಮ್ಕರ್, ನಾನು ಡ್ರೈವಿಂಗ್ ಮಾಡುವಾಗ 8 ಅಥವಾ 9 ನೇ ತರಗತಿಯ ಸುಮಾರು 12-13 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ನನ್ನ ಕಣ್ಣಿಗೆ ಬಿದ್ದರು. ಅವರು ಕಾರಿನಲ್ಲಿ ಇರುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದೇನೆ. ಕಾರು ಚಾಲನೆ ಮಾಡ್ತಿದ್ದ ಹುಡುಗ ಕೂಡ ಅದೇ ವಯಸ್ಸಿನವನು. ಕೆಲ ವಿದ್ಯಾರ್ಥಿಗಳು ಸನ್ ರೂಫ್ ನಿಂದ ಜಿಗಿಯುತ್ತಿದ್ದರು. ನಾನು ಸುರಕ್ಷಿತವಾಗಿ ಕಾರು ಓಡಿಸುವಂತೆ ಕೂಗಿಕೊಂಡಿದ್ದೇನೆ. ಕಾರಿನಲ್ಲಿ ಸುಮಾರು 5-6 ವಿದ್ಯಾರ್ಥಿಗಳು ಇದ್ದರು ಎಂದಿದ್ದಾರೆ. ಅಷ್ಟೇ ಅಲ್ಲ ಮಕ್ಕಳ ಈ ಬೇಜವಾಬ್ದಾರಿಗೆ ಪೋಷಕರೇ ಕಾರಣ. ಮಕ್ಕಳಿಗೆ ಕಾರನ್ನು ನೀಡಿದ ಪೋಷಕರು, ಕಾರಿನೊಳಗಿನ ಮಕ್ಕಳಿಗೆ, ಪಾದಾಚಾರಿಗಳಿಗೆ, ನಡೆದುಕೊಂಡು ಹೋಗುವ ಅಥವಾ ರಸ್ತೆ ದಾಟು ಶಾಲಾ ಮಕ್ಕಳಿಗೆ ಅಪಾಯವುಂಟು ಮಾಡುವ ಸಾಧ್ಯತೆ ಇದೆ ಎಂದು ಅನುಪ್ ಹೇಳಿದ್ದಾರೆ.
ಕಾಶ್ಮೀರಿ ಹುಡುಗಿಗಾಗಿ ಪತ್ನಿ ಕಥೆ ಮುಗಿಸಿದ ಗಂಡ!
ವಿದ್ಯಾರ್ಥಿಗಳಿಂದ ತುಂಬಿದ್ದ, ವಿದ್ಯಾರ್ಥಿಯೇ ಓಡಿಸ್ತಾ ಇದ್ದ ಈ ಕಾರನ್ನು ನೋಡಿ ಪಾದಾಚಾರಿಗಳು ಅಚ್ಚರಿಗೊಳಗಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಈವರೆಗೆ 12.5 ಮಿಲಿಯನ್ಗಿಂತಲೂ ಹೆಚ್ಚು ಬಾರಿ ನೋಡಲಾಗಿದೆ. 78 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ. ನೂರಾರು ಕಮೆಂಟ್ ಗಳು ಈ ವಿಡಿಯೋಕ್ಕೆ ಬಂದಿವೆ.
ಬಳಕೆದಾರರು ಇದಕ್ಕೆ ಪೋಷಕರು ಕಾರಣ ಎಂದಿದ್ದಾರೆ. ಮತ್ತೆ ಕೆಲವರು ಮಕ್ಕಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಅಪ್ರಾಪ್ತ ಬಾಲಕರು ಕಾರು ಚಲಾಯಿಸುತ್ತಿದ್ದಾರೆ, ಪಾಲಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ, ಸೂಕ್ತ ಶಿಕ್ಷೆಯಾಗಬೇಕು, ಕಾರನ್ನು ವಶಕ್ಕೆ ಪಡೆದುಕೊಳ್ಳಿ ಎಂದು ಜನರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ಮಕ್ಕಳಿಗೆ ಕಾರು ಸೇರಿದಂತೆ ಯಾವುದೇ ವಾಹನ ನೀಡುವುದು ಅಪಾಯಕಾರಿ. ಇದನ್ನು ಪಾಲಕರು ತಿಳಿದಿರಬೇಕು. ಒಂದ್ವೇಳೆ ಅಪಾಯವಾದ್ರೆ ಯಾರು ಹೊಣೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಥಾಣಾ ಪೊಲೀಸರಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜಗತ್ತಿನ ಮೊದಲ ವಿಮಾನ ಹಾರಾಟದ ಟಿಕೆಟ್ ದರ ಎಷ್ಟಿತ್ತು ಗೊತ್ತಾ?
ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ. ಡ್ರೈವಿಂಗ್ ಲೆಸೆನ್ಸ್ ಇಲ್ಲದೆ ಯಾರೂ ಕಾರು, ಬೈಕ್ ಸೇರಿದಂತೆ ಯಾವುದೇ ವಾಹನ ಚಲಾಯಿಸುವಂತಿಲ್ಲ. ಆದ್ರೆ ಈಚೆಗೆ ನಿಯಮವನ್ನು ಗಾಳಿಗೆ ತೂರಲಾಗಿದೆ. ಅನೇಕರು ಚಿಕ್ಕ ಮಕ್ಕಳ ಕೈಗೆ ಸ್ಕೂಟಿ, ಕಾರ್ ನೀಡ್ತಿದ್ದಾರೆ. ಇದು ಮಕ್ಕಳನ್ನು ಮಾತ್ರವಲ್ಲ ಉಳಿದ ಸವಾರರನ್ನು ಅಪಾಯಕ್ಕೆ ತಳ್ಳಿದಂತೆ.