ಶಾಪಿಂಗ್ ಮಾಲ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಬಟ್ಟೆ ಬದಲಿಸುತ್ತಿದ್ದೆ ಯುವತಿಗೆ ಚೇಳು ಕಚ್ಚಿದ ಘಟನೆ ನಡೆದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಇಷ್ಟು ದಿನ ಶಾಪಿಂಗ್ ಮಾಲ್‌ಗಳ ಹಾಗೂ ಇತರ ಬಟ್ಟೆ ಶಾಪ್‌ಗಳ ಡ್ರೆಸ್ಸಿಂಗ್ ರೂಮ್ ಅಥವಾ ಟ್ರಯಲ್ ರೂಮ್‌ಗಳಲ್ಲಿ ರಹಸ್ಯ ಕ್ಯಾಮರಾ ಇರಬಹುದೇ ಎಂಬ ಭಯ ಎಲ್ಲರಿಗೂ ಇತ್ತು. ಆದರೆ ಇದರ ಜೊತೆಗೆ ಈಗ ಹೊಸ ಭಯವೊಂದು ಶುರುವಾಗಿದೆ. ಹೌದು ಬಟ್ಟೆ ಶಾಪೊಂದರ ಟ್ರಯಲ್ ರೂಮ್‌ನಲ್ಲಿ ಬಟ್ಟೆ ತನಗೆ ಹಿಡಿಸುತ್ತದೆಯೇ ಎಂದು ನೋಡಲು ಹೋದವಳಿಗೆ ಚೇಳೊಂದು ಕಚ್ಚಿದ್ದು ಆಕೆ ಆಸ್ಪತ್ರೆಗೆ ದಾಖಲಾಗಿದೆ..
ಇಟಲಿಯಲ್ಲಿ ಪ್ರಸಿದ್ಧ ವಿದೇಶಿ ಬ್ರಾಂಡ್ ಝರಾಗೆ ಸೇರಿದ ಡ್ರೆಸ್ಸಿಂಗ್ ರೂಮ್‌ನಲ್ಲಿ ಈ ಘಟನ ನಡೆದಿದೆ. ಚೇಳು ಕಚ್ಚಿದ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ಯುವತಿಗೆ ಕುಟುಕಿದ ಚೇಳು
ಬಟ್ಟೆ ಬದಲಿಸುವುದಕ್ಕಾಗಿ ಡ್ರೆಸ್ಸಿಂಗ್ ರೂಮ್‌ಗೆ ಹೋದ ಆಕೆಗೆ ಕಾಲಿನ ಮೂಲಕ ಮೇಲೇರಿದ ಚೇಳು ಕಚ್ಚಿದೆ. 20 ವರ್ಷದ ಅಲಿಸಿಯಾ ಸ್ಪೈಸ್ ಚೇಳಿನಿಂದ ಕಡಿತಕ್ಕೊಳಗಾದ ಯುವತಿ. ಬ್ರೆಜಿಲ್‌ನ ಗೌರಾದ ಪಾರ್ಕ್ ಶಾಪಿಂಗ್ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಆದರೆ ಈ ವಿಚಾರ ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಶಾಪಿಂಗ್ ಮಾಲ್‌ನಲ್ಲಿ ಗ್ರಾಹಕರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.
ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಮಾಲ್ ಸಿಬ್ಬಂದಿ
ಆಗಸ್ಟ್ 20ರ ಬುಧವಾರ, ಮಧ್ಯಾಹ್ನ 12 ಗಂಟೆಗೆ, ಅಲಿಸಿಯಾ ಸ್ಪೈಸ್, ಜಾರಾದ ಡ್ರೆಸ್ಸಿಂಗ್ ಕೋಣೆಯಲ್ಲಿ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸುತ್ತಿದ್ದಾಗ, ಅವಳ ಕಾಲಿನ ಮೇಲೆ ಏನೋ ಹರಿದಾಡಿದಂತೆ ಆಕೆಗೆ ಅನಿಸಿದೆ. ಇದಾಗಿ ಕೆಲ ಸೆಕೆಂಡ್‌ಗಳಲ್ಲಿ ಆಕೆಗೆ ತೀಕ್ಷ್ಣವಾದ ನೋವು ಕಾಣಿಸಿಕೊಂಡಿದ್ದು, ನೋವು ತಾಳಲಾಗದೇ ತಲೆತಿರುಗಿದ ಅನುಭವ ಆಗಿದೆ. ಕೂಡಲೇ ತನಗೆ ಕಚ್ಚಿದ್ದು ಚೇಳು ಎಂಬುದು ಆಕೆಗೆ ತಿಳಿದಿದ್ದು, ಕೂಡಲೇ ಅಲಿಸಿಯಾ ತಾನು ಇದ್ದ ಶಾಪಿಂಗ್ ಸೆಂಟರ್‌ನ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾಳೆ ನಂತರ. ಅಲಿಸಿಯಾಳನ್ನು ಅವರು ಆಂಬ್ಯುಲೆನ್ಸ್‌ನಲ್ಲಿ ಆಸಾ ನಾರ್ಟೆ ಪ್ರಾದೇಶಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆ ಚೇತರಿಸಿಕೊಂಡಿದ್ದಾಳೆ.
ಆಂಬ್ಯುಲೆನ್ಸ್ ಸಿಬ್ಬಂದಿ ಶಾಪ್‌ಗೆ ಬರುವವರೆಗೂ ಶಾಪಿಂಗ್ ಮಾಲ್‌ನ ಸಿಬ್ಬಂದಿ ಆಕೆಯನ್ನು ವೀಲ್‌ಚೇರ್‌ನಲ್ಲಿ ಕೂರಿಸಿದ್ದರು. ಜೊತೆಗೆ ಅವಳಿಗೆ ಆರಂಭಿಕ ಪ್ರಥಮ ಚಿಕಿತ್ಸೆಯನ್ನು ನೀಡಿದರು. ಬ್ರೆಜಿಲ್‌ನಲ್ಲಿ ವಾಸ್ತುಶಿಲ್ಪ ವಿದ್ಯಾರ್ಥಿನಿಯಾಗಿರುವ ಅಲಿಸಿಯಾ ಸ್ಪೈಸ್ ಸ್ಥಿತಿ ಈಗ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಶಾಪಿಂಗ್ ಮಾಲ್ ಪ್ರತಿಕ್ರಿಯಿಸಿದ್ದು, ತನ್ನ ಒಂದು ಅಂಗಡಿಯ ಆವರಣದಲ್ಲಿ ನಡೆದ ಘಟನೆಗೆ ವಿಷಾದಿಸುತ್ತೇವೆ ಮತ್ತು ಸಂತ್ರಸ್ತ ಗ್ರಾಹಕರನ್ನು ಅಂಗಡಿಯ ಬ್ರಿಗೇಡ್ ತಕ್ಷಣವೇ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದೆ.ಮಾಲ್ ಕಟ್ಟುನಿಟ್ಟಾದ ಕೀಟ ನಿಯಂತ್ರಣ ಪ್ರೋಟೋಕಾಲ್‌ಗಳನ್ನು ನಿರ್ವಹಿಸುತ್ತದೆ ಮತ್ತು ಗ್ರಾಹಕರು ಮತ್ತು ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಆದ್ಯತೆಯಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: ನೋಯ್ಡಾದಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪ್ರಕರಣ: ಪೊಲೀಸರಿಂದ ಗಂಡನಿಗೆ ಗುಂಡೇಟು
ಇದನ್ನೂ ಓದಿ: ಕಾಯಬೇಕಾದವನೇ ಮೇಯಲೆತ್ನಿಸಿದ: ರೈಲಿನಲ್ಲಿ ಮಲಗಿದ ಮಹಿಳೆಯನ್ನು ಅಸಭ್ಯವಾಗಿ ಮುಟ್ಟಿದ ರೈಲ್ವೆ ಪೊಲೀಸ್
