ಉಗ್ರರನ್ನು ಮೃಗಗಳಿಗೂ ಹೋಲಿಸಲು ಆಗಲ್ಲ, ನಮಗೆ ತೊಂದರೆ ಇಲ್ಲ: ಇಸ್ರೇಲ್‌ನಲ್ಲಿ ಕನ್ನಡಿಗರ ಮಾತು

ಇಸ್ರೇಲ್‌ ಮತ್ತು ಹಮಾಸ್ ನಡುವಿನ ಯುದ್ಧ ಇನ್ನೂ ಮುಂದುವರೆದಿದ್ದು, ಈ ಬಗ್ಗೆ ಅಲ್ಲಿರುವ ಕನ್ನಡಿಗರು ಏನ್‌ ಹೇಳಿದ್ದಾರೆ ನೀವೆ ಕೇಳಿ..
 

Bindushree N  | Updated: Oct 21, 2023, 3:49 PM IST

ಇಸ್ರೇಲ್ -ಹಮಾಸ್  ನಡುವಿನ ಯುದ್ಧ 15ನೇ ದಿನಕ್ಕೆ ಕಾಲಿಟ್ಟಿದೆ. ಕ್ಷಣ ಕ್ಷಣವೂ ಜೀವ ಕೈಯಲ್ಲಿ ಹಿಡಿದು ಗಾಜಾಪಟ್ಟಿ ನಿವಾಸಿಗಳು ನಡುಗುತ್ತಿದ್ದಾರೆ. ಉತ್ತರ ಗಾಜಾಪಟ್ಟಿಯಲ್ಲಿ(Gaza strip) ಇಂದು ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತ ಮಾಡಲಾಗಿದೆ. ಆಲ್ ಖುದಾಸ್ ಆಸ್ಪತ್ರೆಯ ಆಶ್ರಯದಲ್ಲಿ 15 ಸಾವಿರ ನಿರಾಶ್ರಿತರು ಇದ್ದಾರೆ. ಆಸ್ಪತ್ರೆ ಖಾಲಿ ಮಾಡಿ ಎಂದು ಇಸ್ರೇಲ್(Isreal) ಸೇನೆ ಹೇಳುತ್ತಿದೆ. ಇನ್ನೂ ಈ ಯುದ್ಧದ ಬಗ್ಗೆ ಕೆಲವು ಕನ್ನಡಿಗರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಗ್ಗೆ ಮಾತನಾಡಿದ್ದಾರೆ. ಪದ್ಮರಾಜ್‌ ಪೂಜಾರಿ ಎಂಬುವವರು ಮಾತನಾಡಿ, ನಾನು ಇಲ್ಲಿ ಸುಮಾರು 15 ವರ್ಷದಿಂದ ಇಲ್ಲಿ ಇದ್ದೇನೆ. ಇದು ತುಂಬಾ ಸೆಕ್ಯೂರ್‌ ಆಗಿರುವ ದೇಶವಾಗಿದೆ. ಇಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ. ಉಗ್ರರು ದಾಳಿ ಮಾಡಿರುವುದು ಇಸ್ರೇಲಿಗರಿಗೆ ಗೊತ್ತಿಲ್ಲ. ಅವರು ಹಬ್ಬದ ದಿನ ದಾಳಿ ಮಾಡಿದ್ದಾರೆ. ಉಗ್ರರನ್ನು ನಾವು ಮೃಗಗಳಿಗೆ ಹೋಲಿಸಲು ಆಗುವುದಿಲ್ಲ ಎಂದು ಪದ್ಮರಾಜ್‌ ಪೂಜಾರಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  15ನೇ ದಿನವೂ ರಣರಂಗದಲ್ಲಿ ಇಸ್ರೇಲ್ ಗುಂಡಿನ ಮಳೆ: ಗಾಜಾದ ಮತ್ತೊಂದು ಮಸೀದಿ ಉಡೀಸ್‌