Mafia movie song: ‘ಮಾಫಿಯಾ’ ಚಿತ್ರದಿಂದ ಬಂತು 'ತುಂಬಾನೇ ಕೇಳಲಾರೆ..' ರೊಮ್ಯಾಂಟಿಕ್ ಸಾಂಗ್‌!

ಅದಿತಿ ಜೊತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ಪ್ರಜ್ವಲ್!
‘ಮಾಫಿಯಾ’ ಚಿತ್ರದಿಂದ ಬಂತು  ರೊಮ್ಯಾಂಟಿಕ್  ಹಾಡು
ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದ ಚಿತ್ರ
 

First Published Jan 5, 2024, 10:28 AM IST | Last Updated Jan 5, 2024, 10:28 AM IST

ಪ್ರಜ್ವಲ್ (Prajwal Devraj) ಮತ್ತು ಅಧಿತಿ ಪ್ರಭುದೇವ (Aditi Prabhudeva) ಜೊತೆಯಾಗಿ ನಟಿಸುತ್ತಿರೋ ಮಾಫಿಯಾ ಸಿನಿಮಾದ(Mafia movie) ಹೊಸ ಹಾಡು ರಿಲೀಸ್ ಆಗಿದೆ. ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ಮಾಫಿಯಾ. ಲೋಹಿತ್ ಮತ್ತು ಪ್ರಜ್ವಲ್ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ. ಸದ್ಯ ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡು(Romantic song) ರಿಲೀಸ್ ಆಗಿದೆ. ತುಂಬನೇ ಕೇಳಲಾರೆ..' ಸಾಲುಗಳಿಂದ ಪ್ರಾರಂಭವಾಗುವ ಈ ರೊಮ್ಯಾಂಟಿಕ್ ಹಾಡು ಹರಿಚರಣ್ ಧ್ವನಿಯಲ್ಲಿ ಮೂಡಿ ಬಂದಿದೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಈ ಹಾಡಿಗಿದೆ. ಪ್ರಜ್ವಲ್ ಮತ್ತು ಅದಿತಿ ಅವರನ್ನು ಈ ರೊಮ್ಯಾಂಟಿಕ್ ಹಾಡಿನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  Max Climax Look: ಹೇಗಿದೆ ಗೊತ್ತಾ ಕಿಚ್ಚನ ಮ್ಯಾಕ್ಸ್ ಸಿನಿಮಾ ಕ್ಲೈಮ್ಯಾಕ್ಸ್? ಇದರ ಫೋಟೊ ಹಂಚಿಕೊಂಡ ಸುದೀಪ್!

Video Top Stories