Kantara: ಜೀವಮಾನದಲ್ಲಿ ನಾನು ಇಷ್ಟು ಫೋನ್‌ನಲ್ಲಿ ಮಾತಾಡಿಲ್ಲ- ಲೀಲಾ ತಂದೆಯ ಪಾತ್ರದಾರಿ ಸತೀಶ್ ಆಚಾರ್ಯ

ಕಾಂತಾರ ಸಿನಿಮಾದಲ್ಲಿ ನಾಯಕಿ ಲೀಲಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸತೀಶ್ ಆಚಾರ್ಯ ಅವರು ರಂಗಭೂಮಿ ಕಲಾವಿದರು. ಸುಮಾರು 30 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.

First Published Oct 30, 2022, 1:53 PM IST | Last Updated Oct 30, 2022, 1:53 PM IST

ಕಾಂತಾರ ಸಿನಿಮಾದ ಪ್ರತಿಯಯೊಂದು ಪಾತ್ರವೂ ಅಭಿಮಾನಿಗಳ ಹೃದಯ ಗೆದ್ದಿದೆ. ಈ ಚಿತ್ರದಲ್ಲಿ ನಾಯಕಿ ಲೀಲಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸತೀಶ್ ಆಚಾರ್ಯ ಅವರು ರಂಗಭೂಮಿ ಕಲಾವಿದರು. ಸುಮಾರು 30 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ನಟ ಸತೀಶ್ ಆಚಾರ್ಯ ಅವರು, ರಿಷಬ್ ತನ್ನ ಪಾಲಿನ ದೇವರು ಎಂದು ಹೇಳಿದ್ದಾರೆ. 'ರಂಗಭೂಮಿಯಿಂದಲೇ ನಾವು ಧೈರ್ಯದಿಂದ ಪಾತ್ರ ಮಾಡಿದ್ದೇವೆ. ರಿಷಬ್ ಸರ್  ನನ್ನ ಪಾಲಿನ ದೇವರು. ಗ್ರಾಮೀಣ ಭಾಗದ ರಂಗ ಕಲಾವಿದರಾದ ನಮ್ಮನ್ನು ಕರೆಸಿ ಪಾತ್ರ ಮಾಡಿಸಿದ್ದಾರೆ ಅಂದರೆ ಮೆಚ್ಚುಗೆ ಇದೆ. ರಿಷಬ್ ಒಳ್ಳೆ ಹೃದಯವಂತ ಮನುಷ್ಯ. ಜನರ ಪ್ರತಿಕ್ರಿಯೆ ಕೇಳಿ ನನ್ನ ಕಿವಿ ನೋವಾಗಿದೆ. ಕೆನಡಾ ದುಬಾಯಿ ಬೆಂಗಳೂರು ಮೈಸೂರು ಎಲ್ಲಾ ಕಡೆಯಿಂದ ಕರೆ ಬಂದಿದೆ. ಪ್ರೇಕ್ಷಕರ ಅಭಿಪ್ರಾಯ ಕೇಳಿ ನಾನು ಖುಷಿ ಪಟ್ಟಿದ್ದೇನೆ. ಈ ಸಿನಿಮಾದ ಯಶಸ್ಸಿನ ಹಿಂದೆ ಯಾವುದೋ ಒಂದು ಬಲವಾದ ಶಕ್ತಿ ಇದೆ. ನಾಟಕ ಮಾಡುವಾಗ ಉಡುಪಿ ಮಂಗಳೂರಿಗೆ ಸೀಮಿತವಾಗಿದ್ದೆವು. ಈಗ ಪ್ರಪಂಚದಾದ್ಯಂತ ನಮ್ಮನ್ನು ಜನ ಗುರುತಿಸುವಂತಾಗಿದೆ' ಎಂದು ಹೇಳಿದರು.