ರಾಜಸ್ಥಾನದಲ್ಲಿ‌ ನಟ ದರ್ಶನ್ ಶೂಟ್; ಬೆಂಗಳೂರಿನಲ್ಲಿ ಫ್ಯಾನ್ಸ್ ಮೀಟ್!

ಅತ್ತ ದಿ ಡೆವಿಲ್ ಶೂಟಿಂಗ್ ನಡೀತಾ ಇದ್ರೆ, ಇತ್ತ ಬೆಂಗಳೂರಿನಲ್ಲಿ ದರ್ಶನ್ ಫ್ಯಾನ್ಸ್ ಮೀಟ್​ಗೂ ಭರ್ಜರಿ ತಯಾರಿ ನಡೀತಾ ಇದೆ. 

Padmashree Bhat  | Updated: Mar 27, 2025, 5:29 PM IST

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಶೂಟಿಂಗ್ ಭರದಿಂದ ನಡೀತಾ ಇದೆ. ಬೆಂಗಳೂರು, ಮೈಸೂರಿನ ಬಳಿಕ ಸದ್ಯ ರಾಜಸ್ಥಾನದಲ್ಲಿ ಬೀಡು ಬಿಟ್ಟಿರೋ ದಿ ಡೆವಿಲ್ ಟೀಂ ಚಿತ್ರದ ಕೆಲ ಪ್ರಮುಖ ಸೀನ್​​ಗಳನ್ನ ಶೂಟ್ ಮಾಡ್ತಾ ಇದೆ. ಇನ್ನೂ ಗುರುವಾರ ಬೆಂಗಳೂರಿನಲ್ಲಿ ದಾಸನ ಫ್ಯಾನ್ಸ್ ಮೀಟ್​ಗೂ ಭರ್ಜರಿ ತಯಾರಿ ನಡೀತಾ ಇದೆ. ಜೈಲಿಂದ ಮರಳಿದ ಮೇಲೆ ಇದೇ ಮೊದಲ ಬಾರಿಗೆ ದರ್ಶನ್ ಫ್ಯಾನ್ಸ್ ಮುಂದೆ ಹಾಜರಾಗ್ತಾ ಇದ್ದಾರೆ. ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಾ ಇದೆ. ಈ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ಮರುಪ್ರಾರಂಭ ಮಾಡಿದ ದಿ ಡೆವಿಲ್ ತಂಡ ಬಳಿಕ ಮೈಸೂರಿನಲ್ಲಿ 4 ದಿನಗಳ ಕಾಲ ಶೂಟಿಂಗ್ ಮಾಡಿತ್ತು. ಮತ್ತೀಗ ರಾಜಸ್ಥಾನಕ್ಕೆ ತೆರಳಿರೋ ಡೆವಿಲ್ ತಂಡ ಅಲ್ಲಿನ ಅದ್ಭುತ ಲೊಕೇಶನ್​ಗಳಲ್ಲಿ ಶೂಟಿಂಗ್ ಮಾಡ್ತಾ ಇದೆ. ಈ ಶೆಡ್ಯೂಲ್​ನಲ್ಲಿ ದಿ ಡೆವಿಲ್ ನಾಯಕಿ ರಚನ ರೈ, ವಿಲನ್ ಮಹೇಶ್ ಮಂಜ್ರೇಕರ್ ನಟನೆಯ  ದೃಶ್ಯಗಳನ್ನ ಶೂಟ್ ಮಾಡಲಾಗಿದೆ. ಅಚ್ಯುತಕುಮಾರ್ ಕೂಡ ರಾಜಸ್ಥಾನದಲ್ಲಿ ನಡೆದಿರೋ ಶೂಟಿಂಗ್​ನಲ್ಲಿ ಭಾಗಿದ್ದಾರೆ. ನಿರ್ದೇಶಕ ಮಿಲನ ಪ್ರಕಾಶ್ ಚುರುಕಿನಿಂದ ಶೂಟಿಂಗ್ ಮಾಡ್ತಾ ಇದ್ದಾರೆ. ಹೌದು ಈ ಶೆಡ್ಯೂಲ್​ನಲ್ಲಿ ಯಾವುದೇ ಫೈಟ್ ಅಥವಾ ಡ್ಯಾನ್ಸ್ ಸಿಕ್ವೆನ್ಸ್​​ನ ಶೂಟ್ ಮಾಡ್ತಾ ಇಲ್ಲ. ಓನ್ಲಿ ಮಾತಿನ  ಭಾಗದ ಚಿತ್ರೀಕರಣ ಮಾತ್ರ ನಡೀತಾ ಇದೆ. ಅದಕ್ಕೆ ಕಾರಣ ಏನು ಅನ್ನೋದು ಗೊತ್ತೇ ಇದೆ. ದರ್ಶನ್​ಗೆ ಕಾಡ್ತಾ ಬೆನ್ನು ನೋವು ಇನ್ನೂ ಪೂರ್ಣವಾಗಿ ಸರಿ ಹೋಗಿಲ್ಲ. ಸೋ ಸದ್ಯಕ್ಕೆ ಡ್ಯಾನ್ಸ್, ಫೈಟ್ ಸಿಕ್ವೆನ್ಸ್ ಪ್ಲಾನ್ ಮಾಡಬೇಡಿ ಅಂತ ದರ್ಶನ್ ಹೇಳಿದ್ದಾರೆ.

Read More...