ಅಕ್ಕಿ ಮೂಟೆ ಹೊತ್ತು ಸರಳತೆ ಮೆರೆದ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ

ಎಲ್ಲರಂತೆ ಮಠದಲ್ಲಿ ಅಕ್ಕಿ ಮೂಟೆಯನ್ನು ಹೊರುವ ಮೂಲಕ ಕೊಪ್ಪಳ ಗವಿಸಿದ್ದೇಶ್ವರ ಮಠದ ಸ್ವಾಮೀಜಿ ಸರಳತೆ ಮೆರೆದಿದ್ದಾರೆ. ಮಠಕ್ಕೆ ದಿನಸಿ ಸಾಗಿಸುವ ವೇಳೆ ಸ್ವಾಮೀಜಿ ಅಕ್ಕಿ ಮೂಟೆ ಹೊತ್ತಿದ್ದಾರೆ.

First Published Jan 21, 2022, 6:03 PM IST | Last Updated Jan 21, 2022, 6:04 PM IST


ಕೊಪ್ಪಳ: ಎಲ್ಲರಂತೆ ಮಠದಲ್ಲಿ ಅಕ್ಕಿ ಮೂಟೆಯನ್ನು ಹೊರುವ ಮೂಲಕ ಕೊಪ್ಪಳ ಗವಿಸಿದ್ದೇಶ್ವರ ಮಠದ ಸ್ವಾಮೀಜಿ ಸರಳತೆ ಮೆರೆದಿದ್ದಾರೆ. ಮಠಕ್ಕೆ ದಿನಸಿ ಸಾಗಿಸುವ ವೇಳೆ ಸ್ವಾಮೀಜಿ ಅಕ್ಕಿ ಮೂಟೆ ಹೊತ್ತಿದ್ದಾರೆ. ಸ್ವಾಮೀಜಿ ಅಕ್ಕಿ ಮೂಟೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸ್ವಾಮೀಜಿಯ ಸರಳತೆಯನ್ನು ಎಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ. ನಿನ್ನೆ ರಾತ್ರಿ ದಾಸೋಹ ಭವನಕ್ಕೆ ಸ್ವಾಮೀಜಿ ಅಕ್ಕಿ ಮೂಟೆ ಹೊತ್ತಿದ್ದರು.  ಕೋವಿಡ್‌ ಹಿನ್ನೆಲೆಯಲ್ಲಿ ಮಠದಲ್ಲಿ ಅನ್ನ ದಾಸೋಹ ಎರಡು ದಿನಕ್ಕೆ ಸೀಮಿತವಾಗಿದೆ. 

ಕೆಲದಿನಗಳ ಹಿಂದೆ ಮಗುವಿನೊಂದಿಗೆ ಮಗುವಿನಂತೆ ಸ್ವಾಮೀಜಿ ಬೆರೆತು ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪುಟ್ಟ ಮಗುವೊಂದನ್ನು ಕಾರಿನ ಬಾನೆಟ್ ಮೇಲೆ ಕೂಡಿಸಿ ಸ್ವಾಮೀಜಿ ಆಟವಾಡಿಸುತ್ತಿರುವ ದೃಶ್ಯ ಇದಾಗಿತ್ತು. 

Karnataka Politics: ರಾಜ್ಯದ ಅಭಿವೃದ್ಧಿಗೆ HDK ಮತ್ತೆ ಸಿಎಂ ಆಗಲಿ: ಚುಂಚನಗಿರಿ ಶ್ರೀ

Video Top Stories