ಕುಮಾರಸ್ವಾಮಿಯವ್ರೆ ನಿಮ್ಮ ಕ್ಷೇತ್ರದ ಕಡೆ ಗಮನಕೊಡಿ: ಇಲ್ಲಿನ ನಿವಾಸಿಗಳ ಬದುಕೇ ಚರಂಡಿ ಗುಂಡಿಯಾಗಿದೆ !
ನಾವು ಈಗ ಹೇಳಲು ಹೊರಟಿರುವ ಸ್ಟೋರಿ ಇದು ಮಾಜಿ ಸಿಎಂ ಕ್ಷೇತ್ರದ ಕಥೆ. ಇದನ್ನ ನೋಡಿ ದ್ರೆ ಅಯ್ಯೋ ಪಾಪ ಅಂತೀರಿ. ಆ ದೃಶ್ಯ ನೋಡಿದ್ರೆ ಏನಪ್ಪ ಇವರ ಪಾಡು ಹಿಂಗಿದೆಯಲ್ಲ ಅಂತ ಅನ್ಕೋತಿರಾ.? ಅಷ್ಟಕ್ಕೂ, ಆ ಮಾಜಿ ಸಿಎಂ ಕ್ಷೇತ್ರದಲ್ಲಿ ಆಗ್ತಿರೋದು ಏನು ಗೊತ್ತಾ..? ಈ ಸ್ಪೆಷಲ್ ರಿಪೋಟರ್ ನೋಡಿ.
ಇದೀಗ ನಾವು ಹೇಳ ಹೊರಟಿರೋದು ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರ ಚನ್ನಪಟ್ಟಣದ ಕಥೆ ಇದು. ಕುಮಾರಸ್ವಾಮಿಯವರು(HD Kumaraswamy) ವಿಪಕ್ಷಗಳ ವಿರುದ್ಧ ಗುದ್ದಾಡೋದ್ರಲ್ಲಿ ನಿಸ್ಸೀಮರು, ಆದ್ರೆ, ತಮ್ಮ ಕ್ಷೇತ್ರದಲ್ಲಿ ಈ ರೀತಿ ಜನ ಸಮಸ್ಯೆ ಎದುರಿಸ್ತಾ ಇದ್ರು ಯಾರ ಗಮನಕ್ಕೂ ಬಂದಿಲ್ಲ. ಪ್ರತಿ ಮನೆಯ ಮುಂದೆ ಕಿರು ಚರಂಡಿ ಗುಂಡಿಗಳು, ಬೆಳಗಾದರೆ ಸಾಕು ಕೊಳಚೆ ನೀರನ್ನು ಗೋರುವ ಕಾಯಕ, ಅಷ್ಟಕ್ಕೂ ಇಂತಹ ದೃಶ್ಯಗಳು ಕಂಡು ಬಂದಿರೋದು ಯಾವುದೋ ಕುಗ್ರಾಮದಲ್ಲಿ ಅಲ್ಲ, ಅಸಲಿಗೆ ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿ ಆಗಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ(channapattana). ಆನಂದಪುರದ 1ನೇ ಅಡ್ಡರಸ್ತೆಯ ನಿವಾಸಿಗಳ ಸ್ಥಿತಿ ಇದು.ಇಲ್ಲಿನ ನಿವಾಸಿಗಳ ಬದುಕೇ ಚರಂಡಿ ಗುಂಡಿಯಾಗಿ ಬಿಟ್ಟಿದೆ. ಚನ್ನಪಟ್ಟಣ ನಗರಸಭಾ ವ್ಯಾಪ್ತಿಯ 29ನೇ ವಾರ್ಡ್‌ಗೆ ಸೇರುವ ಆನಂದಪುರ 1ನೇ ಅಡ್ಡರಸ್ತೆಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ನಿವಾಸಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಮರೀಚಿಕೆ ಯಾಗಿವೆ. ರಸ್ತೆಯಿಲ್ಲ, ಒಳಚರಂಡಿ ವ್ಯವಸ್ಥೆ ಬಗ್ಗೆ ಕೇಳಲೇ ಬೇಡಿ, ಮನೆ ಮುಂದೆ ಗುಂಡಿ ನಿರ್ಮಿಸಿಕೊಂಡು ಬರಿಗೈಯಲ್ಲಿ ಮೋರಿ ನೀರನ್ನ ಬಾಚಿ ಹೊರಹಾಕುವ ಪರಿಸ್ಥಿತಿ ಯಾರಿಗೂ ಬೇಡ ಸ್ವಾಮಿ.ಬರೀ ಕೊಳಚೆ ನೀರು ಗೋರುವುದಲ್ಲದೇ ಅದನ್ನು ಬಕೆಟ್ಟುಗಳಲ್ಲಿ ತುಂಬಿಕೊಂಡು ಮುಖ್ಯರಸ್ತೆಯ ಚರಂಡಿಯಲ್ಲಿ ಸುರಿಯುವುದೇ ದಿನನಿತ್ಯದ ಕಾಯಕವಾಗಿದೆ.
ಇದನ್ನೂ ವೀಕ್ಷಿಸಿ: ವಾಪಸ್ ಬಂದ ಪೂಜಾರಿ ಹೇಳಿದ್ದೇನು..?: ಬಟ್ಟೆ ನೋಡಿ ಸತ್ತೇ ಹೋದ್ರು ಅಂತ ಅಂದುಕೊಂಡಿದ್ರು..!