ವಾಪಸ್ ಬಂದ ಪೂಜಾರಿ ಹೇಳಿದ್ದೇನು..?: ಬಟ್ಟೆ ನೋಡಿ ಸತ್ತೇ ಹೋದ್ರು ಅಂತ ಅಂದುಕೊಂಡಿದ್ರು..!

30 ಸಾವಿರಕ್ಕೆ ಗಂಡ ಹೀಗೆ ಮಾಡಿಬಿಟ್ಟನಾ..?
ಗಂಡನೇ ಪ್ರೀಯಕರನ ಜೊತೆ ಹೆಂಡತಿ ಕಳಿಸಿದ್ನಾ..?
ಆ ಜೋಡಿ ಪೊಲೀಸರ ಮುಂದೆ ಹೇಳಿದ್ದೇನು..? 

First Published Aug 18, 2023, 3:00 PM IST | Last Updated Aug 18, 2023, 3:00 PM IST

ಅವನು ಗಂಗಮ್ಮ ದೇವಿ ದೇವಸ್ಥಾನದ ಪೂಜಾರಿ(Temple priest).. ತನ್ನ ಪಾಡಿಗೆ ತಾನು ದೇವಿಯ ಸೇವೆ ಮಾಡಿಕೊಂಡು, ಅಲ್ಲಿಗೆ ಬಂದ ಭಕ್ತರಿಗೆ ತೀರ್ಥ ಪ್ರಸಾದ ಕೊಡುತ್ತಾ ಇದ್ದಿದ್ರೆ, ನಾವು ಇತ್ತು ಅವನ ಬಗ್ಗೆ ಹೇಳುತ್ತಲೇ ಇರಲಿಲ್ಲ. ಆದ್ರೆ ಈತ ಮಾಡಿದ ಕೆಲಸ ಕೇಳಿದ್ರೆ ನೀವು ದೇವಸ್ಥಾನಕ್ಕೆ(temple) ಹೋಗೋದಕ್ಕೂ ಹೆದರಿಬಿಡ್ತೀರ. ಯಾಕಂದ್ರೆ ಈ ಪೂಜಾರಿ ದೇವರಿಗೆ ಕೈಮುಗಿಯಲು ಬಂದ ಪರಸ್ತ್ರೀಯೊಬ್ಬಳ ಮೇಲೆಯೇ ಕಣ್ಣಾಕಿಬಿಟ್ಟಿದ್ದ. ಆಕೆ ಕೂಡ ಇವನ ಬಲೆಗೆ ಬಿದ್ದುಬಿಟ್ಟಿದ್ಲು. ಆಕೆಗೆ 28 ವರ್ಷವಾದ್ರೆ ಈತನಿಗೆ ಫಿಫ್ಟಿ ಪ್ಲಸ್‌. ಇನ್ನೂ ಗ್ರಾಮದಲ್ಲೆಲ್ಲಾ ಈವರಿಬ್ಬರ ಲವ್ವಿಡವ್ವಿ ವಿಷ್ಯ ಹಬ್ಬುತ್ತಾ ಇದ್ದಂತೆ, ಬಟ್ಟೆ, ಚಪ್ಪಲಿಗಳು ಗ್ರಾಮದ ಕೆರೆಯಲ್ಲಿ ಸಿಕ್ಕಿತ್ತು. ಅವರು ಮರ್ಯಾದೆಗೆ ಅಂಜಿ ಸತ್ತೇ ಹೋಗಿದ್ದಾರೆ ಅಂದುಕೊಂಡಿದ್ರು, ಪೊಲೀಸರೂ ಕೆರೆಯನ್ನೆಲ್ಲಾ ಜಾಲಾಡಿದ್ರು. ಆದ್ರೆ ಅವರ ಮೃತದೇಹ ಮಾತ್ರ ಸಿಕ್ಕಿರಲಿಲ್ಲ. ಎಲ್ಲರು ಅವರಿಬ್ಬರನ್ನ ಮರೆತುಬಿಟ್ಟರು. ಆದ್ರೆ ಸೀನ್ ಕಟ್ ಮಾಡಿದ್ರೆ ಇವತ್ತು ಆ ಇಬ್ಬರೂ ಪ್ರತ್ಯಕ್ಷರಾಗಿದ್ದಾರೆ. ಹೀಗೆ ದೇವಸ್ಥಾನಕ್ಕೆ ಬಂದ ಭಕ್ತೆಯನ್ನ ಬಲೆಗೆ ಬೀಳಿಸಿಕೊಂಡ ಪೂಜಾರಿಯ ವಿಚಿತ್ರ ಮತ್ತು ವಿಭಿನ್ನ ಲವ್ ಸ್ಟೋರಿಯೇ ಇವತ್ತಿನ ಎಫ್.ಐ.ಆರ್.

ಇದನ್ನೂ ವೀಕ್ಷಿಸಿ:  ಕ್ರಿಶ್ಚಿಯನ್ನರ ಮೇಲೇಕೆ ಪಾಕ್‌ನಲ್ಲಿ ಆಕ್ರೋಶ..? ಹೇಗಿದೆ ಗೊತ್ತಾ ಪಾಕ್‌ನಲ್ಲಿ ಮೈನಾರಿಟಿ ಪರಿಸ್ಥಿತಿ..?