News Hour: ನಾಳೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. ಗಣ್ಯರು ಸಂತಾಪ ಸೂಚಿಸಿದ್ದು, ದೆಹಲಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ರಾಜಕೀಯ ಪಕ್ಷಗಳ ದೇಣಿಗೆ ವಿವರ ಬಹಿರಂಗವಾಗಿದ್ದು, ಬಿಜೆಪಿ ಮೊದಲ ಸ್ಥಾನದಲ್ಲಿದೆ.
ನವದೆಹಲಿ (ಡಿ.27): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊನೆಯುಸಿರೆಳೆದಿದ್ದಾರೆ. ಆರ್ಥಿಕ ತಜ್ಞನಿಗೆ ಇಡೀ ಭಾರತ ಕಂಬನಿ ಮಿಡಿದಿದೆ. ಗಣ್ಯರು ಸಂತಾಪ ಸೂಚಿಸಿದ್ದು, ನಾಳೆ ದೆಹಲಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಚುನಾವಣೆ ಗೆಲ್ಲದ ಸಿಂಗ್ ಪ್ರಧಾನಿ ಆಗಿದ್ದೇ ರೋಚಕ ಕಥೆ. ದಿವಾಳಿ ಆಗಿದ್ದ ದೇಶವನ್ನ ಸರಿ ದಾರಿಗೆ ತಂದಿದ್ದ ಮಾಂತ್ರಿಕ ಅವರು. ಮೌನಿಬಾಬಾ ಅಂದ್ರೂ ಕೆಲಸದಿಂದಲೇ ಉತ್ತರಿಸಿದ್ದರು.
ಪಾಕ್ ಬತ್ತಳಿಕೆಗೆ ಬಂದಿವೆ ಚೀನಾ ಅಸ್ತ್ರಗಳು! ಅಗ್ನಿಪಂಜರದಲ್ಲಿ ಸಿಲುಕಿದೆಯಾ ಭಾರತ?
ರಾಜಕೀಯ ಪಕ್ಷಗಳ ದೇಣಿಗೆ ವಿವರ ಬಹಿರಂಗವಾಗಿದೆ. ಬಿಜೆಪಿಗೆ ಮೊದಲ ಸ್ಥಾನ ಸಿಕ್ಕಿದ್ದರೆ, ಕಾಂಗ್ರೆಸ್ ಮೂರನೇ ಸ್ಥಾನ ಪಡೆದುಕೊಂಡಿದೆ. ಚುನಾವಣಾ ವರ್ಷದಲ್ಲಿ ಕೋಟಿ ಕೋಟಿ ಹರಿದುಬಂದಿದೆ.