ಆಯೋಧ್ಯೆಯಲ್ಲಿ ಮಸೀದಿ ಬೇಡ, 5 ಏಕರೆಯಲ್ಲಿ ಹಿಂದೂ ಮುಸ್ಲಿಮ್ ಕೃಷಿ ಮಾಡಲಿ; ಇಕ್ಬಾಲ್ ಅನ್ಸಾರಿ!
ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಸುಪ್ರೀಂ ಕೋರ್ಟ್ ರಾಮ ಮಂದಿರ ಕುರಿತು ತೀರ್ಪು ನೀಡುವಾಗ 5 ಏಕರೆ ಸ್ಥಳವನ್ನು ಮಸೀದಿ ಕಟ್ಟಲು ನೀಡಬೇಕು ಎಂದು ಸೂಚಿಸಿತ್ತು. ಇದರಂತೆ 5 ಏಕರೆ ಪ್ರದೇಶ ನೀಡಲಾಗಿದೆ. ಆದರೆ ಈ ಪ್ರದೇಶದಲ್ಲಿ ಮಸೀದಿ ಬೇಡ, ಕೃಷಿ ಮಾಡಲಿ ಎಂದು ಬಾಬ್ರಿ ಮಸೀದಿ ದಾವೇದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಆಯೋಧ್ಯೆಯಲ್ಲಿ ಮುಸ್ಲಿಮರಿಗೆ ಮಸೀದಿ ಕಟ್ಟಲು ನೀಡಲಾಗಿರುವ 5 ಏಕರೆ ಜಾಗದಲ್ಲಿ ಮಸೀದಿ ಬೇಡ, ಹಿಂದೂ ಮುಸ್ಲಿಮರು ಕೃಷಿ ಮಾಡಲಿ ಎಂದು ಬಾಬ್ರಿ ಮಸೀದಿ ಪರ ನ್ಯಾಯಾಲಯದಲ್ಲಿ ಹೋರಾಡಿದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಮಸೀದಿ ನಿರ್ಮಾಣಕ್ಕೂ ಟ್ರಸ್ಟ್ ರಚನೆಯಾಗಿದೆ. ಆದರೆ ಇದುವರೆಗೂ ಮಸೀದಿ ನಿರ್ಮಾಣ ಆಗಿಲ್ಲ. ಸುನ್ನಿ ಸಂತ ಚೇರ್ಮೆನ್ ರಚಿಸಿರುವ ಟ್ರಸ್ಟ್ ಇದುವರೆಗೂ ಮಸೀದಿ ಕಟ್ಟಬೇಕಾದ ಕೆಲಸ ಮಾಡಿಲ್ಲ. ಟ್ರಸ್ಟ್‌ಗೆ ಮಸೀದಿ ಕಟ್ಟುವ ಯಾವುದೇ ಉದ್ದೇಶವಿಲ್ಲ. ಹೀಗಾಗಿ ಈ ಜಮೀನಿನಲ್ಲಿ ಹಿಂದೂ ಹಾಗೂ ಮುಸ್ಲಿಮರು ಕೃಷಿ ಮಾಡಿ ಬಂದ ಲಾಭ ಹಂಚಿಕೊಳ್ಳಲಿ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.