BN Garudachar: ಹೆಡ್‌ಬುಷ್‌ನಲ್ಲಿರೋ ಕಮೀಷನರ್‌ ಗರುಡಚಾರ್ ಇವ್ರೆ ನೋಡಿ

ಹೆಡ್‌ಬುಷ್‌ ಸಿನಿಮಾದಲ್ಲಿ ಡಾಲಿ ಧನಂಜಯ್‌, ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲೂಸ್ ಮಾದ ಯೋಗಿ ಗಂಗ ಅನ್ನೋ ರೌಡಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ಕಮೀಷನರ್‌ ಗರುಡಚಾರ್ ಕೂಡಾ ಕಾಣಿಸಿಕೊಂಡಿದ್ದು, ಇದೀಗ ನಿಜವಾದ ನಿವೃತ್ತ ಕಮೀಷನರ್‌ ಗರುಡಚಾರ್ ಈ ಸಿನಿಮಾವನ್ನು ವೀಕ್ಷಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

First Published Oct 27, 2022, 1:50 AM IST | Last Updated Oct 27, 2022, 1:50 AM IST

ಡಾನ್ ಜಯರಾಜ್. ಒಂದ್ ಕಾಲದಲ್ಲಿ ಇಡೀ ಬೆಂಗಳೂರನ್ನ ನಡುಗಿಸಿದ್ದ ಅಂಡರ್‌ವರ್ಲ್ಡ್‌ ಜಗತ್ತಿನ ದೊರೆ. ಬೆಂಗಳೂರು ಭೂಗತ ಜಗತ್ತನ್ನ ಒಂದು ರೌಂಡ್ ಸುತ್ತು ಹೊಡೆದ್ರೆ ಇಂದಿಗೂ ಸಿಗೋ ಕುರುಹುಗಳೇನಾದ್ರು ಇದ್ರೆ ಅದು ಜಯರಾಜ್ ಮಾತ್ರ. ಜಯರಾಜ್ ಎಲ್ಲಿಂದೆಲ್ಲಾ ಹಫ್ತಾ ವಸೂಲಿ ಮಾಡುತ್ತಿದ್ದ ಅನ್ನೋದಕ್ಕೆ ಹಲವು ಕತೆಗಳು ಇವೆ. ಇದೀಗ ಈ ಡಾನ್ ಜಯರಾಜ್ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲೂ ಹೆಡ್ ಬುಷ್ ಸಿನಿಮಾ ಮೂಲಕ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಹೌದು! ಹೆಡ್‌ಬುಷ್‌ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಾಲಿ ಧನಂಜಯ್‌ ಇಲ್ಲಿ ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲೂಸ್ ಮಾದ ಯೋಗಿ ಗಂಗ ಅನ್ನೋ ರೌಡಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ಕಮೀಷನರ್‌ ಗರುಡಚಾರ್ ಕೂಡಾ ಕಾಣಿಸಿಕೊಂಡಿದ್ದು, ಇದೀಗ ನಿಜವಾದ ನಿವೃತ್ತ ಕಮೀಷನರ್‌ ಗರುಡಚಾರ್ ಈ ಸಿನಿಮಾವನ್ನು ವೀಕ್ಷಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಚಿತ್ರದ ಬಗೆಗಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment