ಕರಿಮಣಿ ಮಾಲೀಕನಾಗಬೇಕಿದ್ದವನೇ ಕೊಂದುಬಿಟ್ಟನಾ..? ತಾಳಿ ಕಟ್ಟಬೇಕಿದ್ದವನು ನೇಣುಬಿಗಿದಿದ್ದು ಯಾಕೆ ?

ಅವಳ ಹೆಣ ಹಾಕಿ ಮನೆಗೆ ಬಂದು ಮಲಗಿಬಿಟ್ಟ..!
ಹೆತ್ತವರ ಜೊತೆ ಸೇರಿ ಅವನೂ ಹುಡುಕಾಡಿದ್ದ..!
ಸಿಸಿ ಕ್ಯಾಮರಾದಲ್ಲಿ ಹಂತಕನ ಸುಳಿವು ಸೆರೆ..!

First Published Mar 23, 2024, 5:01 PM IST | Last Updated Mar 23, 2024, 5:01 PM IST

ಅವಳು ಮುಗ್ಧ ಹೆಣ್ಣು ಮಗಳು. ಬಡತನದಲ್ಲಿ ಹುಟ್ಟಿದ್ರೂ ಮನೆಯ ಜವಬ್ದಾರಿ ಹೊತ್ತಿದ್ಲು. ಹೆತ್ತವರ ಜೊತೆ ಸೇರಿಕೊಂಡು ಕಷ್ಟಪಟ್ಟು ದುಡಿಯುತ್ತಿದ್ದಳು. ಆದ್ರೆ ವಯಸ್ಸಿಗೆ ಬಂದಿದ್ದ ಆಕೆಯನ್ನ ಹೆತ್ತವರು ತಮ್ಮ ಸಂಬಂದಿಕನಿಗೇ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ರು. ಎಂಗೇಜ್‌ಮೆಂಟ್‌ ಕೂಡ ಮಾಡಿದ್ರು. ಆದ್ರೆ ನಿಶ್ಚಿತಾರ್ಥವಾಗಿ(Engagement) ಎರಡೇ ದಿನಕ್ಕೆ ಆ ಹೆಣ್ಣುಮಗಳು ನಾಪತ್ತೆ. ಎಲ್ಲಿ ಹುಡುಕಿದ್ರೂ ಆಕೆ ಸಿಗೋದೇ ಇಲ್ಲ. ಆದ್ರೆ 5 ದಿನದ ನಂತರ ಅವಳ ಡೆಡ್ಬಾಡಿ ಮಾವಿನ ತೋಪಿನಲ್ಲಿ ಸಿಕ್ಕಿತ್ತು. ಆಕೆಯನ್ನ ಯಾರೋ ಕೊಂದು(Murder) ಮಾವಿನ ಮರಕ್ಕೆ ನೇಣು ಹಾಕಿದ್ರು. ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಾಲತೇಶನ ಜೊತೆಗೆ ದೀಪಾ ಬೈಕ್ನಲ್ಲಿ ಹೋಗಿದ್ದಳು. ಇದು ಪೊಲೀಸರಿಗೆ(Police) ಗೊತ್ತಾಗುತ್ತೆ. ತಡಮಾಡದೇ ಅವನನ್ನ ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ಮಾಡ್ತಾರೆ.. ಆಗಲೇ ನೋಡಿ ಒಂದು ಭಯಾನಕ ಸತ್ಯ ಹೊರಬರೋದು. ಅವರಿಬ್ಬರೂ ಒಟ್ಟಿಗೆ ಆಡಿ ಬೆಳದವರಾದರೂ ಆಕೆಗೆ ಯಾವತ್ತೂ ಅವನ ಮೇಲೆ ಪ್ರೀತಿ ಹುಟ್ಟಿರಲಿಲ್ಲ. ಆದ್ರೆ ಆತ ಮಾತ್ರ ಅವಳನ್ನೇ ಮದುವೆಯಾಗ್ತೀನಿ ಅಂತ ಕನಸು ಕಂಡಿದ್ದ. ಇದೇ ಕಾರಣಕ್ಕೆ ಆತನ ಹೆತ್ತವರು ದೀಪಾ ಮನೆಯವರನ್ನ ಬಲವಂತ ಮಾಡಿ ಒಪ್ಪಿಸಿದ್ರು. ಇನ್ನೂ ದೀಪಾ ಕೂಡ ಬಲವಂತಕ್ಕೆ ಓಕೆ ಅಂದಿದ್ಲು. ನಿಶ್ಚಿತಾರ್ಥ ಕೂಡ ಮಾಡಿಕೊಂಡಳು. ಆದ್ರೆ ನಿಶ್ಚಿತಾರ್ಥದ ನಂತರ ಆಕೆಗೆ ಅವನು ಯಾವುದೇ ಕಾರಣಕ್ಕೂ ಬೇಡ ಅಂತನ್ನಿಸಿಬಿಟ್ಟಿತ್ತು. ಇದೇ ಕಾರಣಕ್ಕೆ ಅವನಿಗೆ ಇರೋ ವಿಷಯವನ್ನ ಹೇಳಿಬಿಡೋಣ ಅಂತ ಆಕೆಯೇ ಅವನಿಗೆ ಕಾಲ್ ಮಾಡಿ ಕರೆಸಿಕೊಂಡಿದ್ದಳು.. ಇರೋ ವಿಷಯವನ್ನೆಲ್ಲಾ ಹೇಳಿದಳು.. ಆದ್ರೆ ಯಾವಾಗ ನೀನು ಇಷ್ಟವೇ ಇಲ್ಲ ಅಂದಳೋ ಅವಳನ್ನೇ ಮುಗಿಸಲು ಆತ ರೆಡಿಯಾಗಿಬಿಟ್ಟ.

ಇದನ್ನೂ ವೀಕ್ಷಿಸಿ:  ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಲಿಲ್ಲ ಅಂದ್ರೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ: ಶಾಸಕ ಎಸ್‌.ಆರ್‌ ಶ್ರೀ‌ನಿವಾಸ್‌