ಪೊಲೀಸ್ ಮರ್ಮಾಂಗಕ್ಕೆ ಒದ್ದು ತಪ್ಪಿಸಿಕೊಳ್ಳಲು ಯತ್ನ: ಕೋಟೆಕಾರ್ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡೇಟು

ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮುರುಗನ್ ಡಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲದ ಅಜ್ಜಿನಡ್ಕದಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Anusha Kb  | Updated: Feb 1, 2025, 7:03 PM IST

ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಸ್ಥಳ  ಮಹಜರ್ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿ ಕೊಳ್ಳಲು ಯತ್ನಿಸಿದ ದರೋಡೆ‌ ಪ್ರಕರಣದ‌ ಆರೋಪಿ ಮುರುಗನ್ ಡಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.  ದರೋಡೆ ಪ್ಕರಣದ ಪ್ರಮುಖ ಆರೋಪಿ ಮುರುಗನ್ ಡಿ ಕಾಲಿಗೆ  ಪೊಲೀಸರು ಗುಂಡು ಹಾರಿಸಿದ್ದು,  ಮಂಗಳೂರು ಹೊರವಲಯದ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ಘಟನೆ ನಡೆದಿದೆ. ಈಗ ಗಾಯಾಳು ಆರೋಪಿ ಮುರುಗನ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಾಲ್ ಮಾಹಿತಿ ನೀಡಿದ್ದು, ದರೋಡೆ ಪ್ರಕರಣದಲ್ಲಿ ಆರೋಪಿ ಮುರುಗನ್ ಡಿ. ದರೋಡೆಗೆ ಬಳಸಿದ್ದ ಪಿಸ್ತೂಲನ್ನು ಬಚ್ಚಿಟ್ಡಿದ್ದ,  ಅದನ್ನು ರಿಕವರಿ ಮಾಡಲು ಆತನನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು ಈ ವೇಳೆ ಆತ ಪೊಲೀಸ್ ಕಾನ್ಸ್ಟೇಬಲ್ ಮರ್ಮಾಂಗಕ್ಕೆ ಒದ್ದು ತಪ್ಪಿಸಿಕೊಳ್ಳೋಕೆ ಯತ್ಮಿಸಿದ್ದಾನೆ. ಈ ವೇಳೆ ಪಿಸಿ ಮಂಜುನಾಥ್ ನಂ 2386 ಅವರಿಗೆ ಗಾಯವಾಗಿದೆ.  ಇದರಿಂದ ಆರೋಪಿ ಮುರುಗನ್ ಡಿ ದೇವರ್ ಕಾಲಿಗೆ  ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣಅವರು ಶೂಟ್ ಮಾಡಿದ್ದಾರೆ. ಎಂದು ಕಮೀಷನರ್‌ ಮಾಹಿತಿ ನೀಡಿದ್ದಾರೆ. 
 

Read More...