Asianet Suvarna News Asianet Suvarna News

ಹಾವೇರಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಸಿಎಂ ಬರ್ತಿದ್ದಾರೆ ಅಂತ ಸಂತ್ರಸ್ತೆ ಶಿಫ್ಟ್ ಮಾಡಿದ್ರಾ..?

ಸಾಂತ್ವಾನ ಕೇಂದ್ರದ ಮುಖ್ಯಸ್ತೆಯಿಂದ ಶಾಕಿಂಗ್ ಮಾಹಿತಿ..!
ನ್ಯಾಯ ಕೊಡಿಸಬೇಕಿದ್ದವರಿಂದಲೇ ಅನ್ಯಾಯ ನಡೀತಿದ್ಯಾ..?
ನೈಜ ಆರೋಪಿಗಳನ್ನು ಬಿಟ್ಟು, ಅಮಾಯಕರ ಬಂಧಿಸಿದ್ರಾ..?

ಆವತ್ತು ಅದು ನೈತಿಕ ಪೊಲೀಸ್ ಗಿರಿ ಪ್ರಕರಣ(Moral policing). ಆದ್ರೆ ಇವತ್ತು ಅದು ಗ್ಯಾಂಗ್‌ ರೇಪ್(Gang Rape) ಪ್ರಕರಣ. ಸರಿಯಾಗಿ ವಾರದ ಹಿಂದೆ ನಾವು ಹಾವೇರಿಯಲ್ಲಿ(Haveri) ನಡೆದಿದ್ದ ನೈತಿಕ ಪೊಲೀಸ್ಗಿರಿಯ ಪ್ರಕರಣದ ಬಗ್ಗೆ ಹೇಳಿದ್ವಿ. ಆವತ್ತು ಮುಸ್ಲಿಂ ಯುವಕರ(Muslim Youths) ಗುಂಪೊಂದು ಹೋಟೆಲ್ ರೂಮ್ ಒಳಗೆ ನುಗ್ಗಿ ಆ ರೂಮಿನಲ್ಲಿದ್ದ ಮುಸ್ಲಿಂ ಮಹಿಳೆಯನ್ನ ಮತ್ತು ಹಿಂದೂ(Hindu) ಪುರುಷನನ್ನ ಇನ್ನಿಲ್ಲದಂತೆ ಥಳಿಸಿದ್ರು. ಅಷ್ಟೇ ಅಲ್ಲ ನಿರ್ಜನ ಪ್ರದೇಶಕ್ಕೆ ಆ ಹೆಣ್ಣುಮಗಳನ್ನ ಕರೆದೊಯ್ದು ಹಲ್ಲೆ ನಡೆಸಿದ್ರು ಅಂತ ಪ್ರಕರಣ ದಾಖಲಾಗಿತ್ತು. ಆದ್ರೆ ಇವತ್ತು ಇದೇ ಪ್ರಕರಣಕ್ಕೆ ಸಾಕಷ್ಟು ತಿರುವುಗಳು ಸಿಕ್ಕಿದ್ದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆಯಾವಾಗ ಸ್ವತಹ ಸಂತ್ರಸ್ತ ಮಹಿಳೆಯೇ ಬಂದು ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಅಂತ ಹೆಳ್ತಾಳೋ ಇಡೀ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿಬಿಡುತ್ತೆ. ನೋಡ ನೋಡ್ತಿದ್ದಂತೆ ರಾಜಕೀಯ ಎಂಟ್ರಿಯಾಗುತ್ತೆ.ಯಾವಾಗ ಸಂತ್ರಸ್ತೆ ಯುವತಿ ಗ್ಯಾಂಗ್ ರೇಪ್ ಬಾಂಬ್ ಸಿಡಿಸಿದ್ಲೋ ರಾತ್ರೋ ರಾತ್ರಿ ಕಾಂಗ್ರೆಸ್ ಶಾಸಕರು ಸಾಂತ್ವಾನ ಕೇಂದ್ರಕ್ಕೆ ತೆರಳಿದ್ರು. ಆದ್ರೆ ಬೆಳಗಾಗುವಷ್ಟರಲ್ಲಿ ಆ ಹೆಣ್ಣುಮಗಳನ್ನ ಹಾವೇರಿಯಿಂದಲೇ ಶಿಫ್ಟ್ ಮಾಡಿದ್ರು. ಕಾರಣ ಆವತ್ತು ಸಿ.ಎಂ ಸಾಹೇಬ್ರ ಹಾವೇರಿ ಪ್ರವಾಸ ಇತ್ತು.ಇನ್ನೂ ಇದನ್ನೇ ಏನ್ಕ್ಯಾಶ್ ಮಾಡಿಕೊಳ್ಳಲು ಮುಂದಾದ ಬಿಜೆಪಿ. ಸರ್ಕಾರ ವಿರುದ್ಧ ವಾಕ್ದಾಳಿ ನಡೆಸಿದ್ರು. ಹೀಗೆ ಒಂದು ನೈತಿಕ ಪೊಲೀಸ್ಗಿರಿ ಕೊನೆಯಲ್ಲಿ ರಾಜಕೀಯ ಲೇಪನ ಪಡೆದುಕೊಳ್ಳುವಂತಾಯ್ತು.. ಆದ್ರೆ ಈಗ ಮಹಿಳೆ ಇದ್ದ ಸಾಂತ್ವಾನ ಕೇಂದ್ರದ ಮುಖ್ಯಸ್ತೆ ಇವತ್ತು ಒಂದು ಶಾಕಿಂಗ್ ಮಾಹಿತಿ ಕೊಟ್ಟಿದ್ದು, ಪೊಲೀಸರ ಮೇಲೆಯೇ ಅನುಮಾನ ಬರುವಂತೆ ಮಾಡಿಬಿಟ್ಟಿದೆ. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಹಂತಹಂತದಲ್ಲೂ ಕಾಣಸಿಗುತ್ತೆ. ಇನ್ನೂ ಮಾಡಿದ ತಪ್ಪನ್ನ ಮುಚ್ಚಿಹಾಕಲು ಪ್ರಕರಣದ ಇನ್ವೆಸ್ಟಿಗೇಷನ್ ಆಫೀಸರ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಅಭಿಮಾನಿಗಳ ಕಷ್ಟಕ್ಕೆ ಹೆಗಲಾದ ನಟ ಯಶ್: ಅಗಲಿದ ಫ್ಯಾನ್ಸ್ ಕುಟುಂಬಕ್ಕೆ ರಾಕಿಂಗ್ ಸ್ಟಾರ್ ನೆರವು!

Video Top Stories